AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ವೃತ್ತಿಜೀವನಕ್ಕೆ ಮೈಲೇಜ್ ನೀಡಲು ಹೊಸ ಚಾಲೆಂಜ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ?

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಒಳಉಡುಪಿನ ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈಗ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ.

Rashmika Mandanna: ವೃತ್ತಿಜೀವನಕ್ಕೆ ಮೈಲೇಜ್ ನೀಡಲು ಹೊಸ ಚಾಲೆಂಜ್ ತೆಗೆದುಕೊಂಡ ರಶ್ಮಿಕಾ ಮಂದಣ್ಣ?
ರಶ್ಮಿಕಾ ಮಂದಣ್ಣ
ರಾಜೇಶ್ ದುಗ್ಗುಮನೆ
|

Updated on: Apr 29, 2023 | 8:10 AM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗಾಗಲೇ ಪಕ್ಕದ ಮನೆ ಹುಡುಗಿ ಪಾತ್ರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಮಾಡಿರುವ ಬಹುತೇಕ ಪಾತ್ರಗಳು ಗ್ಲಾಮರಸ್ ಆಗಿವೆ. ಈಗ ರಶ್ಮಿಕಾ ಮಂದಣ್ಣ ಅವರು ಹೊಸ ಚಾಲೆಂಜ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಐತಿಹಾಸಿಕ ಘಟನೆ ಆಧರಿಸಿ ಸಿದ್ಧಗೊಳ್ಳುತ್ತಿರುವ ಪಾತ್ರವನ್ನು ಅವರು ಒಪ್ಪಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಕೂಡ ಮಾಡಿಕೊಳ್ಳಲಿದ್ದಾರೆ. ಈ ವಿಚಾರ ಕೇಳಿ ರಶ್ಮಿಕಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಸಿನಿಮಾ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಒಳಉಡುಪಿನ ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈಗ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು ವಿಕ್ಕಿ ಕೌಶಲ್ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ. ಐತಿಹಾಸಿಕ ವಿಚಾರ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಇದಕ್ಕೆ ‘ಛವಾ’ ಎಂದು ಹೆಸರು ಇಡಲಾಗಿದೆ.

ಛತ್ರಪತಿ ಶಿವಾಜಿ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ಸಂಭಾಜಿ ಅವರ ಶೌರ್ಯ, ಯುದ್ಧಗಳನ್ನು ಗೆಲ್ಲುವ ತಂತ್ರ ಹಾಗೂ ಅಂತಿಮ ತ್ಯಾಗದ ಬಗ್ಗೆ ಇದೆ. ಇದರ ಜೊತೆಗೆ ಪತಿ-ಪತ್ನಿ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಅನ್ನೋದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲು ಹೈಲೈಟ್ ಆಗಲಿದೆ.

ಈ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ವಿಕ್ಕಿ ಕೌಶಲ್ ಕೂಡ ಕುದುರೆ ಸವಾರಿ ಮತ್ತಿತ್ಯಾದಿ ಯುದ್ಧಕಲೆಯ ತರಬೇತಿ ಪಡೆಯಲಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ವಿಶೇಷ ಎನಿಸಿಕೊಂಡಿದೆ. ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು ಮ್ಯಾಡಾಕ್ ಫಿಲ್ಮ್ಸ್ ಇದಕ್ಕೆ ಬಂಡವಾಳ ಹೂಡುತ್ತಿದೆ. ‘ಸ್ತ್ರೀ’, ‘ಭೇಡಿಯಾ’ ಮೊದಲಾದ ಸಿನಿಮಾಗಳು ಇದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬಂದಿವೆ.

ಇದನ್ನೂ ಓದಿ: Rashmika Mandanna: ಗ್ಲಾಮರಸ್​ ಆಗಿ ಫೋಟೋಶೂಟ್​ ಮಾಡಿಸಿದ ರಶ್ಮಿಕಾ ಮಂದಣ್ಣ; ‘ನಿಮ್ಮ ನಗು ಕ್ಯೂಟ್​’ ಎಂದ ಫ್ಯಾನ್ಸ್​

ವಿಕ್ಕಿ ಕೌಶಲ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಸಿಕ್ಕಿಲ್ಲ. ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಗೆಲುವು ಕಾಣುತ್ತಿದ್ದಾರೆ. ಈ ಚಿತ್ರ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಮೂಡಿದೆ. ಮಹಾರಾಣಿ ಪಾತ್ರದಲ್ಲಿ ರಶ್ಮಿಕಾ ಅವರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ