AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSR Case Update: ಸುಶಾಂತ್​ ಸಾವಿನ ಕೇಸ್​ಗೆ ಟ್ವಿಸ್ಟ್​; ಹೊಸ ಸಾಕ್ಷಿ ಬಗ್ಗೆ ಗಮನ ನೀಡುವಂತೆ ಸಿಬಿಐಗೆ ಸಹೋದರಿ ಮನವಿ

Sushant Singh Rajput Case: ಕೂಪರ್​ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ರೂಪ್​ಕುಮಾರ್​ ಶಾ ಅವರು ಹೊಸ ವಿಚಾರಗಳನ್ನು ಬಯಲು ಮಾಡಿದ್ದಾರೆ. ಇದರಿಂದ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಂತೆ ಆಗಿದೆ.

SSR Case Update: ಸುಶಾಂತ್​ ಸಾವಿನ ಕೇಸ್​ಗೆ ಟ್ವಿಸ್ಟ್​; ಹೊಸ ಸಾಕ್ಷಿ ಬಗ್ಗೆ ಗಮನ ನೀಡುವಂತೆ ಸಿಬಿಐಗೆ ಸಹೋದರಿ ಮನವಿ
ಸುಶಾಂತ್ ಸಿಂಗ್ ರಜಪೂತ್
TV9 Web
| Edited By: |

Updated on: Dec 27, 2022 | 3:45 PM

Share

ನಟ ಸುಶಾಂತ್​ ಸಿಂಗ್ ರಜಪೂತ್​ (Sushant Singh Rajput) ಅವರನ್ನು ಅಭಿಮಾನಿಗಳು ಇಂದಿಗೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿಬಿಐ (CBI) ತಂಡ ತನಿಖೆ ನಡೆಸುತ್ತಿದೆ. ಸುಶಾಂತ್​ ಸಿಂಗ್ ರಜಪೂತ್​ ಅವರನ್ನು ಯಾರೋ ಕೊಲೆ ಮಾಡಿರಬಹುದು ಎಂಬುದು ಕುಟುಂಬದವರ ಮತ್ತು ಅಭಿಮಾನಿಗಳ ಅನುಮಾನ. ಆ ಅನುಮಾನಕ್ಕೆ ಪುಷ್ಟಿ ನೀಡುವಂತಹ ಘಟನೆ ಇತ್ತೀಚೆಗೆ ನಡೆದಿದೆ. ಸುಶಾಂತ್​ ಅವರ ಮೃತದೇಹದ ಮೇಲೆ ಗಾಯದ ಕಲೆಗಳಿದ್ದವು ಎಂದು ಕೂಪರ್​ ಆಸ್ಪತ್ರೆಯ ಸಿಬ್ಬಂದಿ ಬಾಯಿ ಬಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಸುಶಾಂತ್​ ಸಿಂಗ್ ರಜಪೂತ್​ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ (Shweta Singh Kirti) ಅವರು ಆಗ್ರಹಿಸಿದ್ದಾರೆ.

2020ರ ಜೂನ್​ 14ರಂದು ಸುಶಾಂತ್​ ಸಿಂಗ್ ರಜಪೂತ್​ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಬಳಿಕ ಮುಂಬೈನ ಕೂಪರ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಆ ವೇಳೆ ಕೆಲಸ ಮಾಡುತ್ತಿದ್ದ ಶವಾಗಾರದ ಸಿಬ್ಬಂದಿ ರೂಪ್​ಕುಮಾರ್​ ಶಾ ಅವರು ಈಗ ಹೊಸ ವಿಚಾರಗಳನ್ನು ಬಯಲು ಮಾಡಿದ್ದಾರೆ. ಸುಶಾಂತ್​ ದೇಹದ ಮೇಲೆ ಗಾಯದ ಗುರುತುಗಳು ಇದ್ದವು ಎಂದು ಅವರು ಹೇಳಿದ್ದಾರೆ. ಇದರಿಂದ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: Rhea Chakraborty: ಸುಶಾಂತ್​ ಸಿಂಗ್ ರಜಪೂತ್​​ ಕೇಸ್; ರಿಯಾ ಚಕ್ರವರ್ತಿ, ಶೋವಿಕ್​ ಚಕ್ರವರ್ತಿಗೆ ಹೆಚ್ಚಿತು ಸಂಕಷ್ಟ

ಇದನ್ನೂ ಓದಿ
Image
ಸುಶಾಂತ್​ ಸಿಂಗ್​ ನೆರೆ ಮನೆಯವನನ್ನು ಅರೆಸ್ಟ್​ ಮಾಡಿದ ಪೊಲೀಸರು; ಇದಕ್ಕಿದೆ ಡ್ರಗ್ಸ್​ ಲಿಂಕ್​
Image
‘ಪಾರ್ಟಿ ಮಾಡಿ ದುಡ್ಡು ಖರ್ಚು ಮಾಡಲು ಮದುವೆ ಆದೆ’; ಸುಶಾಂತ್​ ಮಾಜಿ ಪ್ರೇಯಸಿಯ ಅಚ್ಚರಿಯ ಹೇಳಿಕೆ
Image
Sushant Birthday: ಸುಶಾಂತ್​ ವಿಡಿಯೋ ಹಂಚಿಕೊಂಡು ಮಿಸ್​ ಯೂ ಎಂದ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ
Image
ರಾತ್ರಿ ಸುಶಾಂತ್​ ಜತೆ ವೈನ್​ ಕುಡಿಯುತ್ತ, ಸೋಲಿಗೆ ಕಾರಣ ಹುಡುಕಿದ್ದ ಘಟನೆ ನೆನಪಿಸಿಕೊಂಡ ಕೃತಿ ಸನೋನ್​

‘ಈ ಸಾಕ್ಷಿಯಲ್ಲಿ ಸತ್ಯ ಇರುವುದಾದರೆ ಈ ಬಗ್ಗೆ ಸಿಬಿಐ ಗಮನ ಹರಿಸಬೇಕು ಅಂತ ನಾವು ಒತ್ತಾಯಿಸುತ್ತೇವೆ. ನೀವು ನ್ಯಾಯಸಮ್ಮತವಾದ ತನಿಖೆ ಮಾಡುತ್ತೀರಿ ಎಂದು ನಾವು ಯಾವಾಗಲೂ ನಂಬಿದ್ದೇವೆ. ಇನ್ನೂ ಪ್ರಕರಣ ಅಂತ್ಯವಾಗಿಲ್ಲ ಎಂದು ನಮಗೆ ನೋವಾಗುತ್ತಿದೆ’ ಎಂದು ಶ್ವೇತಾ ಸಿಂಗ್​ ಕೀರ್ತಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಮಾತಿಗೆ ಅಭಿಮಾನಿಗಳು ಸಹಮತ ಸೂಚಿಸಿದ್ದಾರೆ.

ಇದನ್ನೂ ಓದಿ: Rhea Chakraborty: ಸುಶಾಂತ್​ ಸಿಂಗ್​ ರಜಪೂತ್​ಗೆ ಡ್ರಗ್ಸ್​ ನೀಡಿದ್ದೇ ರಿಯಾ ಚಕ್ರವರ್ತಿ: ಎನ್​ಸಿಬಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ

ರೂಪ್​ಕುಮಾರ್ ಶಾ ಹೇಳಿದ್ದೇನು?

‘ಬಟ್ಟೆಗಳನ್ನು ತೆಗೆದಾದ ಸುಶಾಂತ್​ ದೇಹದ ಮೇಲೆ ಹೊಡೆತದ ಗುರುತುಗಳು ಇದ್ದವು. ಕುತ್ತಿಗೆಯ ಎರಡು ಅಥವಾ ಮೂರು ಕಡೆ ಗಾಯದ ಕಲೆ ಇತ್ತು. ದೇಹದ ಮೇಲೆ ತೀವ್ರವಾದ ಗಾಯದ ಗುರುತುಗಳು ಇದ್ದವು. ವಿಡಿಯೋ ಚಿತ್ರೀಕರಣ ಆಗಬೇಕಿತ್ತು. ಆದು ಆಯಿತೋ ಇಲ್ಲವೋ ಗೊತ್ತಿಲ್ಲ. ಕೇವಲ ಫೋಟೋಗಳಲ್ಲಿ ಕೆಲಸ ಮಾಡುವಂತೆ ಸೀನಿಯರ್​ಗಳಿಗೆ ತಿಳಿಸಲಾಯ್ತು. ನಾವು ಹಾಗೇ ಕೆಲಸ ಮಾಡಿದೆವು’ ಎಂದು ರೂಪ್​ಕುಮಾರ್​ ಶಾ ಹೇಳಿದ್ದಾರೆ.

ಆತ್ಮಹತ್ಯೆಯಿಂದ ಸುಶಾಂತ್​ ಸಿಂಗ್ ರಜಪೂತ್​ ನಿಧನರಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಅನಿಸುತ್ತಿದೆಯಾದರೂ ಅಂತಿಮ ತನಿಖಾ ವರದಿ ಏನು ಹೇಳಲಿದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಸಿಬಿಐ ನೀಡಲಿರುವ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ