Elephant Video: ಬಿಸಿಲ ಬೇಗೆ ತಾಳಲಾರದೆ ನೀರಿನಲ್ಲಿ ಬಿದ್ದು ಆಟವಾಡಿದ ಆನೆ ಮರಿ
ಮೈಸೂರಿನ ಹೆಚ್ಡಿ ಕೋಟೆಯಲ್ಲಿರುವ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರದಲ್ಲಿ ಆನೆ ಮರಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಆನೆಗಳು ಎಷ್ಟು ರಾಜಗಾಂಭೀರ್ಯದಿಂದ ಇರುತ್ತವೋ ಕೆಲವೊಮ್ಮೆ ಅಷ್ಟೇ ಎಂಜಾಯ್ ಕೂಡ ಮಾಡುತ್ತವೆ. ಮೈಸೂರಿನ (Mysuru) ಹೆಚ್ಡಿ ಕೋಟೆಯಲ್ಲಿರುವ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರದಲ್ಲಿ ಆನೆ ಮರಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ. ಕಾಡಿನ ನೀರಿನ ಹೊಂಡದಲ್ಲಿ ಮಲಗಿಕೊಂಡು ಆಟವಾಡುತ್ತಿರುವ ಆನೆ ಮರಿಯ ವಿಡಿಯೋವನ್ನು ಸಫಾರಿಗೆ ಹೋದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ದಮ್ಮನಕಟ್ಟೆಯಲ್ಲಿ (Dammanakatte) ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಆನೆ ಮರಿ ಹೊರಳಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
Follow Us
Latest Videos
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ

