Banaras Movie Review: ಇದು ‘ಮಾಯಾ’ಗಂಗೆಯ ಬನಾರಸ್; ಝೈದ್ ಖಾನ್​ ಕ್ಲಾಸ್-ಮಾಸ್

‘ಬನಾರಸ್’​ ಸಿನಿಮಾ ವಿಮರ್ಶೆ: ಒಂದೊಳ್ಳೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡಬೇಕು ಎಂಬುದು ಅನೇಕರ ಬಯಕೆ ಆಗಿರುತ್ತದೆ. ಝೈದ್ ಖಾನ್ ಕೂಡ ಇದೇ ರೀತಿಯ ಕನಸು ಕಂಡವರು. ಆ ಕನಸಿಗೆ ಜಯತೀರ್ಥ ಅವರು ಉತ್ತಮ ಕಥೆಯೊಂದಿಗೆ ಸಾಥ್ ನೀಡಿದ್ದಾರೆ.

Banaras Movie Review: ಇದು ‘ಮಾಯಾ’ಗಂಗೆಯ ಬನಾರಸ್; ಝೈದ್ ಖಾನ್​ ಕ್ಲಾಸ್-ಮಾಸ್
ಝೈದ್-ಸೋನಲ್
Follow us
ರಾಜೇಶ್ ದುಗ್ಗುಮನೆ
| Updated By: ಸುಷ್ಮಾ ಚಕ್ರೆ

Updated on: Nov 04, 2022 | 9:51 AM

ಸಿನಿಮಾ: ಬನಾರಸ್

ನಟನೆ: ಝೈದ್ ಖಾನ್, ಸೋನಲ್​, ಸುಜಯ್ ಶಾಸ್ತ್ರಿ, ದೇವರಾಜ್​, ಅಚ್ಯುತ್ ಕುಮಾರ್ ಮೊದಲಾದವರು

ನಿರ್ದೇಶನ: ಜಯತೀರ್ಥ

ನಿರ್ಮಾಣ: ಎನ್​.ಕೆ. ಪ್ರೊಡಕ್ಷನ್

ಸಂಗೀತ: ಅಜನೀಶ್ ಬಿ. ಲೋಕನಾಥ್

ಸ್ಟಾರ್: 3.5/5

ಟೈಮ್ ಟ್ರಾವೆಲಿಂಗ್ ಕಥೆ ಆಧರಿಸಿ ಎಲ್ಲಾ ಭಾಷೆಗಳಲ್ಲೂ ಒಂದಷ್ಟು ಸಿನಿಮಾಗಳು ಬಂದಿವೆ. ಹಾಲಿವುಡ್​ನಲ್ಲಂತೂ ಈ ಬಗ್ಗೆ ಹಲವು ಚಿತ್ರಗಳು ಸಿಗುತ್ತವೆ. ಪ್ರತಿ ಚಿತ್ರದಲ್ಲೂ ಇದೇ ವಿಚಾರ ಇಟ್ಟುಕೊಂಡು ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಲಾಗಿದೆ. ಟೈಮ್ ಟ್ರಾವೆಲಿಂಗ್ ವಿಚಾರ ಇರುವ ‘ಬನಾರಸ್’ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡಿದ್ದು, ಶಾಸಕ ಜಮೀರ್ ಅಹ್ಮದ್ ಮಗ ಝೈದ್ ಖಾನ್ ನಟಿಸಿದ್ದಾರೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.

ತಾಯಿಯನ್ನು ಕಳೆದುಕೊಂಡ ಸಿದ್ದಾರ್ಥ್ ಸಿಂಹಗೆ (ಝೈದ್ ಖಾನ್) ತಂದೆ ಅಜಯ್ ಸಿಂಹನೇ (ದೇವರಾಜ್​) ಜಗತ್ತು. ಈ ಜಗತ್ತಿಗೆ ದನಿ (ಸೋನಲ್) ಎಂಟ್ರಿ ಆಗುತ್ತದೆ. ಆಗ ಸಿದ್ದಾರ್ಥ್ ಜಗತ್ತು ಸಂಪೂರ್ಣವಾಗಿ ಬದಲಾಗುತ್ತದೆ. ಅಷ್ಟಕ್ಕೂ ಸಿದ್ದಾರ್ಥ್ ಲೈಫ್​ನಲ್ಲಿ ದನಿ ಹೇಗೆ ಎಂಟ್ರಿ ಆಗುತ್ತಾಳೆ. ಈ ಎಂಟ್ರಿ ಬಳಿಕ ಸಿದ್ದಾರ್ಥ್ ಹೇಗೆ ಟೈಮ್ ಟ್ರಾವೆಲಿಂಗ್ ಎಂಬ ಚಕ್ರವ್ಯೂಹದ ಒಳಗೆ ಹೋಗುತ್ತಾನೆ ಎಂಬುದನ್ನು ಸಿನಿಮಾದಲ್ಲೇ ನೋಡಿ ತಿಳಿದುಕೊಳ್ಳಬೇಕು.

ಜಯತೀರ್ಥ ಅವರು ಸಿನಿಮಾದಿಂದ ಸಿನಿಮಾಗೆ ಭಿನ್ನ ರೀತಿಯ ಕಥೆಗಳ ಮೂಲಕ ಬರುತ್ತಾರೆ. ‘ಬನಾರಸ್’ ಚಿತ್ರ ನೋಡಿದವರಿಗೂ ಅದೇ ಫೀಲ್ ಸಿಗುತ್ತದೆ. ಕನ್ನಡದ ಪಾಲಿಗೆ ಈ ರೀತಿಯ ಕಥೆ ಬಂದಿದ್ದು ತುಂಬಾನೇ ಕಡಿಮೆ. ಟೈಮ್ ಟ್ರಾವೆಲಿಂಗ್ ವಿಚಾರದ ಎಳೆಯನ್ನೇ ಇಟ್ಟುಕೊಂಡು ಸಾಗುವ ಕಥೆಯಲ್ಲಿ ಆರಂಭದಲ್ಲೇ ಒಂದು ಟ್ವಿಸ್ಟ್ ಇದೆ. ಈ ಟ್ವಿಸ್ಟ್​ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್ ಎದುರಾಗುತ್ತದೆ. ಅಂತ್ಯದಲ್ಲಿ ಒಂದು ದೊಡ್ಡ ತಿರುವಿನೊಂದಿಗೆ ಸಿನಿಮಾ ಕೊನೆಗೊಳ್ಳುತ್ತದೆ.

ಒಂದೊಳ್ಳೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡಬೇಕು ಎಂಬುದು ಅನೇಕರ ಬಯಕೆ ಆಗಿರುತ್ತದೆ. ಝೈದ್ ಖಾನ್ ಕೂಡ ಇದೇ ರೀತಿಯ ಕನಸು ಕಂಡವರು. ಆ ಕನಸಿಗೆ ಜಯತೀರ್ಥ ಅವರು ಉತ್ತಮ ಕಥೆಯೊಂದಿಗೆ ಸಾಥ್ ನೀಡಿದ್ದಾರೆ. ಮೊದಲ ಚಿತ್ರದಲ್ಲೇ ಝೈದ್ ಖಾನ್ ಅವರು ಉತ್ತಮ ನಟನೆ ತೋರಿದ್ದಾರೆ. ಅವರಿಗೆ ಚಿತ್ರದಲ್ಲಿ ಪಾತ್ರ ಸರಿಯಾಗಿ ಹೊಂದಿಕೆ ಆಗಿದೆ. ಕ್ಲಾಸ್ ಆ್ಯಂಡ್ ಮಾಸ್ ಆಗಿ ಝೈದ್ ಖಾನ್ ಇಷ್ಟ ಆಗುತ್ತಾರೆ. ಅವರ ಸ್ಟೈಲಿಶ್ ಲುಕ್ ಗಮನ ಸೆಳೆಯುತ್ತದೆ. ಎಲ್ಲಿಯೂ ಬಿಲ್ಡಪ್ ಕೊಡದೆ, ಚಿತ್ರದ ಕಥೆಗೆ ತಕ್ಕಂತೆ ಹೀರೋನ ಪಾತ್ರ ಸಾಗುತ್ತದೆ ಅನ್ನೋದು ಖುಷಿಯ ವಿಚಾರ. ಈ ವಿಚಾರದಲ್ಲಿ ನಿರ್ದೇಶಕ ಜಯತೀರ್ಥ ಅವರ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಬೇಕು. ಟೈಮ್ ಟ್ರಾವೆಲಿಂಗ್ ವಿಚಾರದ ಜತೆಗೆ ಒಂದೊಳ್ಳೆಯ ಪ್ರೇಮಕಥೆಯನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಸೋನಲ್ ಅವರು ಗಾಯಕಿ ಪಾತ್ರದಲ್ಲಿ ಇಷ್ಟವಾಗುತ್ತಾರೆ. ‘ಬೆಳಕಿನ ಕವಿತೆ..’ ಹಾಡಲ್ಲಿ ಝೈದ್ ಖಾನ್ ಜತೆ ಮೈಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದಾರೆ ಸೋನಲ್. ತೆರೆಮೇಲೆ ಅವರ ಕ್ಯೂಟ್​ನೆಸ್​ ಇಷ್ಟವಾಗುತ್ತದೆ. ಅಚ್ಯುತ್ ಕುಮಾರ್, ದೇವರಾಜ್, ಸಪ್ನಾ ರಾಜ್ ಪೋಷಕರ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಅಚ್ಯುತ್ ಕುಮಾರ್ ಅವರ ಪಾತ್ರ ಸ್ವಲ್ಪ ಹೊತ್ತೇ ಬಂದರೂ ಅದಕ್ಕೆ ದೊಡ್ಡ ತೂಕ ಇದೆ. ಶಂಬು ಆಗಿ ಸುಜಯ್ ಶಾಸ್ತ್ರಿ ನಗಿಸುತ್ತಾರೆ. ಸಪ್ನಾ ರಾಜ್ ಕೂಡ ಚಿಕ್ಕ ಪಂಚಿಂಗ್​ ಲೈನ್​ನಲ್ಲಿ ನಗು ಉಕ್ಕಿಸುತ್ತಾರೆ.

‘ಮಾಯಾ ಗಂಗೆ..’, ‘ಬೆಳಕಿನ ಕವಿತೆ..’ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿದೆ. ಇವುಗಳು ಪ್ರೇಕ್ಷಕರ ಕಿವಿಯಲ್ಲಿ ಗುನುಗುತ್ತವೆ. ಜಮೀರ್ ಅಹ್ಮದ್ ಸೇರಿ ಅನೇಕರ ಮೀಮ್ ಡೈಲಾಗ್​ನ ‘ಟ್ರೋಲ್​ ಸಾಂಗ್​..’ನಲ್ಲಿ ಬಳಕೆ ಮಾಡಿದ್ದು ವಿಶೇಷ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಕೆಲಸಕ್ಕೆ ಹೆಚ್ಚು ಅಂಕ ಸಿಗುತ್ತದೆ. ಅದ್ವೈತ್​ ಗುರುಮೂರ್ತಿ ಕ್ಯಾಮೆರಾದಲ್ಲಿ ಬನಾರಸ್ ಮತ್ತಷ್ಟು ಚೆಂದವಾಗಿ ಕಾಣಿಸಿದೆ. ಹಲವು ಕಡೆಗಳಲ್ಲಿ ಜೀವನದ ಫಿಲಾಸಫಿಗಳನ್ನು ಹೇಳಲಾಗಿದೆ. ಸಾವು-ಬದುಕಿನ ವಿಚಾರ ಚರ್ಚೆ ಆಗಿದೆ.

ನಿರ್ದೇಶಕ ಜಯತೀರ್ಥ ಅವರು ಒಂದು ಹೊಸ ಫ್ಲೇವರ್​ನ ಕಥೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಥೆಯ ಮೊದಲಾರ್ಧ ನಿಧಾನವಾಗಿ ಹರಿಯುವ ಗಂಗೆಯಂತೆ ಕಂಡರೆ, ದ್ವಿತೀಯಾರ್ಧ ವೇಗದ ಗಂಗೆಯಾಗುತ್ತಾಳೆ. ಅಲ್ಲಲ್ಲಿ ನಿರೂಪಣೆ ನಿಧಾನ ಎನಿಸುತ್ತದೆ. ನಿರೂಪಣೆಯನ್ನು ಮತ್ತಷ್ಟು ಬಿಗಿ ಮಾಡಲು ನಿರ್ದೇಶಕರಿಗೆ ಅವಕಾಶ ಇತ್ತು. ಈ ಚಿತ್ರ ಟೈಮ್​ ಟ್ರಾವೆಲಿಂಗ್​ ಆಧರಿಸಿ ಬಂದ ತಮಿಳಿನ ‘ಮಾನಾಡು’ ಚಿತ್ರವನ್ನು ಅಲ್ಲಲ್ಲಿ ನೆನಪಿಸುತ್ತದೆ. ಆದರೆ, ‘ಮಾನಾಡು’ ಚಿತ್ರಕ್ಕಿಂತ ಮೊದಲೇ ಈ ಸಿನಿಮಾ ಶೂಟ್ ಆಗಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ