ಪವನ್ ಕಲ್ಯಾಣ್ ಸಿನಿಮಾ ನೋಡಿ ಸಿಟ್ಟಾಗಿದ್ದ ಅಮಿತಾಬ್ ಬಚ್ಚನ್: ಯಾಕೆ? ಸಿನಿಮಾ ಯಾವುದು?

Amitabh Bachchan: ಪವನ್ ಕಲ್ಯಾಣ್​ರ ಹಳೆಯ ಸಿನಿಮಾ ಒಂದನ್ನು ನೋಡುವಾಗ ಸಿಟ್ಟು ಬಂದು ಕೀ ಬಿಸಾಡಿದ್ದರಂತೆ ಅಮಿತಾಬ್ ಬಚ್ಚನ್! ಯಾವುದು ಆ ಸಿನಿಮಾ?

ಪವನ್ ಕಲ್ಯಾಣ್ ಸಿನಿಮಾ ನೋಡಿ ಸಿಟ್ಟಾಗಿದ್ದ ಅಮಿತಾಬ್ ಬಚ್ಚನ್: ಯಾಕೆ? ಸಿನಿಮಾ ಯಾವುದು?
ಅಮಿತಾಬ್ ಬಚ್ಚನ್-ಪವನ್ ಕಲ್ಯಾಣ್
Follow us
ಮಂಜುನಾಥ ಸಿ.
|

Updated on: Jun 30, 2023 | 8:06 PM

ಪವನ್ ಕಲ್ಯಾಣ್ (Pawan Kalyan) ಈಗ ಸೂಪರ್ ಸ್ಟಾರ್ ನಟ, ಅವರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ. ಅವರ ಸಿನಿಮಾಗಳನ್ನು ತೆಲುಗು ಜನರು ಮಾತ್ರವಲ್ಲದೆ ಇತರೆ ಭಾಷೆಯ ಜನರೂ ನೋಡಿ ಮೆಚ್ಚಿದ್ದಾರೆ. ಆದರೆ ಬಹಳ ವರ್ಷಗಳ ಹಿಂದೊಮ್ಮೆ ಪವನ್ ಕಲ್ಯಾಣ್​ರ ಸಿನಿಮಾ ನೋಡಿದ್ದ ಅಮಿತಾಬ್ ಬಚ್ಚನ್ (Amitabh Bachchan), ಸಿನಿಮಾ ನೋಡುವಾಗಲೇ ಸಿಟ್ಟಾಗಿ ಬೀಗವನ್ನು ಟಿವಿಯತ್ತ ಬಿಸಾಡಿಬಿಟ್ಟಿದ್ದರಂತೆ.

ಪವನ್ ಕಲ್ಯಾಣ್​ರ ನಾಲ್ಕನೇ ಸಿನಿಮಾ ‘ತೊಲಿ ಪ್ರೇಮ’ ಬಿಡುಗಡೆ ಆಗಿ ಬರೋಬ್ಬರಿ 25 ವರ್ಷಗಳಾಗಿವೆ. ‘ತೊಲಿ ಪ್ರೇಮ’ ಕಲ್ಟ್ ಕ್ಲಾಸಿಕ್ ಎಂದು ತೆಲುಗು ಚಿತ್ರರಂಗದಲ್ಲಿ ಗುರುತಾಗಿರುವ ಸಿನಿಮಾ. ಈ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗಿದ್ದು, ಪವನ್ ಅಭಿಮಾನಿಗಳು ಹುಚ್ಚೆದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಸಿನಿಮಾ 25 ವರ್ಷ ಪೂರೈಸಿದ ಕಾರಣ ಸಿನಿಮಾ ನಿರ್ದೇಶಕ ಎ ಕರುಣಾಕರನ್ ಹಲವು ಸಂದರ್ಶನಗಳನ್ನು ನೀಡಿದ್ದು, ಅಮಿತಾಬ್ ಬಚ್ಚನ್ ಒಮ್ಮೆ ತಮ್ಮ ತೊಲಿ ಪ್ರೇಮ ಸಿನಿಮಾ ನೀಡಿ ಸಿಟ್ಟಿನಿಂದ ವರ್ತಿಸಿದ್ದ ಘಟನೆ ಬಿಚ್ಚಿಟ್ಟದ್ದಾರೆ.

”ಅಮಿತಾಬ್ ಬಚ್ಚನ್ ತಮ್ಮ ಮನೆಯಲ್ಲಿ ‘ತೊಲಿ ಪ್ರೇಮ’ ಸಿನಿಮಾ ನೋಡಿದರಂತೆ. ಸಿನಿಮಾದ ಕ್ಲೈಮ್ಯಾಕ್ಸ್ ಗೆ ಬಂದರೂ ನಾಯಕ, ನಾಯಕಿಗೆ ತನ್ನ ಪ್ರೇಮನಿವೇದನೆ ಮಾಡದೇ ಇರುವುದನ್ನು ಕಂಡು ಟೆನ್ಷನ್​ನಿಂದ ತಮ್ಮ ಕೈಯಲ್ಲಿದ್ದ ಕೀ ಒಂದನ್ನು ಟಿವಿಯ ಕಡೆ ಎಸೆದುಬಿಟ್ಟರಂತೆ. ಆದರೆ ಅವರ ಜೊತೆಗೆ ಸಿನಿಮಾ ನೋಡುತ್ತಿದ್ದ ಜಯಾ ಬಚ್ಚನ್ ಅವರು ಸಿನಿಮಾವನ್ನು ಬಹಳ ಎಂಜಾಯ್ ಮಾಡಿದರಂತೆ. ಕೊನೆಯಲ್ಲಿ ನಾಯಕಿ ಮರಳಿ ನಾಯಕನ ಬಳಿ ಬಂದಾಗ ಖುಷಿಯಿಂದ ಚಪ್ಪಾಳೆ ತಟ್ಟಿದರಂತೆ” ಈ ವಿಷಯವನ್ನು ಸ್ವತಃ ಅಮಿತಾಬ್ ಬಚ್ಚನ್ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ತಮ್ಮ ಬಳಿ ಹೇಳಿದ್ದರು ಎಂದು ಕರುಣಾಕರನ್ ಹೇಳಿದ್ದಾರೆ.

ಇದನ್ನೂ ಓದಿ:‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು’; ಸಾರ್ವಜನಿಕವಾಗಿ ಒಪ್ಪಿಕೊಂಡ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ನಟಿಸಿದ್ದ ತೊಲಿ ಪ್ರೇಮ ಸಿನಿಮಾ 1998 ರ ಜುಲೈ 24 ರಂದು ಬಿಡುಗಡೆ ಆಗಿತ್ತು. ಅದ್ಭುತವಾದ ಹಾಡುಗಳು, ಕಾಮಿಡಿ ಹಾಗೂ ಸುಂದರ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿತ್ತು. ಕರುಣಾಕರನ್ ಅವರ ಮೊದಲ ಸಿನಿಮಾ ಇದಾಗಿದ್ದು ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಸಿನಿಮಾ ಮರು ಬಿಡುಗಡೆ ಆಗಿದ್ದು ಮತ್ತೊಮ್ಮೆ ಪವನ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ತೊಲಿ ಪ್ರೇಮ ಸಿನಿಮಾ ತಮಿಳಿಗೆ ಆನಂದಮಳೈ ಹೆಸರಿನಲ್ಲಿ ಡಬ್ ಆಗಿ ಬಿಡುಗಡೆ ಆಯ್ತು. ಕನ್ನಡದಲ್ಲಿ ಈ ಸಿನಿಮಾ ಪ್ರೀತ್ಸು ತಪ್ಪೇನಿಲ್ಲ ಹೆಸರಿನಲ್ಲಿ ರೀಮೇಕ್ ಆಯ್ತು. ಸಿನಿಮಾದಲ್ಲಿ ರವಿಚಂದ್ರನ್ ನಾಯಕ. ಹಿಂದಿಯಲ್ಲಿ ಇದೇ ಸಿನಿಮಾ ಮುಝೆ ಕುಚ್ ಕೆಹನಾ ಹೈ ಹೆಸರಿನಲ್ಲಿ ರೀಮೇಕ್ ಆಗಿ ಅಲ್ಲಿಯೂ ಹಿಟ್ ಆಯಿತು.

1998 ಪವನ್ ಕಲ್ಯಾಣ್ ಪಾಲಿಗೆ ಅತ್ಯಂತ ಮಹತ್ವದ ವರ್ಷವಾಯ್ತು. ಪವನ್​ರ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸುಸ್ವಾಗತಂ ಸಹ ಇದೇ ವರ್ಷ ಬಿಡುಗಡೆ ಆಯ್ತು. ಸುಸ್ವಾಗತಂ ಹಾಗೂ ತೊಲಿ ಪ್ರೇಮ ಸಿನಿಮಾಗಳ ಬಳಿಕ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿಬಿಟ್ಟರು ಪವನ್ ಕಲ್ಯಾಣ್. ಆ ನಂತರ ಪವನ್ ನಟಿಸಿದ ಐದು ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗಿ ದೊಡ್ಡ ಹಿಟ್ ಆದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್