ಭಗವದ್ಗೀತೆಯಂತಿರುವ ಪುಸ್ತಕದೊಳಗೆ ಬೈಬಲ್ -ಕುರಾನ್ ವೈಭವೀಕರಣ: ಮಲೆನಾಡಿನಲ್ಲಿ ಮತಾಂತರದ ಹೊಸ ತಂತ್ರ

ಮತಾಂತರಕ್ಕೆ ಪ್ರಚೋದನೆ ಪುಸ್ತಕ ಮಾರಾಟವಾಗುತ್ತಿದೆ. ಇದರೊಂದಿಗೆ ಮಲೆನಾಡಿನಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಈ ಪುಸ್ತಕದಲ್ಲಿ ಏನಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಭಗವದ್ಗೀತೆಯಂತಿರುವ ಪುಸ್ತಕದೊಳಗೆ ಬೈಬಲ್ -ಕುರಾನ್ ವೈಭವೀಕರಣ: ಮಲೆನಾಡಿನಲ್ಲಿ ಮತಾಂತರದ ಹೊಸ  ತಂತ್ರ
convert operation in bhadravathi
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 30, 2022 | 8:47 PM

ಶಿವಮೊಗ್ಗ: ಮಲೆನಾಡಿನಲ್ಲಿ ಕೆಲ ವರ್ಷಗಳಿಂದ ತಣ್ಣಗಾಗಿದ್ದ ಮತಾಂತರ ಪ್ರಕ್ರಿಯೆ ಇದೀಗ ಮತ್ತೆ ಆರಂಭಗೊಂಡಿದೆಯೇ ಎಂಬ ಅನುಮಾನ ಆರಂಭಗೊಂಡಿದೆ. ಹೌದು.. ಇದುವರೆಗೆ ಜನರಿಗೆ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವ ಕೆಲಸ ನಡೆಯುತಿತ್ತು. ಆದರೆ ಇದೀಗ ಜನರಿಗೆ ಅವರ ಧರ್ಮದ ಬಗ್ಗೆಯೇ ಕೀಳರಿಮೆ ಬೆಳೆಸಿ ಆ ಮೂಲಕ ಅವರನ್ನು ಅನ್ಯಧರ್ಮದತ್ತ ಸೆಳೆಯುವ ತಂತ್ರಗಾರಿಕೆ ಮಲೆನಾಡಿನಲ್ಲಿ ನಡೆಯುತ್ತಿದೆ. ಮಲೆನಾಡಿನಾದ್ಯಂತ ಮಾರಾಟವಾಗುತ್ತಿರುವ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕ. ಈ ಪುಸ್ತಕದಲ್ಲಿ ಏನಿದೆ? ಪುಸ್ತಕಕ್ಕೂ ಮತಾಂತರಕ್ಕೂ ಏನು ಸಂಬಂಧ ಕುರಿತು ಒಂದು ವರದಿ ಇಲ್ಲಿದೆ..

ಮಲೆನಾಡು ಜಿಲ್ಲೆ ಶಿವಮೊಗ್ಗದ ಹಾಗೂ ಭದ್ರಾವತಿ ಅವಳಿ ನಗರದಲ್ಲಿ ಉತ್ತರ ಭಾರತದ ಹರಿಯಾಣ ರಾಜ್ಯದಿಂದ ಯುವಕರು ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕವನ್ನು ವ್ಯಾಪಕವಾಗಿ ಮಾರಾಟ ಮಾಡುತಿದ್ದಾರೆ. ಈ ಪುಸ್ತಕದ ಮುಖಪುಟ ನೋಡಲು ಭಗದ್ಗೀತೆಯಂತೆಯೇ ಇದೆ. ಆದರೆ ಪುಸ್ತಕದ ಒಳಭಾಗದಲ್ಲಿ ಹಿಂದು ಧರ್ಮವನ್ನು ವಿಡಂಬಾತ್ಮಕವಾಗಿ ಬಿಂಬಿಸಲಾಗಿದೆ. ಇದಲ್ಲದೆ ಹಿಂದು ಧರ್ಮದ ದೇವರ ಗ್ರಂಥಗಳು ಸರಿಯಿಲ್ಲ. ಹಿಂದು ದೇವತೆಗಳು ಪೂಜೆಗೆ ಅರ್ಹರಲ್ಲ ಎಂಬ ಉಲ್ಲೇಖವನ್ನೂ ಮಾಡಲಾಗಿದೆ.

ಇದರ ಜೊತೆಗೆ ಬೈಬಲ್ ಹಾಗೂ ಕುರಾನ್ ಗ್ರಂಥಗಳನ್ನು ವೈಭವೀಕರಿಸಿರುವುದು ಹಿಂದು ಧರ್ಮಿಯರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗೆ ಭದ್ರಾವತಿ ನಗರದ ರಂಗಪ್ಪ ವೃತ್ತದಲ್ಲಿ ಸಿಕ್ಕಿಬಿದ್ದ ಪುಸ್ತಕ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಭಜರಂಗದಳದ ಕಾರ್ಯಕರ್ತರು ಹಿಡಿದು ಹಳೇ ನಗರ ಪೊಲೀಸರಿಗೆ ಕೊಟ್ಟಿದ್ದಾರೆ. ಹೀಗೆ ಹಿಂದೂ ಧರ್ಮದ ಕುರಿತು ಅಪಪ್ರಚಾರ ಮತ್ತು ಮತಾಂತರಕ್ಕೆ ಪ್ರಚೋದನೆಯನ್ನು ಈ ಪುಸ್ತದಲ್ಲಿದೆ ಎಂದು ಭಜರಂಗದ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕವನ್ನು ದೆಹಲಿಯ ಕಬೀರ್ ಪಬ್ಲಿಕೇಷನ್ ನವರು ಮುದ್ರಿಸಿದ್ದಾರೆ‌. ಹೀಗೆ ಮುದ್ರಣವಾಗಿರುವ ನೂರು ರೂಪಾಯಿ ಮುಖಬೆಲೆಯ ಪುಸ್ತಕಗಳನ್ನು ಮಲೆನಾಡಿನಲ್ಲಿ ಕೇವಲ ಹತ್ತು ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಭದ್ರಾವತಿಯಲ್ಲಿ ಬಡವರ್ಗದವರಿಗೆ ಈ ಪುಸ್ತಕಗಳನ್ನು ಮಾರಾಟ ಮಾಡುತ್ತಿರುವಾಗ ಅನುಮಾನಗೊಂಡ ಹಿಂದೂಪರ ಕಾರ್ಯಕರ್ತರು ಪುಸ್ತಕವನ್ನು ಪರಿಶೀಲನೆ ನಡೆಸಿದಾಗ ಪುಸ್ತಕದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟ ಮಾಡುತ್ತಿದ್ದವರ ಮೇಲೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೂ ಶಿವಮೊಗ್ಗ ನಗರದಲ್ಲಿ ಹೀಗೆ ಅನ್ಯ ರಾಜ್ಯದಿಂದ ಬಂದಂತಹ ಯುವಕರು ಈ ಪುಸ್ತಕವನ್ನು ಮಾರಾಟ ಮಾಡುವ ಪ್ರಕರಣಗಳು ಬೆಳಕಿಗೆ ಬಂದಿವೆ. ಯಾವಾಗ ಭದ್ರಾವತಿಯಲ್ಲಿ ಭಜರಂಗದಳ ಕಾರ್ಯಕರ್ತರು ಈ ವಿವಾದಾತ್ಮಕ ಪುಸ್ತಕದಲ್ಲಿರುವ ಸಂಗತಿ ಹೊರಹಾಕಿದ್ದರಿಂದ ಸದ್ಯ ಎರಡು ನಗರದಲ್ಲಿ ಮತಾಂತರಕ್ಕೆ ಪ್ರಚೋದನೆ ಮಾಡುತ್ತಿರುವ ಪುಸ್ತಕರ ಹಂಚಿಕೆ ಸದ್ಯಕ್ಕೆ ಸ್ಥಗಿತವಾಗಿದೆ. ಅನ್ಯ ರಾಜ್ಯದಿಂದ ಬಂದಿರುವ ಯುವಕರು ಸದ್ಯ ಅಲರ್ಟ್ ಆಗಿದ್ದಾರೆ. ಪುಸ್ತಕ ಮಾರಾಟ ಮಾಡುವುದನ್ನು ನಿಲ್ಲಿಸುವ ಮೂಲಕ ಚಾಣಾಕ್ಷತನ ತೋರಿದ್ದಾರೆ. ಸದ್ಯ ಈ ಪುಸ್ತಕ ಕೊಟ್ಟಿದ್ದರು ಯಾರು.,.. ಯಾಕೇ ಇಷ್ಟೊಂದು ಕಡಿಮೆ ಬೆಲೆಗೆ ಪುಸ್ತಕ ಮಾರಾಟ ಮಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಬೇಕೆಂದು ಭಜರಂಗದಳ ಸಂಘಟನೆಯು ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.

ಒಟ್ಟಾರೆಯಾಗಿ ಮಲೆನಾಡಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಣ್ಣಗಾಗಿದ್ದ ಮತಾಂತರ ಪರ್ವ ಮತ್ತೆ ಇದೀಗ ಆರಂಭಗೊಂಡಿದೆಯೇ ಎಂಬ ಅನುಮಾನ ಆರಂಭಗೊಂಡಿದೆ. ಮೊದಲೇ ಮಲೆನಾಡಿನಲ್ಲಿ ಕೋಮುಗಲಭೆಯು ಸಣ್ಣ ಪುಟ್ಟ ವಿಷಯಕ್ಕೆ ಹೊತ್ತಿಕೊಳ್ಳುತ್ತಿವೆ. ಈ ನಡುವೆ ಈ ರೀತಿ ಮತಾಂತರಕ್ಕೆ ಪ್ರಚೋದನೆ ಪುಸ್ತಕ ಮಾರಾಟವು ಮತ್ತೆ ಮಲೆನಾಡಿನಲ್ಲಿ ಆತಂಕದ ವಾತಾವರಣ ಸೃಷ್ಟಿ ಮಾಡಿದೆ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

Published On - 8:45 pm, Sun, 30 October 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ