AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raju Srivastava Death: ಎಲ್ಲರನ್ನೂ ನಗಿಸಿ, ಸಾವಿನಲ್ಲಿ ಕಣ್ಣೀರು ಹಾಕಿಸಿದ ರಾಜು ಶ್ರೀವಾಸ್ತವ ಹೆಜ್ಜೆ ಗುರುತುಗಳು ಇಲ್ಲಿವೆ

Raju Srivastava Profile: ಕಿರುತೆರೆಯ ಜೊತೆ ರಾಜು ಶ್ರೀವಾಸ್ತವ ಅವರಿಗೆ ಒಳ್ಳೆಯ ನಂಟು ಬೆಳೆದಿತ್ತು. ಹಲವು ಶೋಗಳಲ್ಲಿ ಜನರನ್ನು ನಗಿಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.

Raju Srivastava Death: ಎಲ್ಲರನ್ನೂ ನಗಿಸಿ, ಸಾವಿನಲ್ಲಿ ಕಣ್ಣೀರು ಹಾಕಿಸಿದ ರಾಜು ಶ್ರೀವಾಸ್ತವ ಹೆಜ್ಜೆ ಗುರುತುಗಳು ಇಲ್ಲಿವೆ
ರಾಜು ಶ್ರೀವಾಸ್ತವ
TV9 Web
| Edited By: |

Updated on:Sep 21, 2022 | 12:15 PM

Share

ಸ್ಟ್ಯಾಂಡಪ್​ ಕಾಮಿಡಿ ಲೋಕದಲ್ಲಿ ಸ್ಟಾರ್​ ಆಗಿ ಮೆರೆದ ರಾಜು ಶ್ರೀವಾಸ್ತವ (Comedian Raju Srivastava) ಅವರು ಇನ್ನಿಲ್ಲ. ನೆಚ್ಚಿನ ಕಲಾವಿದನ ನಿಧನದಿಂದ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ರಾಜು ಶ್ರೀವಾಸ್ತವ ಅವರ ಅಗಲಿಕೆಗೆ ಸ್ನೇಹಿತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಕುಟುಂಬದವರ ಅಳಲು ಮುಗಿಲು ಮುಟ್ಟಿದೆ. ಕಾಮಿಡಿ ಶೋಗಳ ಮೂಲಕ, ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನೂ ನಗಿಸಿದ್ದ ರಾಜು ಶ್ರೀವಾಸ್ತವ (Raju Srivastava) ಅವರು ಮಧ್ಯದಲ್ಲೇ ಈ ರೀತಿ ಎಲ್ಲರಿಗೂ ಕಣ್ಣೀರು ಹಾಕಿಸಿ ಹೋಗುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. 58ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿದ್ದಾರೆ. ಆಗಸ್ಟ್​ 10ರಂದು ಹೃದಯಾಘಾತ ಆದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸತತ 41 ದಿನ ಚಿಕಿತ್ಸೆ ನೀಡಿದರೂ ಫಲಕಾರಿ ಆಗಿಲ್ಲ. ಅವರ ನಿಧನದಿಂದ (Raju Srivastava Death) ಭಾರತೀಯ ಚಿತ್ರರಂಗ ಬಡವಾಗಿದೆ. ಇಂಥ ಜನಮೆಚ್ಚಿದ ಕಲಾವಿದನ ಬದುಕಿನ ಹೆಜ್ಜೆ ಗುರುತುಗಳು ಇಲ್ಲಿವೆ..

  1. 80 ಹಾಗೂ 90ರ ದಶಕದಿಂದಲೂ ರಾಜು ಶ್ರೀವಾಸ್ತವ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವರು ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದರು.
  2. ‘ಮೈನೇ ಪ್ಯಾರ್​ ಕಿಯಾ’, ‘ಬಾಜಿಗರ್​’, ‘ಬಾಂಬೆ ಟು ಗೋವಾ’ ಮುಂತಾದ ಸಿನಿಮಾಗಳಲ್ಲಿ ರಾಜು ಶ್ರೀವಾಸ್ತವ ಅವರು ಚಿಕ್ಕ ಪಾತ್ರಗಳನ್ನು ಮಾಡಿದ್ದರು. ಬಳಿಕ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು.
  3. ರಾಜು ಶ್ರೀವಾಸ್ತವ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಸ್ಟ್ಯಾಂಡಪ್​ ಕಾಮಿಡಿ ಶೋ. 2005ರಲ್ಲಿ ಪ್ರಸಾರವಾದ ‘ದಿ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​’ ಮೊದಲ ಸೀಸನ್​ ಮೂಲಕ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದರು.
  4. ‘ದಿ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​’ ಶೋನಲ್ಲಿ ರಾಜು ಶ್ರೀವಾಸ್ತವ ಅವರು ಎರಡನೇ ರನ್ನರ್​ಅಪ್​ ಆಗಿದ್ದರು. ಅವರು ಶೋ ವಿನ್​ ಆಗದಿದ್ದರೂ ಕೂಡ ಜನಮನ ಗೆಲ್ಲುವಲ್ಲಿ ಅವರ ಯಶಸ್ವಿಯಾದರು.
  5. ಇದನ್ನೂ ಓದಿ
    Image
    ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
    Image
    ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
    Image
    KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
    Image
    Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​
  6. ಕಿರುತೆರೆಯ ಜೊತೆ ರಾಜು ಶ್ರೀವಾಸ್ತವ ಅವರಿಗೆ ಒಳ್ಳೆಯ ನಂಟು ಬೆಳೆದಿತ್ತು. ಹಲವು ಶೋಗಳಲ್ಲಿ ಜನರನ್ನು ನಗಿಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು.
  7. ದಿ ಗ್ರೇಟ್​ ಇಂಡಿಯನ್​ ಲಾಫ್ಟರ್​ ಚಾಲೆಂಜ್​, ಟೀ ಟೈಂ ಮನೋರಂಜನ್​, ಕಾಮಿಡಿ ಸರ್ಕಸ್​, ಲಾಫ್​ ಇಂಡಿಯಾ ಲಾಫ್​, ಕಾಮಿಡಿ ನೈಟ್ಸ್​ ವಿಥ್​ ಕಪಿಲ್​, ದಿ ಕಪಿಲ್​ ಶರ್ಮಾ ಶೋ, ಗ್ಯಾಂಗ್ಸ್​ ಆಫ್​ ಹಸೀಪುರ್​ ಸೇರಿದಂತೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ರಾಜು ಶ್ರೀವಾಸ್ತವ ಭಾಗಿ ಆಗಿದ್ದರು.
  8. 2014ರಲ್ಲಿ ಸಮಾಜವಾದಿ ಪಕ್ಷದಿಂದ ರಾಜು ಶ್ರೀವಾಸ್ತವ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದರು. ಅದೇ ವರ್ಷ ಅವರು ಬಿಜೆಪಿ ಸೇರ್ಪಡೆಯಾದರು. ಸ್ವಚ್ಛ ಭಾರತ ಅಭಿಯಾನ ಪ್ರಚಾರಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದರು.
  9. ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:14 pm, Wed, 21 September 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?