Lohitashwa Death: ‘ಬದುಕಿದರೆ ಹೀಗೆ ಬದುಕಬೇಕು ಎಂಬಂತೆ ಇದ್ದವರು ನಟ ಲೋಹಿತಾಶ್ವ’: ಗಿರಿಜಾ ಲೋಕೇಶ್
Lohitashwa Funeral: ಖ್ಯಾತ ನಟ ಲೋಹಿತಾಶ್ವ ಅವರ ನಿಧನಕ್ಕೆ ಗಿರಿಜಾ ಲೋಕೇಶ್ ಕಂಬನಿ ಮಿಡಿದಿದ್ದಾರೆ. ಇಂದು (ನ.9) ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಲೋಹಿತಾಶ್ವ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ (Lohitashwa) ಅವರು ಮಂಗಳವಾರ (ನ.8) ನಿಧನರಾದರು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಹಿರಿಯ ನಟಿ ಗಿರಿಜಾ ಲೋಕೇಶ್ (Girija Lokesh) ಅವರು ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಲೋಹಿತಾಶ್ವ ಬದುಕಿದ ರೀತಿಯನ್ನು ನೆನಪಿಸಿಕೊಂಡರು. ‘ಬದುಕಿದರೆ ಹೀಗೆ ಬದುಕಬೇಕು ಎಂಬಂತೆ ಬಾಳಿದ ವ್ಯಕ್ತಿ ಅವರು. ಪ್ರೊಫೆಸರ್ ಆಗಿ, ನಟನಾಗಿ, ಬರಹಗಾರನಾಗಿ, ಕೃಷಿಕನಾಗಿ ಅವರು ತುಂಬು ಜೀವನ ಕಳೆದಿದ್ದಾರೆ’ ಎಂದಿದ್ದಾರೆ ಗಿರಿಜಾ ಲೋಕೇಶ್. ಇಂದು (ನ.9) ತುಮಕೂರಿನ ತೊಂಡಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ (Lohitashwa Funeral) ನಡೆಯಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos