Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ

Rishab Shetty | Jaggesh: ‘ಕಡೆಯ 25 ನಿಮಿಷ ನಾನು ಎಲ್ಲಿರುವೆ ಅಂತ ಮರೆತು ಹೋಯಿತು. ಚಿತ್ರ ನೋಡಿದ ಮೇಲೆ ದೇಹ, ಮನಸ್ಸು ಮೌನವಾಯಿತು’ ಎಂದಿದ್ದಾರೆ ಜಗ್ಗೇಶ್​.

Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
ರಿಷಬ್ ಶೆಟ್ಟಿ, ಜಗ್ಗೇಶ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 19, 2022 | 7:30 AM

ಅನೇಕ ಸೆಲೆಬ್ರಿಟಿಗಳು ‘ಕಾಂತಾರ’ (Kantara) ಸಿನಿಮಾವನ್ನು ನೋಡಿ ಹೊಗಳುತ್ತಿದ್ದಾರೆ. ಪರಭಾಷೆಯ ನಟ-ನಟಿಯರು ಕೂಡ ಈ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಕನ್ನಡದ ಬಹುತೇಕ ಸ್ಟಾರ್​ ಕಲಾವಿದರು ರಿಷಬ್​ ಶೆಟ್ಟಿಗೆ (Rishab Shetty) ಮೆಚ್ಚುಗೆ ಸೂಚಿಸಿದ್ದಾರೆ. ಈಗ ‘ನವರಸ ನಾಯಕ’ ಜಗ್ಗೇಶ್​ (Jaggesh) ಅವರು ‘ಕಾಂತಾರ’ ನೋಡಿದ್ದಾರೆ. ಅದು ಕೂಡ ವಿದೇಶದಲ್ಲಿ. ಅಮೆರಿಕಕ್ಕೆ ತೆರಳಿರುವ ಅವರು ಅಲ್ಲಿಯೇ ಸಿನಿಮಾ ನೋಡಿದ್ದಾರೆ. ಬಳಿಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರ ಮಾಡಿಸಿದ್ದು’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಇದೊಂದು ಅದ್ಭುತ ಸಿನಿಮಾ’ ಎಂದು ಕೊಂಡಾಡುವುದರ ಜೊತೆಗೆ, ಈ ಚಿತ್ರದಲ್ಲಿ ತಮಗೆ ಏನೆಲ್ಲ ಇಷ್ಟ ಆಯ್ತು ಎಂಬುದನ್ನು ಅವರು ತಿಳಿಸಿದ್ದಾರೆ.

‘ಇಂದು ಅಮೆರಿಕದಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು, ನೋಡಿ ಬಂದೆ. ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ. ನನ್ನ ಪ್ರಕಾರ, ಇದು ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ/ನಿರ್ದೇಶಕ ರಿಷಬ್​ ಶೆಟ್ಟಿ ಹುಟ್ಟಿಬಂದ. ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ. ಕಡೆಯ 25 ನಿಮಿಷ ನಾನು ಎಲ್ಲಿರುವೆ ಅಂತ ಮರೆತು ಹೋಯಿತು’ ಎಂದಿದ್ದಾರೆ ಜಗ್ಗೇಶ್​.

ಇದನ್ನೂ ಓದಿ
Image
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Image
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

‘ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ, ಮನಸ್ಸು. ಹೊರಬಂದಾಗ ಮಂತ್ರಾಲಯ ನರಸಿಂಹಚಾರ್ ವಾಟ್ಸಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು. ನಂತರ ನನಗೆ ಅನ್ನಿಸಿದ್ದು, ಇದು ರಿಷಬ್​ ಮಾಡಿದ ಚಿತ್ರವಲ್ಲ. ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ, ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೇ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ. ದೇವರು ನೂರ್ಕಾಲ ಆಯುಷ್ಯ, ಆರೋಗ್ಯ ರಿಷಬ್​ಗೆ ಕೊಟ್ಟು, ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ. ಕಾಂತಾರ ಸಿನಿಮಾ ಅಲ್ಲ, ರೋಮಾಂಚನ ಅನುಭವ. ಇಡೀ ತಂಡಕ್ಕೆ ದೇವರ ಒಳ್ಳೆಯದು ಮಾಡಲಿ’ ಎಂದು ಜಗ್ಗೇಶ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

‘ಕಾಂತಾರ’ ಸಿನಿಮಾ ಈಗ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ. ಬೇರೆ ಭಾಷೆಗಳಿಗೆ ಡಬ್​ ಆಗಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿಂದಿಯಲ್ಲಿ ರಿಲೀಸ್​ ಆದ ಬಳಿಕ ಉತ್ತರ ಭಾರತದಲ್ಲಿನ ಸಿನಿಪ್ರಿಯರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಎಂಜಾಯ್​ ಮಾಡುತ್ತಿದ್ದಾರೆ. ಎಲ್ಲ ಭಾಷೆಗಳಿಂದ ಭರ್ಜರಿ ಕಲೆಕ್ಷನ್​ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ