Naveen Shankar: ‘ಕ್ಷೇತ್ರಪತಿ’ ಹೀರೋ ನವೀನ್ ಶಂಕರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ಮೋಷನ್ ಪೋಸ್ಟರ್

Naveen Shankar birthday: ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ ‘ಕ್ಷೇತ್ರಪತಿ’ ಸಿನಿಮಾ ತಂಡವು ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ.

Naveen Shankar: ‘ಕ್ಷೇತ್ರಪತಿ’ ಹೀರೋ ನವೀನ್ ಶಂಕರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ಮೋಷನ್ ಪೋಸ್ಟರ್
ನವೀನ್​ ಶಂಕರ್​ ಜನ್ಮದಿನ ಆಚರಣೆ
Follow us
ಮದನ್​ ಕುಮಾರ್​
|

Updated on: May 26, 2023 | 4:10 PM

ಪ್ರೇಕ್ಷಕರ ಗಮನ ಸೆಳೆದ ‘ಗುಳ್ಟು’, ‘ಹೊಯ್ಸಳ’, ‘ಹೊಂದಿಸಿ ಬರೆಯಿರಿ’ ಮುಂತಾದ ಸಿನಿಮಾಗಳ ಮೂಲಕ ನಟ ನವೀನ್ ಶಂಕರ್ (Naveen Shankar) ಅವರು ಜನಪ್ರಿಯತೆ ಪಡೆದಿದ್ದಾರೆ. ಪ್ರಸ್ತುತ ಅವರು ‘ಕ್ಷೇತ್ರಪತಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ‌. ನವೀನ್ ಶಂಕರ್ ಅವರಿಗೆ ಮೇ 25ರಂದು ಹುಟ್ಟುಹಬ್ಬದ (Naveen Shankar birthday) ಸಂಭ್ರಮ. ಆ ಪ್ರಯುಕ್ತ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನವೀನ್ ಶಂಕರ್ ಅವರಿಗೆ ‘ಕ್ಷೇತ್ರಪತಿ’ ಸಿನಿಮಾ (Kshetrapati Movie) ತಂಡವು ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮೋಷನ್ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಜುಲೈನಲ್ಲಿ ಚಿತ್ರ ತೆರೆಗೆ ಬರಲಿದೆ. ಕೆಆರ್​ಜಿ ಸ್ಟುಡಿಯೋಸ್ ಮೂಲಕ ‘ಕ್ಷೇತ್ರಪತಿ’ ಚಿತ್ರ ರಿಲೀಸ್​ ಆಗಲಿದೆ.

ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ. ‘ಕ್ಷೇತ್ರಪತಿ’ ಸೋಶಿಯಲ್ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ ಎನ್ನುತ್ತಾರೆ ನಿರ್ದೇಶಕರು. ಶ್ರೀಕಾಂತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯಾಗಿದ್ದು, ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ‌.

‘ಗುಳ್ಟು’ ಹೀರೋ-ನಿರ್ದೇಶಕರ ಕಾಂಬಿನೇಷನ್​ನಲ್ಲಿ ಬರಲಿದೆ ಮತ್ತೊಂದು ಸಿನಿಮಾ; ಹೆಚ್ಚಿದೆ ನಿರೀಕ್ಷೆ

‘ಕೆ.ಜಿ.ಎಫ್: ಚಾಪ್ಟರ್​ 2’ ಖ್ಯಾತಿಯ ರವಿ ಬಸ್ರೂರ್ ಅವರು ‘ಕ್ಷೇತ್ರಪತಿ’ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ.ವಿ.ಬಿ. ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾದ ಟೈಟಲ್​ ಮತ್ತು ಪೋಸ್ಟರ್​ ಗಮನ ಸೆಳೆದಿದೆ. ಆ ಮೂಲಕ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ. ಆದಷ್ಟು ಬೇಗ ‘ಕ್ಷೇತ್ರಪತಿ’ ಚಿತ್ರವನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ.

‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​

ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವಾದ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿದ್ದ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಅವರು ‘ಕ್ಷೇತ್ರಪತಿ’ ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.