AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ದಿನಕ್ಕೆ 500 ಸಿಗರೇಟ್ ಸೇದಿದೆ ಎಂದ ನಟ, ಕ್ಯಾನ್ಸರ್ ಗ್ಯಾರೆಂಟಿ ಎಂದ ನೆಟ್ಟಿಗರು

Allari Naresh: ನಟ ನರೇಶ್, ತಾವು ತಮ್ಮ ಹೊಸ ಸಿನಿಮಾಕ್ಕಾಗಿ ನಾಲ್ಕು ದಿನದಲ್ಲಿ 500 ಸಿಗರೇಟು ಸೇರಿ ಅನಾರೋಗ್ಯಕ್ಕೆ ಗುರಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.

ನಾಲ್ಕು ದಿನಕ್ಕೆ 500 ಸಿಗರೇಟ್ ಸೇದಿದೆ ಎಂದ ನಟ, ಕ್ಯಾನ್ಸರ್ ಗ್ಯಾರೆಂಟಿ ಎಂದ ನೆಟ್ಟಿಗರು
ನರೇಶ್
ಮಂಜುನಾಥ ಸಿ.
|

Updated on: Apr 29, 2023 | 7:00 AM

Share

ಸಿನಿಮಾಕ್ಕಾಗಿ ನಟರು ಏನೇನೋ ಮಾಡುತ್ತಾರೆ ಬಾಡಿ ಬಿಲ್ಡ್ ಮಾಡುವುದು, ತೂಕ ಕಳೆದುಕೊಳ್ಳುವುದು, ಹೆಚ್ಚಿಸಿಕೊಳ್ಳುವುದು, ನಿರ್ದಿಷ್ಟ ಶೈಲಿಯನ್ನು ಅಭ್ಯಾಸ ಮಾಡಿ ನಟನೆ ಮಾಡುವುದು ಹೀಗೆ ಆದರೆ ತೆಲುಗಿನ ನಟರೊಬ್ಬರು ಚಿತ್ರೀಕರಣದ ಸಮಯದಲ್ಲಿ ಕೇವಲ ನಾಲ್ಕು ದಿನದಲ್ಲಿ ಐದುನೂರು ಸಿಗರೇಟು ಸೇದಿದರಂತೆ, ಇದರಿಂದ ಬಹಳ ತೊಂದರೆಯನ್ನೂ ಅನುಭವಿಸಿದ್ದಾರೆ.

ಅಲ್ಲರಿ ನರೇಶ್, ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ಹಲವು ಸೂಪರ್ ಹಿಟ್ ಹಾಸ್ಯ ಸಿನಿಮಾಗಳನ್ನು ನೀಡಿರುವ ಅಲ್ಲರಿ ನರೇಶ್ ಇತ್ತೀಚಗೆ ಅವಕಾಶಗಳ ಕೊರತೆ ಎದುರಿಸಿದ್ದರು. ಮಹೇಶ್ ಬಾಬು ಸಿನಿಮಾದಲ್ಲಿ ಪೋಷಕ ನಟನಾಗಿಯೂ ನಟಿಸಿದ್ದರು. ಅದಾದ ಬಳಿಕ ಇಮೇಜ್ ಬದಲಾಯಿಸಿಕೊಳ್ಳುವ ದೃಷ್ಟಿಯಿಂದ ಮಾಸ್ ಸಿನಿಮಾಗಳತ್ತ ಹೊರಳಿದ್ದಾರೆ. ಇದರ ಭಾಗವಾಗಿ ನಾಂದಿ ಹೆಸರಿನ ಸಿನಿಮಾ ಮಾಡಿದ್ದರು, ಆ ಸಿನಿಮಾ ಗಮನ ಸೆಳೆದ ಬಳಿಕ ಈಗ ಅದೇ ತಂಡದೊಡನೆ ಇನ್ನಷ್ಟು ಮಾಸ್ ಆಗಿರುವ ಉಗ್ರಂ ಸಿನಿಮಾದಲ್ಲಿ ನಟಿಸಿದ್ದಾರೆ.

ಉಗ್ರಂ ಸಿನಿಮಾದಲ್ಲಿ ಕುಟುಂಬವನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನರೇಶ್ ನಟಿಸಿದ್ದು, ಸಿನಿಮಾದ ಫೈಟ್ ಒಂದರ ಚಿತ್ರೀಕರಣದ ಸಂದರ್ಭದಲ್ಲಿ ಕೇವಲ ನಾಲ್ಕು ದಿನಕ್ಕೆ 500 ಸಿಗರೇಟುಗಳನ್ನು ಸೇದಿದರಂತೆ. ಇದರಿಂದಾಗಿ ನರೇಶ್​ಗೆ ಕೆಮ್ಮು ಪ್ರಾರಂಭವಾಗಿ ಜ್ವರ ಸಹ ಕಾಡಿತಂತೆ ಆದರೂ ಬಿಡದೆ ಸಿನಿಮಾಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಸಿಗರೇಟಿನ ಮೇಲೆ ಸಿಗರೇಟು ಸುಟ್ಟಿದ್ದಾರೆ. ಈ ವಿಷಯವನ್ನು ಸಿನಿಮಾದ ಪ್ರಚಾರ ಸಂದರ್ಭದಲ್ಲಿ ನಟ ನರೇಶ್ ಹೇಳಿಕೊಂಡಿದ್ದು, ಆದರೆ ಇದಕ್ಕೆ ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.

ಸಿಗರೇಟು ಸೇವನೆ, ಮದ್ಯಪಾನವನ್ನು ಸಿನಿಮಾಗಳಲ್ಲಿ ಗ್ಲಾಮರೈಸ್ ಮಾಡಲಾಗುತ್ತಿದೆ, ಅಂಥಹದ್ದರಲ್ಲಿ ತಾವು ಐದುನೂರು ಸಿಗರೇಟು ಸೇದಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ತಪ್ಪು ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ನರೇಶ್​ಗೆ ಕ್ಯಾನ್ಸರ್ ಬರುವುದು ಗ್ಯಾರೆಂಟಿ ಎಂದು ತಮಾಷೆ ಮಾಡಿದ್ದಾರೆ.

ನರೇಶ್ ನಟಿಸಿರುವ ಉಗ್ರಂ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿವೆ. ನರೇಶ್ ಅಂತೂ ಹಿಂದೆಂದೂ ಕಾಣದ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಹಾಸ್ಯ ಪಾತ್ರಗಳಲ್ಲಿ ನಗಿಸುತ್ತಿದ್ದ ನರೇಶ್ ಈ ಸಿನಿಮಾದಲ್ಲಿ ಭಯಾನಕವಾಗಿ ಕಾಣುತ್ತಿದ್ದಾರೆ. ಸಿನಿಮಾವನ್ನು ವಿಜಯ್ ಕನಕಮೆಡಾಲ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ತನಿಖಾಧಿಕಾರಿಯ ಪಾತ್ರದಲ್ಲಿ ನರೇಶ್ ನಟಿಸಿದ್ದಾರೆ. ಆದರೆ ವಿರೋಧಿಗಳಿಗೆ ತನ್ನ ಕುಟುಂಬದ ಸದಸ್ಯರನ್ನೇ ಕಳೆದುಕೊಂಡ ಬಳಿಕ ಪ್ರಕರಣವನ್ನು ಪರ್ಸನಲ್ ಆಗಿ ತೆಗೆದುಕೊಳ್ಳುವ ನಾಯಕ, ಮಾಫಿಯಾದ ವಿರುದ್ಧ ಹೋರಾಟಕ್ಕೆ ನಿಲ್ಲುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಉಗ್ರಂ ಸಿನಿಮಾ ಮೇ 5ರಂದು ತೆರೆಗೆ ಬರಲಿದೆ.

ನರೇಶ್ ಮೊದಲಿನಿಂದಲೂ ಹಾಸ್ಯ ಸಿನಿಮಾಗಳ ನಾಯಕನಾಗಿ ನಟಿಸುತ್ತಾ ಬಂದವರು. ಹಾಸ್ಯ ಪಾತ್ರಗಳ ಮೂಲಕ ಪ್ರತ್ಯೇಕ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಈಗ ಇಮೇಜ್ ಬದಲಾವಣೆ ಮಾಡಿಕೊಂಡು ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?