ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಪತಿ ರಾಜ್ ಕುಂದ್ರಾ ಬಗ್ಗೆ ಶಿಲ್ಪಾ ಶೆಟ್ಟಿಗೆ ಇರುವ ಅಭಿಪ್ರಾಯವೇ ಬೇರೆ
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ ನಂತರದಲ್ಲಿ ರಾಜ್ ಕುಂದ್ರಾಗೆ ಧೈರ್ಯದಿಂದ ಮುಖ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮುಖಕ್ಕೆ ಬಟ್ಟೆ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ.
ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಹಲವು ವಾರಗಳ ಕಾಲ ಅವರು ಜೈಲಿನಲ್ಲೇ ಇರಬೇಕಾಯಿತು. ಆ ದಿನಗಳು ಶಿಲ್ಪಾ ಶೆಟ್ಟಿಗೆ ಸಾಕಷ್ಟು ಚಾಲೆಂಜಿಂಗ್ ಆಗಿತ್ತು. ಸಾರ್ವಜನಿಕ ಬದುಕಿನಲ್ಲಿದ್ದಾಗ ಈ ರೀತಿ ಆದರೆ ಧೈರ್ಯದಿಂದ ಮುಖ ಎತ್ತಿಕೊಂಡು ಓಡಾಡುವುದು ಕಷ್ಟ. ಆದರೆ, ಶಿಲ್ಪಾ ಶೆಟ್ಟಿ ಇವೆಲ್ಲವನ್ನೂ ಎದುರಿಸಿ ಮುಂದೆ ಬಂದಿದ್ದಾರೆ. ಆದರೆ, ರಾಜ್ ಕುಂದ್ರಾ (Raj Kundra) ಅವರು ಈಗಲೂ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಪತಿ ಬಗ್ಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಶಿಲ್ಪಾ ರಿವೀಲ್ ಮಾಡಿದ್ದಾರೆ.
ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ ನಂತರದಲ್ಲಿ ರಾಜ್ ಕುಂದ್ರಾಗೆ ಧೈರ್ಯದಿಂದ ಮುಖ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮುಖಕ್ಕೆ ಬಟ್ಟೆ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಅವರಿಗೆ ಜನರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಶಿಲ್ಪಾ ಶೆಟ್ಟಿ ಆ ರೀತಿ ಅಲ್ಲ. ಪತಿಯ ತಪ್ಪನ್ನು ಮನ್ನಿಸಿ ಅವರ ಜತೆ ಜೀವನ ನಡೆಸುತ್ತಿದ್ದಾರೆ. ರಾಜ್ ಕುಂದ್ರಾ ಬರ್ತ್ಡೇ ಅಂಗವಾಗಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ.
ಪತಿ ಹಾಗೂ ಮಕ್ಕಳ ಜತೆ ಇರುವ ಫೋಟೋವನ್ನು ಶಿಲ್ಪಾ ಪೋಸ್ಟ್ ಮಾಡಿದ್ದಾರೆ. ‘ನೀವು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಕ್ಕೆ, ನನ್ನ ಮಕ್ಕಳಿಗೆ ತಂದೆ ಆಗಿದ್ದಕ್ಕೆ, ನನ್ನ ಪ್ರೀತಿ ಆಗಿದ್ದಕ್ಕೆ, ನನ್ನ ಶಕ್ತಿ ಆಗಿರುವುದಕ್ಕೆ ಧನ್ಯವಾದಗಳು. ಹ್ಯಾಪಿ ಬರ್ತ್ಡೇ. ನಿಮಗೆ ದೇವರು ಮತ್ತಷ್ಟು ಶಕ್ತಿ, ಆರೋಗ್ಯ, ರಕ್ಷಣೆ ನೀಡಲಿ’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
ರಾಜ್ ಕುಂದ್ರಾ ಅವರು ಜೈಲಿನಿಂದ ಹೊರ ಬಂದ ನಂತರದಲ್ಲಿ ಶಿಲ್ಪಾ ವಿಚ್ಛೇದನ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಸುದ್ದಿ ಸುಳ್ಳಾಗಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಶೂಟಿಂಗ್ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.