Weekend With Ramesh: ರಮ್ಯಾಗೆ ಕಾದಿದೆ ಅಚ್ಚರಿ, ಅಮಿತಾಬ್ ಬಚ್ಚನ್ ಬರ್ತಿದ್ದಾರಾ?

ಮಂಜುನಾಥ ಸಿ.

| Edited By: ಗಣಪತಿ ಶರ್ಮ

Updated on:Mar 23, 2023 | 11:06 PM

ವೀಕೆಂಡ್ ವಿಥ್ ರಮೇಶ್ ಸೀಸನ್ 5ರ ಮೊದಲ ಎಪಿಸೋಡ್​ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿರುವ ನಟಿ ರಮ್ಯಾಗೆ ಅಚ್ಚರಿಯ ಮೇಲೆ ಅಚ್ಚರಿಗಳು ಎದುರಾಗಿವೆ. ಶೋಗೆ ಅಮಿತಾಬ್ ಬಚ್ಚನ್ ಬರ್ತಿದ್ದಾರಾ?

Weekend With Ramesh: ರಮ್ಯಾಗೆ ಕಾದಿದೆ ಅಚ್ಚರಿ, ಅಮಿತಾಬ್ ಬಚ್ಚನ್ ಬರ್ತಿದ್ದಾರಾ?
ರಮ್ಯ-ಅಮಿತಾಬ್ ಬಚ್ಚನ್

Follow us on

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ (Weekend With Ramesh) ನಾಲ್ಕು ವರ್ಷಗಳ ಬಳಿಕ ಮತ್ತೆ ಬರುತ್ತಿದೆ. ವೀಕೆಂಡ್ ವಿತ್ ರಮೇಶ್​ನ ಐದನೇ ಸೀಸನ್ ಇನ್ನೆರಡು ದಿನಗಳಲ್ಲಿ ಪ್ರಸಾರವಾಗಲಿದ್ದು, ಹೊಸ ಸೀಸನ್​ನ ಮೊದಲ ಅತಿಥಿ ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ (Ramya) ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ. ಮೊದಲ ಎಪಿಸೋಡ್​ನ ಪ್ರೋಮೋಗಳು ಈಗಾಗಲೇ ವೈರಲ್ ಆಗಿದ್ದು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾಗೆ ಹಲವು ಅಚ್ಚರಿಗಳು ಎದುರಾಗಿವೆ.

ನಟಿ ರಮ್ಯಾರ ಶಾಲಾ ಶಿಕ್ಷಕಿ, ಬಾಲ್ಯ ಸ್ನೇಹಿತೆಯರು, ಚಿತ್ರರಂಗದ ಕೆಲವು ಗೆಳೆಯರು ಆಗಮಿಸಿ ರಮ್ಯಾ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆಂಬುದು ಎಪಿಸೋಡ್​ನ ಮೊದಲ ಪ್ರೋಮೋಯಿಂದ ತಿಳಿದು ಬಂದಿತ್ತು. ಇದೀಗ ಬಿಡುಗಡೆ ಆಗಿರುವ ಹೊಸ ಪ್ರೋಮೋ ನೋಡಿದವರಿಗೆ ಅಮಿತಾಬ್ ಬಚ್ಚನ್ ಅವರೂ ಕಾರ್ಯಕ್ರಮಕ್ಕೆ ಆಗಮಿಸಿ ರಮ್ಯಾಗೆ ಶಾಕ್ ನೀಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಹೌದು, ಇದೀಗ ಬಿಡುಗಡೆ ಆಗಿರುವ ಎರಡನೇ ಪ್ರೋಮೋನಲ್ಲಿ ನಿರೂಪಕ ರಮೇಶ್ ಅವರು ಅತಿಥಿ ರಮ್ಯಾ ಅವರೊಟ್ಟಿಗೆ ಅವರ ಸೂಪರ್-ಡೂಪರ್ ಹಿಟ್ ಸಿನಿಮಾ ಅಮೃತಧಾರೆ ಕುರಿತಾಗಿ ಮಾತನಾಡಿದ್ದಾರೆ. ಅಮೃತಧಾರೆ ಸಿನಿಮಾದ ನಾಯಕ ಧ್ಯಾನ್ ವಿಡಿಯೋ ಮೂಲಕ ರಮ್ಯಾಗೆ ಸರ್ಪ್ರೈಸ್ ನೀಡಿದ್ದಾರೆ. ಅಮೃತಧಾರೆ ಸಿನಿಮಾದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಹ ವಿಡಿಯೋ ಮೂಲಕ ರಮ್ಯಾಗೆ ವಿಷ್ ಮಾಡಿದ್ದಲ್ಲದೆ, ಲಡಾಕ್​ನಲ್ಲಿ ಶೂಟಿಂಗ್ ಮಾಡುವಾಗ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ರಮ್ಯ ಸಹ ಆ ನೆನಪುಗಳಿಗೆ ಜಾರಿ, ಸೈನಿಕರು ತಮಗೆ ಸಹಾಯ ಮಾಡಿದ್ದು, ಆಸ್ಪತ್ರೆಗೆ ಕೊಂಡೊಯ್ದ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಅದೇ ಸಮಯದಲ್ಲಿ ಅಮೃತಧಾರೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ರಮ್ಯಾ ತೆಗೆಸಿಕೊಂಡಿದ್ದ ಚಿತ್ರವನ್ನು ತೋರಿಸಲಾಗುತ್ತದೆ. ಆಗ ರಮ್ಯಾ, ನೋಡಿ ಅದು ಎಷ್ಟು ಅಂದವಾದ ಚಿತ್ರ ಎನ್ನುತ್ತಾರೆ. ಆ ಬಳಿಕ ಅಮಿತಾಬ್ ಬಚ್ಚನ್ ಸಹ ಇಲ್ಲಿಗೆ ಬಂದಿದ್ದಾರಾ? ಎಂದು ರಮ್ಯಾ ಕೇಳುತ್ತಾರೆ ಆಗ ನಿರೂಪಕ ರಮೇಶ್ ನಮಸ್ತೆ ಅಮಿತ್ ಜೀ ಎನ್ನುತ್ತಾ ಕೈ ಮುಗಿದುಕೊಂಡು ಮುಂದೆ ಬರುತ್ತಾರೆ. ನಟಿ ರಮ್ಯಾ ಸಹ ಆಶ್ಚರ್ಯಚಕಿತರಾಗಿ ಕುರ್ಚಿಯಿಂದ ಇಳಿಯುತ್ತಾರೆ. ಆದರೆ ನಿಜಕ್ಕೂ ಅಮಿತಾಬ್ ಬಚ್ಚನ್ ಬಂದಿದ್ದಾರಾ ಇಲ್ಲವಾ ಎಂಬುದನ್ನು ಪ್ರೋಮೋನಲ್ಲಿ ತೋರಿಸಲಾಗಿಲ್ಲ. ಆದರೆ ರಮೇಶ್ ಹಾಗೂ ರಮ್ಯಾರ ರಿಯಾಕ್ಷನ್​ನಿಂದ ಅಮಿತಾಬ್ ಕಾರ್ಯಕ್ರಮಕ್ಕೆ ಬಂದಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ.

ಅಮಿತಾಬ್ ಬಚ್ಚನ್ ಬಂದಿರುವುದು ಅನುಮಾನವಾದರೂ ರಮ್ಯಾಗಾಗಿ ಬಚ್ಚನ್ ಅವರು ವಿಡಿಯೋ ಒಂದನ್ನು ಕಳಿಸಿರುವ ಸಾಧ್ಯತೆಯಂತೂ ಇದೆ. ಅಮೃತಧಾರೆ ಸಿನಿಮಾದಲ್ಲಿ ರಮ್ಯಾ, ಅಮಿತಾಬ್ ಬಚ್ಚನ್​ ಜೊತೆ ನಟಿಸಿದ್ದಾರೆ. ಇದು ಅಮಿತಾಬ್ ಬಚ್ಚನ್ ನಟಿಸಿರುವ ಈವರೆಗಿನ ಏಕೈಕ ಕನ್ನಡ ಸಿನಿಮಾ. ವೀಕೆಂಡ್ ವಿತ್ ರಮೇಶ್​ನ ಮೊದಲ ಎಪಿಸೋಡ್ ಮಾರ್ಚ್ 25 ರಂದು ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada