The Kerala Story: ಕೇರಳದ 32,000 ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎಂದ ಸಿನಿಮಾ ಟೀಸರ್ ಮೇಲೆ ಕೇಸ್
The Kerala Story teaser: ‘ದಿ ಕೇರಳ ಸ್ಟೋರಿ’ ಟೀಸರ್ ಸಖತ್ ವೈರಲ್ ಆಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಧರ್ಮದ ವಿಚಾರವನ್ನು ಇಟ್ಟುಕೊಂಡು ಮಾಡಿದ ಸಿನಿಮಾಗಳ ಕೊರಳಿಗೆ ವಿವಾದಗಳು ಹುಟ್ಟಿಕೊಳ್ಳುವುದು ಕಾಮನ್ ಎಂಬಂತಾಗಿದೆ. ಈಗ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಕೂಡ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಅದರಲ್ಲಿ ಪ್ರಸ್ತಾಪ ಮಾಡಲಾದ ವಿಚಾರಗಳು ಶಾಕಿಂಗ್ ಆಗಿವೆ. ಕೇರಳದಲ್ಲಿ 32 ಸಾವಿರ ಹುಡುಗಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ (Conversion) ಮಾಡಲಾಗಿದೆ ಹಾಗೂ ಅವರನ್ನು ವಿದೇಶಕ್ಕೆ ಕಳಿಸಿ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಡೈಲಾಗ್ ಈ ಟೀಸರ್ನಲ್ಲಿದೆ. ಇದು ವಿವಾದ ಹುಟ್ಟುಹಾಕಿದ್ದು, ಸೂಕ್ತ ತನಿಖೆ ನಡೆಸುವಂತೆ ಕೇರಳ ಪೊಲೀಸ್ ಮಹಾ ನಿರ್ದೇಶಕ ಅನಿಲ್ ಕಾಂತ್ ಆದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟಿ ಅದಾ ಶರ್ಮಾ (Adah Sharma) ಅವರು ನಟಿಸಿದ್ದಾರೆ.
‘ದಿ ಕೇರಳ ಸ್ಟೋರಿ’ ಟೀಸರ್ ಸಖತ್ ವೈರಲ್ ಆಗಿದೆ. ಕೇರಳವನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಕಾರಣದಿಂದ ಈ ಟೀಸರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ‘ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್ ಆಗಿತ್ತು. ನರ್ಸ್ ಆಗಿ ಜನರ ಸೇವೆ ಮಾಡಬೇಕು ಅಂತ ನಾನು ಬಯಸಿದ್ದೆ. ಈಗ ನಾನು ಫಾತಿಮಾ ಬಾ ಎಂಬ ಐಸಿಸ್ ಭಯೋತ್ಪಾದಕಿ ಆಗಿದ್ದೇನೆ. ಅಫ್ಘಾನಿಸ್ತಾನದ ಜೈಲಿನಲ್ಲಿ ಇದ್ದೇನೆ’ ಎಂಬ ಡೈಲಾಗ್ನೊಂದಿಗೆ ಈ ಟೀಸರ್ ಆರಂಭ ಆಗುತ್ತದೆ.
‘ನಾನು ಒಬ್ಬಳೇ ಅಲ್ಲ. ನನ್ನಂತಹ 32 ಸಾವಿರ ಹುಡುಗಿಯರು ಮತಾಂತರಗೊಂಡು ಸಿರಿಯಾ ಮತ್ತು ಯೆಮನ್ ಮರುಭೂಮಿಯಲ್ಲಿ ಸತ್ತಿದ್ದಾರೆ. ಕೇರಳದಲ್ಲಿ ಓರ್ವ ಸಿಂಪಲ್ ಹುಡುಗಿಯನ್ನು ಅಪಾಯಕಾರಿ ಟೆರೆರಿಸ್ಟ್ ಆಗಿ ಮಾಡುವ ಭಯಂಕರ ಆಟ ನಡೆದಿದೆ. ಅದು ಕೂಡ ಬಹಿರಂಗವಾಗಿ. ಇದನ್ನು ಯಾರೂ ತಡೆಯೋದಿಲ್ಲವೇ? ಇದು ನನ್ನ ಕಥೆ. ಇದು ಆ 32 ಸಾವಿರ ಹುಡುಗಿಯರ ಕಥೆ. ಇದು ಕೇರಳದ ಕಥೆ’ ಎಂಬ ಡೈಲಾಗ್ ಮೂಲಕ ಟೀಸರ್ ಕೊನೆಯಾಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:17 am, Wed, 9 November 22