AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಮೇಕಪ್​ ಮ್ಯಾನ್ ಮಾಡಿದ ಸಿನಿಮಾದಲ್ಲಿ ಉಚಿತವಾಗಿ ನಟಿಸಿದ್ದ ಅಮಿತಾಬ್ ಬಚ್ಚನ್

Amitabh Bachchan: ನಟ ಅಮಿತಾಬ್ ಬಚ್ಚನ್ ತಮ್ಮ ಮೇಕಪ್​ ಮ್ಯಾನ್ ನಿರ್ಮಿಸಿದ್ದ ಸಿನಿಮಾದಲ್ಲಿ ಉಚಿತವಾಗಿ ನಟಿಸಿದ್ದರು.

ತಮ್ಮ ಮೇಕಪ್​ ಮ್ಯಾನ್ ಮಾಡಿದ ಸಿನಿಮಾದಲ್ಲಿ ಉಚಿತವಾಗಿ ನಟಿಸಿದ್ದ ಅಮಿತಾಬ್ ಬಚ್ಚನ್
ಬಚ್ಚನ್
ಮಂಜುನಾಥ ಸಿ.
|

Updated on: Jul 12, 2023 | 10:13 PM

Share

ಅಮಿತಾಬ್ ಬಚ್ಚನ್ (Amitabh Bachchan) ಭಾರತ ಚಿತ್ರರಂಗದ (Indian Cinema) ಲಿಜೆಂಡರಿ ನಟ. 80 ರ ಈ ವಯಸ್ಸಿನಲ್ಲಿಯೂ ಪ್ರತಿದಿನ ಚಿತ್ರೀಕರಣದಲ್ಲಿ ಭಾಗವಹಿಸುತ್ತಾ, ಹೊಸ-ಹೊಸ ಪಾತ್ರಗಳನ್ನು, ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ನಟಿಸುತ್ತಲೇ ಸಾಗುತ್ತಿದ್ದಾರೆ. ಜೀವನದ ಅರ್ಧಕ್ಕೂ ಹೆಚ್ಚು ಭಾಗವನ್ನು ನಟನೆಯಲ್ಲಿಯೇ ಕಳೆದಿರುವ ಅಮಿತಾಬ್ ಬಚ್ಚನ್, ತಮ್ಮ ಸುದೀರ್ಘ ಸಿನಿಮಾ ಪಯಣದಲ್ಲಿ ಹಲವರಿಗೆ ನೆರವಾಗಿದ್ದಾರೆ. ತಮ್ಮ ಮೇಕಪ್ ಮ್ಯಾನ್ (Make up artist) ಮಾಡಿದ್ದ ಸಿನಿಮಾದಲ್ಲಿ ಉಚಿತವಾಗಿ ನಟಿಸಿ ಆತನಿಗೆ ಬೆಂಬಲ ಸೂಚಿಸಿದ್ದರು ಅಮಿತಾಬ್ ಬಚ್ಚನ್.

ವೃತ್ತಿ ಬದುಕಿನ ಆರಂಭದಿಂದಲೂ ದುಬಾರಿ ನಟರಾಗಿರುವ ಅಮಿತಾಬ್ ಬಚ್ಚನ್, ಹಲವು ದಶಕಗಳ ಕಾಲ ವೃತ್ತಿಯ ಉತ್ತುಂಗದಲ್ಲೇ ಸಾಗಿದವರು. 2000 ದಲ್ಲಿಯಂತೂ ಕೆಬಿಸಿ ಜೊತೆಗೆ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅದೇ ಸಮಯದಲ್ಲಿ ತಮ್ಮ ಮೇಕಪ್​ ಮ್ಯಾನ್ ಆಗಿದ್ದ ದೀಪಕ್ ಸಾವಂತ್, ಸಿನಿಮಾಗಳ ಮೇಲಿನ ಪ್ರೀತಿಯಿಂದ, ಆಸಕ್ತಿಯಿಂದ ಭೋಜ್​ಪುರಿ ಭಾಷೆಯಲ್ಲಿ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದರು ಅದೂ ಉಚಿತವಾಗಿ.

2006 ರಲ್ಲಿ ಬಿಡುಗಡೆ ಆಗಿದ್ದ ‘ಗಂಗಾ’ ಹೆಸರಿನ ಭೋಜಪುರಿ ಸಿನಿಮಾವನ್ನು ದೀಪಕ್ ಸಾವಂತ್ ನಿರ್ಮಾಣ ಮಾಡಿದ್ದರು, ನಿರ್ದೇಶನವನ್ನು ಅಭಿಷೇಕ್ ಛಡ್ಡಾ ಮಾಡಿದ್ದರು. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕೇವಲ ಅತಿಥಿ ನಟರಾಗಿರಲಿಲ್ಲ ಬದಲಿಗೆ ಮುಖ್ಯ ನಟರಾಗಿದ್ದರು. ಅದೇ ಸಿನಿಮಾದಲ್ಲಿ ಬಚ್ಚನ್ ಜೊತೆಗೆ ಹೇಮಾಮಾಲಿನಿ ಸಹ ನಟಿಸಿದ್ದರು. ರವಿಕಿಶನ್, ನಗ್ಮಾ ಸಹ ಸಿನಿಮಾದಲ್ಲಿದ್ದರು.

ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾ ನೋಡಿ ಸಿಟ್ಟಾಗಿದ್ದ ಅಮಿತಾಬ್ ಬಚ್ಚನ್: ಯಾಕೆ? ಸಿನಿಮಾ ಯಾವುದು?

ಸಿನಿಮಾದಲ್ಲಿ ನಟಿಸಿದ್ದ ಮನೋಜ್ ತಿವಾರಿ ಈ ಬಗ್ಗೆ ಮಾತನಾಡಿದ್ದು, ”ತಮ್ಮ ಮೇಕಪ್ ಕಲಾವಿದನಿಗೆ ಸಹಾಯ ಮಾಡಲೆಂದು ಅಮಿತಾಬ್ ಬಚ್ಚನ್ ಗಂಗಾ ಸಿನಿಮಾದಲ್ಲಿ ಉಚಿತವಾಗಿ ನಟಿಸಿದ್ದರು, ಮಾತ್ರವೇ ಅಲ್ಲದೆ ಅವರೇ ನನಗೆ ಕರೆ ಮಾಡಿ ಸಿನಿಮಾ ಮಾಡೋಣ ತುಸು ಬಿಡುವು ಮಾಡಿಕೊ ಎಂದು ಕೇಳಿದ್ದರು. ಬಚ್ಚನ್ ಅವರಿಂದ ಕರೆ ಬಂದಿದೆ ಎಂದು ನಾನು ಸಹ ಕೂಡಲೇ ಬಿಡುವು ಮಾಡಿಕೊಂಡು ಸಿನಿಮಾದಲ್ಲಿ ನಟಿಸಿದೆ. ಸಿನಿಮಾವನ್ನು ಹೆಚ್ಚು ಮೊತ್ತಕ್ಕೆ ಮಾರಿ ಬಿಡುವುದು ನಿರ್ಮಾಪಕ ದೀಪಕ್ ಉದ್ದೇಶವಾಗಿತ್ತು, ಆದರೆ ಬಚ್ಚನ್ ಅವರೇ ಸಲಹೆ ನೀಡಿ ಬಿಡುಗಡೆ ಮಾಡುವಂತೆ ಹೇಳಿದರು. 1.50 ಕೋಟಿ ಬಜೆಟ್​ನ ಆ ಸಿನಿಮಾ 8 ಕೋಟಿ ಗಳಿಸಿತ್ತು” ಎಂದು ನೆನಪು ಮಾಡಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರ ಮೊದಲ ಭೋಜ್​ಪುರಿ ಸಿನಿಮಾ ‘ಗಂಗಾ’ ಆಗಿತ್ತು ಅದಾದ ಬಳಿಕ ಇನ್ನೂ ಕೆಲವು ಭೋಜ್​ಪುರಿ ಸಿನಿಮಾಗಳಲ್ಲಿ ಬಚ್ಚನ್ ನಟಿಸಿದರು. ಭೋಜ್​ಪುರಿ ಸಿನಿಮಾ ಸಣ್ಣ ಮಾರುಕಟ್ಟೆ ಹೊಂದಿದೆ. ತೀರಾ ಮಸಾಲೆಭರಿತ ಸಿನಿಮಾಗಳ ಸಂಖ್ಯೆ ಅಲ್ಲಿ ಹೆಚ್ಚು. ಬಾಲಿವುಡ್ ಹಾಗೂ ದಕ್ಷಿಣ ಭಾರತದ ಹಲವು ನಟಿಯರು ಭೋಜ್​ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವು ನಟಿಯರು ಸಹ ಭೋಜ್​ಪುರಿ ಸಿನಿಮಾಗಳಲ್ಲಿ ನಟಿಸಿರುವುದು ಇದೆ. ಹಲವು ಬಾಲಿವುಡ್ ನಟಿಯರೂ ಸಹ ಭೋಜ್​ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಅಮಿತಾಬ್ ಬಚ್ಚನ್ ಕನ್ನಡದ ಅಮೃತಧಾರೆ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ