Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Raju Srivastava Passes Away: ಹಲವು ದಿನಗಳಿಂದ ರಾಜು ಶ್ರೀವಾಸ್ತವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದರು.
ಭಾರತೀಯ ಚಿತ್ರರಂಗದ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ (Comedian Raju Srivastava) ಅವರು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿಯನ್ನು ಕುಟುಂಬದವರು ಖಚಿತಪಡಿಸಿದ್ದಾರೆ. ಹಲವು ದಿನಗಳಿಂದ ರಾಜು ಶ್ರೀವಾಸ್ತವ (Raju Srivastava) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಆದರೆ ಯಾರ ಪ್ರಾರ್ಥನೆಯೂ ಫಲಿಸಿಲ್ಲ. ಅವರ ನಿಧನಕ್ಕೆ (Raju Srivastava Death) ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಆಗಸ್ಟ್ 10ರಂದು ದೆಹಲಿಯ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತವಾಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಒಂದು ವಾರದಿಂದ ಅವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಂದಿ ಚಿತ್ರರಂಗದಿಂದ ರಾಜು ಶ್ರೀವಾಸ್ತವ ಬಣ್ಣದ ಬದುಕು ಆರಂಭಿಸಿದರು. ‘ಮೈನೆ ಪ್ಯಾರ್ ಕಿಯಾ’, ‘ಬಾಜಿಗರ್’, ‘ಬಾಂಬೆ ಟು ಗೋವಾ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಂತರ ಸ್ಟ್ಯಾಂಡಪ್ ಕಾಮಿಡಿಯನ್ ಆಗಿಯೂ ಗುರುತಿಸಿಕೊಂಡರು. ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ನಲ್ಲಿ ಎರಡನೇ ರನ್ನರ್ ಅಪ್ ಆದರು. ಇನ್ನು, ರಿಯಾಲಿಟಿ ಶೋನಲ್ಲೂ ರಾಜು ಶ್ರೀವಾಸ್ತವ ಭಾಗವಹಿಸಿದ್ದರು. ಹಿಂದಿ ಬಿಗ್ ಬಾಸ್ನ ಮೂರನೇ ಸೀಸನ್ಗೆ ಅವರು ಸ್ಪರ್ಧಿ ಆಗಿದ್ದರು. ‘ಕಾಮಿಡಿ ಕಾ ಮಹಾ ಮುಕ್ಬಾಲ್’, ‘ನಾಚ್ ಬಲಿಯೇ’ ರಿಯಾಲಿಟಿ ಶೋನ ಆರನೇ ಸೀಸನ್ಗೆ ಅವರು ಸ್ಪರ್ಧಿ ಆಗಿದ್ದರು.
Comedian Raju Srivastava passes away in Delhi at the age of 58, confirms his family.
He was admitted to AIIMS Delhi on August 10 after experiencing chest pain & collapsing while working out at the gym.
(File Pic) pic.twitter.com/kJqPvOskb5
— ANI (@ANI) September 21, 2022
ರಾಜು ಶ್ರೀವಾಸ್ತವ ಅವರ ನಿಧನಕ್ಕೆ ಅಭಿಮಾನಿಗಳು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳು ಕಂಬಿನಿ ಮಿಡಿಯುತ್ತಿದ್ದಾರೆ. ಬಾಲಿವುಡ್ನ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ಸ್ಟ್ಯಾಂಡಪ್ ಕಾಮಿಡಿ ಲೋಕದಲ್ಲಿ ರಾಜು ಶ್ರೀವಾಸ್ತವ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಹಾಸ್ಯಭರಿತ ಮಾತುಗಳು ಮನಸಾರೆ ನಕ್ಕು ನಗುರಾದವರಿಗೆ ಲೆಕ್ಕವೇ ಇಲ್ಲ. ಇಂದು ಅವರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ.
Heartbreaking… Friend, well-wisher, neighbour #RajuSrivastava ji, you will be missed… Om Shanti ??? pic.twitter.com/DYoIZM1F88
— taran adarsh (@taran_adarsh) September 21, 2022
ಒಟ್ಟು 41 ದಿನಗಳ ಕಾಲ ರಾಜು ಶ್ರೀವಾಸ್ತವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ದಾಖಲಾದ ತಕ್ಷಣವೇ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಕೆಲವು ದಿನಗಳ ಬಳಿಕ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂಬುದು ತಿಳಿದುಬಂದಿತು. ಆ ಬಳಿಕ ಅಭಿಮಾನಿಗಳಲ್ಲಿ ಮತ್ತು ಕುಟುಂಬದವರಲ್ಲಿ ಚಿಂತೆ ಹೆಚ್ಚಿತ್ತು. ಆಗ ಅವರ ನಿಧನದಿಂದ ಶೋಕ ಮಡುಗಟ್ಟಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Wed, 21 September 22