AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಮಿಲಿ ಜೊತೆ ವೆಕೇಶನ್ ತೆರಳಿದ ಮಹೇಶ್ ಬಾಬು; ಸಿತಾರಾ ಸಂತಸಕ್ಕೆ ಪಾರವೇ ಇಲ್ಲ

ಕೆಲ ದಿನಗಳಿಂದ ಮಹೇಶ್ ಬಾಬು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ಈಗ ಅವರು ವೆಕೇಶನ್ ಪಡೆದಿದ್ದಾರೆ. ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಅವರು ಕುಟುಂಬದ ಜೊತೆ ಕಾಣಿಸಿಕೊಂಡಿದ್ದಾರೆ.

ಫ್ಯಾಮಿಲಿ ಜೊತೆ ವೆಕೇಶನ್ ತೆರಳಿದ ಮಹೇಶ್ ಬಾಬು; ಸಿತಾರಾ ಸಂತಸಕ್ಕೆ ಪಾರವೇ ಇಲ್ಲ
ಸಿತಾರಾ
ರಾಜೇಶ್ ದುಗ್ಗುಮನೆ
|

Updated on: Apr 29, 2023 | 7:28 AM

Share

ಮಹೇಶ್ ಬಾಬು (Mahesh Babu) ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದಿದೆ. ಸದ್ಯ ಅವರು ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಎಂದಿಗೂ ವೆಕೇಶನ್ ತೆರಳುವುದನ್ನು ತಪ್ಪಿಸುವುದಿಲ್ಲ. ಮೇ ಆರಂಭ ಆಗುವ ಸಂದರ್ಭದಲ್ಲಿ ಮಹೇಶ್ ಬಾಬು ಅವರು ಸಮ್ಮರ್ ವೆಕೇಶನ್ ಹೊರಟಿದ್ದಾರೆ. ಕುಟುಂಬದ ಜೊತೆ ಅವರು ವಿದೇಶಕ್ಕೆ ಹಾರಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಖುಷಿಪಟ್ಟಿದ್ದು ಸಿತಾರಾ (Sitara Ghattamaneni) ಎಂದು ನಮ್ರತಾ ಬರೆದುಕೊಂಡಿದ್ದಾರೆ.

ಮಹೇಶ್ ಬಾಬು ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ 2022ರ ಮೇ 12ಕ್ಕೆ ರಿಲೀಸ್ ಆಯಿತು. ಇದಾದ ಬಳಿಕ ಅವರ ಕುಟುಂಬದಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದವು. ಮಹೇಶ್ ಬಾಬು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡರು. ಈ ಕಾರಣಕ್ಕೆ ಹೊಸ ಸಿನಿಮಾ ಶೂಟಿಂಗ್ ವಿಳಂಬ ಆಗಿದೆ. ಕೆಲ ದಿನಗಳಿಂದ ಮಹೇಶ್ ಬಾಬು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ಈಗ ಅವರು ವೆಕೇಶನ್ ಪಡೆದಿದ್ದಾರೆ.

ಮಹೇಶ್ ಬಾಬು ಅವರ 28ನೇ ಸಿನಿಮಾಗೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ #SSMB28 ಎಂದು ಹೆಸರು ಇಡಲಾಗಿದೆ. ಈ ಸಿನಿಮಾ 2024ರ ಜನವರಿ 13ರಂದು ರಿಲೀಸ್ ಆಗುತ್ತಿದೆ. ಶೂಟಿಂಗ್​​ನಿಂದ ಬಿಡುವು ಪಡೆದು ಅವರು ವಿದೇಶಕ್ಕೆ ಹಾರಿದ್ದಾರೆ.

ಪತ್ನಿ ನಮ್ರತಾ, ಮಗಳು ಸಿತಾರಾ ಹಾಗೂ ಮಗ ಗೌತಮ್ ಜೊತೆ ಅವರು ಶುಕ್ರವಾರ (ನವೆಂಬರ್ 28) ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ಬಳಿಕ ನಮ್ರತಾ ಅವರು ಸಿತಾರಾಳ ಫೋಟೋ ಪೋಸ್ಟ್ ಮಾಡಿದ್ದಾರೆ. ವಿಮಾನದಲ್ಲಿ ಕುಳಿತು ಸಿತಾರಾ ನಗುತ್ತಿದ್ದಾರೆ. ಅವಳಿಗೆ ಸಖತ್ ಖುಷಿ ಆಗಿದೆ ಎಂದು ನಮ್ರತಾ ಹೇಳಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ‘ಮಹೇಶ್ ಬಾಬು ಫೋಟೋನ ಪೋಸ್ಟ್​ ಮಾಡಿ’ ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ:  ಮಿರರ್​ ಸೆಲ್ಫಿಯಲ್ಲಿ ಸ್ಟೈಲಿಶ್ ಆಗಿ ಪೋಸ್ ಕೊಟ್ಟ ಸಿತಾರಾ-ನಮ್ರತಾ

ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಕೆಲಸ ಪೂರ್ಣಗೊಂಡ ಬಳಿಕ ಮಹೇಶ್ ಬಾಬು ಅವರು ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ. ರಾಜಮೌಳಿ ನಟನೆಯ ‘ಆರ್​ಆರ್​ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪಡೆದಿದೆ. ಹೀಗಾಗಿ ರಾಜಮೌಳಿ ಮೇಲೆ ಜವಾಬ್ದಾರಿ ಹೆಚ್ಚಿದೆ. 2024ರಲ್ಲಿ ಈ ಸಿನಿಮಾ ಕೆಲಸ ಆರಂಭ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ