ಶಿಲ್ಪಾ ಶೆಟ್ಟಿಗೆ ಕಾಡಿತ್ತು ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​; ಈ ಕಾಯಿಲೆಯ ಲಕ್ಷಣಗಳೇನು?

ಶಿಲ್ಪಾ ಶೆಟ್ಟಿ ಅವರಿಗೆ ಈ ಸಮಸ್ಯೆಯಿಂದ ಗರ್ಭ ಧರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರು 2020ರಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡರು.

ಶಿಲ್ಪಾ ಶೆಟ್ಟಿಗೆ ಕಾಡಿತ್ತು ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​; ಈ ಕಾಯಿಲೆಯ ಲಕ್ಷಣಗಳೇನು?
ಶಿಲ್ಪಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 20, 2022 | 1:30 PM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಯೋಗಾಸನಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಫಿಟ್ನೆಸ್​ ಬಗ್ಗೆ ಅವರಿಗೆ ಸಖತ್​ ಕಾಳಜಿ ಇದೆ. ಹಾಗಿದ್ದರೂ ಕೂಡ ಅವರಿಗೆ ಅನಾರೋಗ್ಯ ಕಾಡಿತ್ತು. ಎರಡು ವರ್ಷಗಳ ಹಿಂದೆ ಅವರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ರಿಯಾಲಿಟಿ ಶೋವೊಂದರಲ್ಲಿ ಬಾಯಿಬಿಟ್ಟಿದ್ದರು. ಶಿಲ್ಪಾ ಶೆಟ್ಟಿ ಅವರಿಗೆ ಈಗ 47 ವರ್ಷ ವಯಸ್ಸು. 2012ರ ಮೇ 21ರಂದು ಅವರು ಮೊದಲ ಪುತ್ರನಿಗೆ ಜನ್ಮ ನೀಡಿದ್ದರು. ಆದರೆ ಅವರು 2020ರಲ್ಲಿ ಎರಡನೇ ಮಗು ಪಡೆದಿದ್ದು ಬಾಡಿಗೆ ತಾಯಿ (Surrogate Mother) ಮೂಲಕ. ಅದಕ್ಕೆ ಕಾರಣವೇ ಅವರ ಅನಾರೋಗ್ಯ! ಹೌದು, ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್ (Antiphospholipid Syndrome)​ ಎಂಬ ಸಮಸ್ಯೆಯಿಂದ ಶಿಲ್ಪಾ ಶೆಟ್ಟಿ ಅವರು ಬಳಲಿದ್ದರು. ಆ ಕಾರಣದಿಂದ ಅವರು ಗರ್ಭ ಧರಿಸುವುದು ಕಷ್ಟ ಆಯಿತು.

ಶಿಲ್ಪಾ ಶೆಟ್ಟಿ ಅವರು ಸಿನಿಮಾ, ರಿಯಾಲಿಟಿ ಶೋ ಮೂಲಕ ಬ್ಯುಸಿ ಆಗಿದ್ದಾರೆ. ಅವರ ದಿನನಿತ್ಯದ ಜೀವನದ ಬಗ್ಗೆ ಅನೇಕ ಸಂಗತಿಗಳನ್ನು ಸೋಶಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಬಹಿರಂಗಪಡಿಸುವುದು ವಿರಳ. ಶಿಲ್ಪಾ ಶೆಟ್ಟಿ ಅವರು 2 ವರ್ಷಗಳ ಹಿಂದೆ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​ ಬಗ್ಗೆ ಹೇಳಿಕೊಂಡಿದ್ದರು.

ಇದನ್ನೂ ಓದಿ
Image
Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
Image
Shilpa Shetty: ಶೂಟಿಂಗ್ ವೇಳೆ ಅವಘಡ; ಮುರಿಯಿತು ಶಿಲ್ಪಾ ಶೆಟ್ಟಿ ಕಾಲು
Image
Shamita Shetty: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್​; ರಾಕೇಶ್​ ಬಾಪಟ್​ ಜತೆಗಿನ ಸಂಬಂಧ ಅಂತ್ಯ
Image
Shamita Shetty: ಲವ್​ ಮಾಡಿದ್ದು ಸಾಕಾಯ್ತು, ಇನ್ಮುಂದೆ ಜಸ್ಟ್​ ಫ್ರೆಂಡ್ಸ್​; ರಾಕೇಶ್​ ಬಾಪಟ್​ ಜತೆ ಶಿಲ್ಪಾ ಶೆಟ್ಟಿ ತಂಗಿಯ ಬ್ರೇಕಪ್​

ಏನಿದು ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​?

ದೇಹದ ರೋಗ ನಿರೋಧಕ ಶಕ್ತಿಯು ತನ್ನದೇ ಅಂಗಾಂಶಗಳ ವಿರುದ್ಧ ಆ್ಯಂಟಿಬಾಡಿಸ್​ ಬೆಳೆಯುವಂತೆ ಮಾಡುವ ಸ್ಥಿತಿಯೇ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ದೇಹವು ತನ್ನದೇ ಜೀವಕೋಶಗಳ ವಿರುದ್ಧ ಸಮರ ಸಾರುತ್ತದೆ. ನರಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಸೇರಿದಂತೆ ಅನೇಕ ತೊಂದರೆಗಳು ಎದುರಾಗಬಹುದು. ಇದು ಹೃದಯಾಘಾತಕ್ಕೂ ಕಾರಣ ಆಗಬಹುದು.

ಆರೋಗ್ಯ ಸಮಸ್ಯೆಯಿಂದ ಬಾಡಿಗೆ ತಾಯ್ತನದ ನಿರ್ಧಾರ:

ಶಿಲ್ಪಾ ಶೆಟ್ಟಿ ಅವರು 2020ರಲ್ಲಿ ಹೆಣ್ಣು ಮಗು ಪಡೆದರು. ಬಾಡಿಗೆ ತಾಯಿ ಮೂಲಕ ಮಗು ಪಡೆದ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಸುದ್ದಿ ಹಂಚಿಕೊಂಡರು. ತಾವೇ ಗರ್ಭ ಧರಿಸಬೇಕು ಎಂಬುದು ಅವರ ಬಯಕೆ ಆಗಿತ್ತು. ಆದರೆ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಗರ್ಭ ಧರಿಸುವಲ್ಲಿ ಒಂದೆರಡು ಬಾರಿ ವಿಫಲವಾದ ನಂತರ ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡರು.

ಪ್ರಸ್ತುತ ಶಿಲ್ಪಾ ಶೆಟ್ಟಿ ಅವರ ಕೈಯಲ್ಲಿ ಅನೇಕ ಆಫರ್​ಗಳಿವೆ. ಕೆಲವೇ ದಿನಗಳ ಹಿಂದೆ ಅವರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಯೋಗದ ಮೂಲಕ ಅವರು ಉಪಶಮನ ಕಾಣುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್