ಸತ್ಯ ಯಾವಾಗಲೂ ಗೆಲ್ಲುತ್ತದೆ, ಜಿಯಾ ಖಾನ್ ಪ್ರಕರಣದಲ್ಲಿ ಖುಲಾಸೆಯಾದ ಸೂರಜ್ ಪಂಚೋಲಿ ಪ್ರತಿಕ್ರಿಯೆ

Jiah Khan: ನಟಿ ಜಿಯಾ ಖಾನ್ ಮರಣ ಪ್ರಕರಣದಲ್ಲಿ ಹತ್ತು ವರ್ಷದ ಬಳಿಕ ತೀರ್ಪು ಬಂದಿದ್ದು ಆರೋಪಿಯಾಗಿದ್ದ ನಟ ಸೂರಜ್ ಪಂಚೋಲಿ ಖುಲಾಸೆಯಾಗಿದ್ದಾರೆ. ಪ್ರಕರಣದ ತೀರ್ಪಿನ ಬಳಿಕ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸತ್ಯ ಯಾವಾಗಲೂ ಗೆಲ್ಲುತ್ತದೆ, ಜಿಯಾ ಖಾನ್ ಪ್ರಕರಣದಲ್ಲಿ ಖುಲಾಸೆಯಾದ ಸೂರಜ್ ಪಂಚೋಲಿ ಪ್ರತಿಕ್ರಿಯೆ
ಸೂರಜ್ ಪಂಚೋಲಿ-ಜಿಯಾ ಖಾನ್
Follow us
ಮಂಜುನಾಥ ಸಿ.
|

Updated on: Apr 28, 2023 | 10:40 PM

ದೇಶದ ಕುತೂಹಲ ಕೆರಳಿಸಿದ್ದ ನಟಿ ಜಿಯಾ ಖಾನ್ (Jiah Khan) ಸಾವಿನ ಪ್ರಕರಣದ ತೀರ್ಪು ಇಂದು (ಏಪ್ರಿಲ್ 28) ಹೊರಬಿದ್ದಿದ್ದು ಆರೋಪಿಯಾಗಿದ್ದ ನಟ ಸೂರಜ್ ಪಂಚೋಲಿ (Sooraj Pancholi) ಖುಲಾಸೆಯಾಗಿದ್ದಾರೆ. ಜಿಯಾ ಖಾನ್ 2013 ರಲ್ಲಿ ನಿಧನ ಹೊಂದಿದ್ದರು, ಅವರ ಪ್ರೇಮಿಯಾಗಿದ್ದ ಸೂರಜ್ ಪಂಚೋಲಿಯೇ ಜಿಯಾ ಖಾನ್ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆಂದು ಆರೋಪಿಸಲಾಗಿತ್ತು, ತನಿಖೆ ನಡೆದು, ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇದೀಗ ತೀರ್ಪು ಹೊರಬಿದ್ದಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ಸೂರಜ್ ಅನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.

ಇಂದು ನ್ಯಾಯಾಲಯಕ್ಕೆ ತನ್ನ ತಾಯಿ ಝರೀನಾ ವಹಾಬ್​ ಜೊತೆ ಆಗಮಿಸಿದ್ದ ಸೂರಜ್ ಪಂಚೋಲಿ ನ್ಯಾಯಾಲಯದ ಬಳಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಾದರೂ ಆ ಬಳಿಕ ಇನ್​ಸ್ಟಾಗ್ರಾಂನಲ್ಲಿ ‘ಸತ್ಯ ಸದಾ ಗೆಲ್ಲುತ್ತದೆ, ದೇವರು ಗೆಲ್ಲುತ್ತಾನೆ’ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಮ್ಮ ಮನೆಯ ಬಳಿ ಸಿಹಿ ಹಂಚಿ ತೀರ್ಪನ್ನು ಸಂಭ್ರಮಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ ಜಿಯಾ ಖಾನ್ ತಾಯಿಯು ಮಾಧ್ಯಮಗಳೊಟ್ಟಿಗೆ ಮಾತನಾಡಿ, ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್​ ಖುಲಾಸೆ ಆಗಿದ್ದಾನೆ ಆದರೆ ಕೊಲೆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ನಾನು ಭರವಸೆ ಕಳೆದುಕೊಳ್ಳುವುದಿಲ್ಲ ನ್ಯಾಯಕ್ಕಾಗಿ ಹೋರಾಡುತ್ತೇನೆ, ತೀರ್ಪನ್ನು ನಾವು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡುತ್ತೇವೆ, ಅವಶ್ಯಕತೆ ಬಿದ್ದರೆ ಸುಪ್ರೀಂಕೋರ್ಟ್​ಗೂ ಹೋಗುತ್ತೇನೆ, ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:Jiah Khan: ನಟಿ ಜಿಯಾ ಖಾನ್​ ನಿಧನವಾದ ದಿನದಿಂದ ಇಲ್ಲಿಯವರೆಗೆ ಏನೆಲ್ಲಾ ಆಯ್ತು? ಇಲ್ಲಿದೆ ಪೂರ್ತಿ ವಿವರ

2013 ರಲ್ಲಿ ಮುಂಬೈನ ಜುಹೂ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಿಯಾ ಖಾನ್​ ಶವ ಪತ್ತೆ ಆಯಿತು. ಅದಾಗಿ ಕೆಲವೇ ವಾರಗಳ ಬಳಿಕ ಅವರ ಪ್ರಿಯಕರ ಸೂರಜ್​ ಪಾಂಚೋಲಿ ಮೇಲೆ ಕೇಸ್​ ದಾಖಲಾಯಿತು. ಜಿಯಾ ಖಾನ್​ ಬರೆದ ಆರು ಪುಟಗಳ ಡೆತ್​ ನೋಟ್​ ಆಧರಿಸಿ ಪ್ರಕರಣ ದಾಖಲಿಸಿ ಸೂರಜ್ ಅನ್ನು ಬಂಧಿಸಲಾಯ್ತು ಬಳಿಕ ಜುಲೈನಲ್ಲಿ ಸೂರಜ್​ ಪಾಂಚೋಲಿ ಜಾಮೀನು ಪಡೆದರು. ಜಿಯಾ ಖಾನ್​ ಅವರ ತಾಯಿ ರಬಿಯಾ ಸಲ್ಲಿಸಿದ ಮನವಿ ಮೇರೆಗೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ರಬಿಯಾ ವಿರುದ್ಧ ಸೂರಜ್​ ಪಾಂಚೋಲಿ ಅವರು 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.ಜೂನ್​ ತಿಂಗಳಲ್ಲಿ ಸೂರಜ್​ ಪಾಂಚೋಲಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದೀಗ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದ್ದು ಸೂರಜ್ ಖುಲಾಸೆಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ