ವಾಯು ಎಂದು ಮಗನಿಗೆ ಹೆಸರಿಟ್ಟ ಸೋನಂ ಕಪೂರ್; ಕಾರಣ ವಿವರಿಸಿದ ನಟಿ

ಸೋನಂ ಹಾಗೂ ಆನಂದ್ ಮಗು ಎತ್ತಿಕೊಂಡಿದ್ದಾರೆ. ಎಲ್ಲರೂ ಹಳದಿ ಬಣ್ಣದ ಬಟ್ಟೆ ಧರಿಸಿದ್ದಾರೆ. ಸೋನಂ ಕೆನ್ನೆಗೆ ಆನಂದ್ ಮುತ್ತಿಡುತ್ತಿದ್ದಾರೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟವಾಗಿದೆ.

ವಾಯು ಎಂದು ಮಗನಿಗೆ ಹೆಸರಿಟ್ಟ ಸೋನಂ ಕಪೂರ್; ಕಾರಣ ವಿವರಿಸಿದ ನಟಿ
ಸೋನಂ ಕುಟುಂಬ
TV9kannada Web Team

| Edited By: Rajesh Duggumane

Sep 20, 2022 | 10:07 PM

ಸೆಲೆಬ್ರಿಟಿಗಳಿಗೆ ಮಗು ಜನಿಸಿದರೆ ಫ್ಯಾನ್ಸ್ ಸಾಕಷ್ಟು ಖುಷಿ ಪಡುತ್ತಾರೆ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ ಎಂಬಷ್ಟು ಸಂಭ್ರಮಿಸುತ್ತಾರೆ. ನೆಚ್ಚಿನ ನಟ/ನಟಿ ಮಗುವಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುತೂಹಲವೂ ಫ್ಯಾನ್ಸ್​ಗೆ ಇರುತ್ತದೆ. ನಟಿ ಸೋನಂ ಕಪೂರ್ ಅಹೂಜ ಹಾಗೂ ಪತಿ ಆನಂದ್​ ಅಹೂಜ (Anand Ahuja) ದಂಪತಿಗೆ ಆಗಸ್ಟ್ 20ರಂದು ಗಂಡು ಮಗು ಜನಿಸಿತ್ತು. ಅವರ ಫ್ಯಾನ್ಸ್ ವಲಯಕ್ಕೆ ಈ ವಿಚಾರ ಖುಷಿ ನೀಡಿತ್ತು. ಈಗ ಸೋನಂ ಕಪೂರ್ (Sonam Kapoor) ಮಗುವಿಗೆ ನಾಮಕರಣ ಮಾಡಿದ್ದಾರೆ. ಈ ದಂಪತಿ ಮಗುವಿಗೆ ವಾಯು ಕಪೂರ್​ ಅಹೂಜ ಎಂದು ನಾಮಕರಣ ಮಾಡಿದ್ದಾರೆ ಸೋನಂ ಕಪೂರ್. ಅಷ್ಟೇ ಅಲ್ಲ, ಈ ಹೆಸರಿನ ಅರ್ಥವೇನು ಎಂಬ ವಿಚಾರವನ್ನು ಸೋನಂ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೋನಂ ಹಾಗೂ ಆನಂದ್ ಮಗು ಎತ್ತಿಕೊಂಡಿದ್ದಾರೆ. ಎಲ್ಲರೂ ಹಳದಿ ಬಣ್ಣದ ಬಟ್ಟೆ ಧರಿಸಿದ್ದಾರೆ. ಸೋನಂ ಕೆನ್ನೆಗೆ ಆನಂದ್ ಮುತ್ತಿಡುತ್ತಿದ್ದಾರೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟವಾಗಿದೆ. ಇದರ ಜತೆಗೆ ಮಗುವಿಗೆ ಹೆಸರು ಇಟ್ಟಿರುವ ವಿಚಾರವನ್ನು ಘೋಷಣೆ ಮಾಡಿದ್ದಾರೆ ಸೋನಂ. ‘ನಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದು ಹೆಸರು ಇಟ್ಟಿದ್ದೇವೆ. ಹಿಂದೂ ಧರ್ಮಗ್ರಂಥದ ಪ್ರಕಾರ ವಾಯುವು ಪಂಚ ಭೂತಗಳಲ್ಲಿ ಒಂದು. ವಾಯುವು ಉಸಿರಾಟದ ದೇವತೆ, ಹನುಮಂತನ ತಂದೆ ವಾಯು’ ಎಂದು ಸೋನಂ ಕಪೂರ್ ಬರೆದುಕೊಂಡಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಅನಿಲ್​ ಕಪೂರ್ ಮಗಳು ಸೋನಂ​ ಕಪೂರ್. ಈ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಎಂಟ್ರಿ ಸಿಕ್ಕಿತ್ತು. 2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ಅವರಿಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಪ್ರೇಕ್ಷಕರು ಅವರ ನಟನೆಯನ್ನು ಅಷ್ಟು ಇಷ್ಟಪಡಲಿಲ್ಲ.

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್; ನಟಿಗೆ ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಕ್ಕಿತ್ತು. ಈಗ ಮಗುವಿಗೆ ದಂಪತಿ ನಾಮಕರಣ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada