Lohitashwa: ಲೋಹಿತಾಶ್ವ ನಿಧನ: ಸ್ನೇಹಿತನನ್ನು ಕಳೆದುಕೊಂಡ ನೋವಲ್ಲಿ ಆ ದಿನಗಳ ಮೆಲುಕು ಹಾಕಿದ ಸುಂದರ್ ರಾಜ್
Lohitashwa Death: ಲೋಹಿತಾಶ್ವ ಅವರ ಪ್ರತಿಭೆ ಮತ್ತು ವ್ಯಕ್ತಿತ್ವದ ಬಗ್ಗೆ ಸುಂದರ್ ರಾಜ್ ಮಾತನಾಡಿದ್ದಾರೆ. ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಬಣ್ಣದ ಲೋಕದಲ್ಲಿ ಅಪಾರ ಅನುಭವ ಹೊಂದಿದ್ದ ಹಿರಿಯ ಕಲಾವಿದ ಲೋಹಿತಾಶ್ವ (Lohitashwa) ಅವರು 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಂಗಳವಾರ (ನ.8) ಬೆಂಗಳೂರಿನಲ್ಲಿ ಅವರು ಕೊನೆಯುಸಿರು ಎಳೆದರು. ಕುಮಾರಸ್ವಾಮಿ ಲೇಔಟ್ನಲ್ಲಿರುವ ಅವರ ನಿವಾಸದಲ್ಲಿ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆದಿದ್ದಾರೆ. ನಟ ಸುಂದರ್ ರಾಜ್ (Sundar Raj) ಮತ್ತು ಲೋಹಿತಾಶ್ವ ಅವರು ಸ್ನೇಹಿತರಾಗಿದ್ದರು. ಗೆಳೆಯನನ್ನು ಕಳೆದುಕೊಂಡ ನೋವಿನಲ್ಲೇ ತಮ್ಮ ಸ್ನೇಹವನ್ನು ಸುಂದರ್ ರಾಜ್ ಮೆಲುಕು ಹಾಕಿದ್ದಾರೆ. ಲೋಹಿತಾಶ್ವ ಅವರ ಪ್ರತಿಭೆ ಮತ್ತು ವ್ಯಕ್ತಿತ್ವದ ಬಗ್ಗೆ ಅವರು ಮಾತನಾಡಿದ್ದಾರೆ. ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಲೋಹಿತಾಶ್ವ ಅವರ ಅಂತ್ಯಕ್ರಿಯೆ (Lohitashwa Funeral) ಇಂದು (ನ.9) ನಡೆಯಲಿದೆ. ಸ್ನೇಹಿತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸುಂದರ್ ರಾಜ್ ಪ್ರಾರ್ಥಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 09, 2022 12:43 PM
Latest Videos