AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ವರ್ಷದ ಒಟ್ಟಿಗೆ ನಟಿಸಲಿರುವ ಶಾರುಖ್ ಖಾನ್-ಅಮಿತಾಬ್ ಬಚ್ಚನ್

Shah Rukh Khan-Amitabh Bachchan: ಬಾಲಿವುಡ್​ನ ಇಬ್ಬರು ದಿಗ್ಗಜರಾದ ಅಮಿತಾಬ್ ಬಚ್ಚನ್ ಹಾಗೂ ಶಾರುಖ್ ಖಾನ್ ಕಳೆದ 17 ವರ್ಷಗಳಿಂದಲೂ ಒಟ್ಟಿಗೆ ನಟಿಸಿಲ್ಲ. ಆದರೆ ಇತ್ತೀಚೆಗೆ ಈ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

17 ವರ್ಷದ ಒಟ್ಟಿಗೆ ನಟಿಸಲಿರುವ ಶಾರುಖ್ ಖಾನ್-ಅಮಿತಾಬ್ ಬಚ್ಚನ್
ಶಾರುಖ್-ಬಚ್ಚನ್
ಮಂಜುನಾಥ ಸಿ.
|

Updated on:Aug 26, 2023 | 10:51 PM

Share

ಅಮಿತಾಬ್ ಬಚ್ಚನ್ (Amitabh Bachchan) ಬಾಲಿವುಡ್ ಲೆಜೆಂಡರಿ ನಟ ಎನಿಸಿಕೊಂಡಿದ್ದರೆ ಶಾರುಖ್ ಖಾನ್ (Shah Rukh Khan) ಬಾಲಿವುಡ್​ನ ಬಾದ್​ ಶಾ. ಈ ಇಬ್ಬರನ್ನು ಒಟ್ಟಿಗೆ ತೆರೆಯ ಮೇಲೆ ನೋಡುವುದು ಯಾವುದೇ ಸಿನಿಮಾ ಪ್ರೇಕ್ಷಕನಿಗೆ ಹಬ್ಬವೇ ಸರಿ. ಆದರೆ ಕಳೆದ 17 ವರ್ಷಗಳಿಂದಲೂ ಈ ಇಬ್ಬರು ಒಟ್ಟಿಗೆ ನಟಿಸಿದ್ದಿಲ್ಲ. ಆದರೆ ಇದೀಗ ಈ 17 ವರ್ಷಗಳ ಅಂತರಕ್ಕೆ ವಿರಾಮ ನೀಡಿ ಇಬ್ಬರೂ ಸ್ಟಾರ್ ನಟರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಶಾರುಖ್ ಖಾನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಹೆಚ್ಚಿನ ಪ್ರಚಾರದಲ್ಲಿ ಪಾಲ್ಗೊಳ್ಳದ, ದೊಡ್ಡ ಮಟ್ಟದ ಪ್ರಚಾರದ ಅವಶ್ಯಕತೆಯೂ ಇಲ್ಲ ಶಾರುಖ್ ಖಾನ್, ಸರಳವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಟ್ಟಿಗೆ ನೇರವಾಗಿ ಪ್ರಶ್ನೋತ್ತರ ನಡೆಸಿ ಅಲ್ಲಿಯೇ ಸಿನಿಮಾದ ಪ್ರಚಾರ ಮಾಡಿಬಿಡುತ್ತಾರೆ. ಇಂದು (ಆಗಸ್ಟ್ 26) ಸಹ ಹೀಗೆಯೇ ಮಾಡಿದ್ದಾರೆ.

ಶಾರುಖ್ ಖಾನ್​ಗೆ ಎಕ್ಸ್​ನಲ್ಲಿ (ಟ್ವಿಟ್ಟರ್) ನಲ್ಲಿ ಹಲವರು ಹಲವು ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಪ್ರಶ್ನೆಗಳಿಗೆ ಶಾರುಖ್ ಖಾನ್ ಉತ್ತರ ನೀಡಿದ್ದಾರೆ. ಪ್ರಶ್ನೋತ್ತರ ಸೆಷನ್​ನಲ್ಲಿ ವ್ಯಕ್ತಿಯೊಬ್ಬ ಶಾರುಖ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ಓಡುತ್ತಿರುವ ಚಿತ್ರವೊಂದನ್ನು ಹಂಚಿಕೊಂಡು, ಅಮಿತ್ ಜೀ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದಾರೆ.

ಇದನ್ನೂ ಓದಿ:ಹೆಚ್ಚಿತು ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಕ್ರೇಜ್​; 21 ದಿನ ಮೊದಲೇ ಬುಕಿಂಗ್ ಓಪನ್

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, ”ಹಲವಾರು ವರ್ಷಗಳ ಬಳಿಕ ಅವರೊಟ್ಟಿಗೆ ಕೆಲಸ ಮಾಡುವುದು ಬಹಳ ಖುಷಿ ಎನಿಸಿತು. ಅವರೊಟ್ಟಿಗೆ ಚಿತ್ರೀಕರಣ ಮಾಡಿದ ಪ್ರತಿದಿನ, ಶೂಟಿಂಗ್ ನಿಂದ ವಾಪಸ್ ಬರುವಾಗ ಸ್ಪೂರ್ತಿ ತುಂಬಿಕೊಂಡು ಮರಳುತ್ತಿದ್ದೆ. ನಿಮ್ಮ ಮಾಹಿತಿಗೆಂದು ಹೇಳುತ್ತಿದ್ದೇನೆ, ಅವರು ಓಟದಲ್ಲಿ ನನ್ನನ್ನು ಸೋಲಿಸಿದರು” ಎಂದಿದ್ದಾರೆ.

ಶಾರುಖ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಕೊನೆಯದಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದು ‘ಕಭಿ ಅಲ್ವಿದಾ ನಾ ಕೆಹನಾ’ ಸಿನಿಮಾದಲ್ಲಿ. ಈ ಸಿನಿಮಾ 2006ರಲ್ಲಿ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತ್ತು. ಅದಕ್ಕೂ ಮುನ್ನ, ‘ಕಭಿ ಖುಷಿ ಕಭಿ ಗಮ್’, ‘ವೀರ್ ಝರಾ’ ಇನ್ನೂ ಕೆಲವು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಇಬ್ಬರೂ ಇದ್ದಾರಾದರೂ ಇಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Sat, 26 August 23