‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು’; ಸಾರ್ವಜನಿಕವಾಗಿ ಒಪ್ಪಿಕೊಂಡ ಪವನ್ ಕಲ್ಯಾಣ್

Pawan Kalyan: ‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು. ಅವರೆಲ್ಲ ಪ್ಯಾನ್ ಇಂಡಿಯಾ ಹೀರೋಗಳು. ರಾಮ್ ಚರಣ್ ಮತ್ತು ಜೂ.ಎನ್​ಟಿಆರ್ ಜಾಗತಿಕ ಮಟ್ಟಕ್ಕೆ ಏರಿದ್ದಾರೆ’ ಎಂದಿದ್ದಾರೆ ಪವನ್ ಕಲ್ಯಾಣ್.

‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು’; ಸಾರ್ವಜನಿಕವಾಗಿ ಒಪ್ಪಿಕೊಂಡ ಪವನ್ ಕಲ್ಯಾಣ್
ಪ್ರಭಾಸ್, ಪವನ್ ಕಲ್ಯಾಣ್, ಮಹೇಶ್ ಬಾಬು
Follow us
ರಾಜೇಶ್ ದುಗ್ಗುಮನೆ
|

Updated on:Jun 22, 2023 | 9:53 AM

‘ಟಾಲಿವುಡ್ ಸ್ಟಾರ್ ಹೀರೋಗಳಾದ ಪ್ರಭಾಸ್ ಮತ್ತು ಮಹೇಶ್ ಬಾಬು (Mahesh Babu) ಅವರು ನನಗಿಂತ ದೊಡ್ಡ ಹೀರೋಗಳು. ನನಗಿಂತ ಅವರು ಹೆಚ್ಚು ಸಂಭಾವನೆ ಪಡೆಯುತ್ತಾರೆ’ ಎಂದು ಟಾಲಿವುಡ್ ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಯಾತ್ರೆ ಮಾಡುತ್ತಿದ್ದಾರೆ. ಅವರು ಬುಧವಾರ (ಜೂನ್ 21) ಕೋನಸೀಮಾ ಜಿಲ್ಲೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಅವರು ಈ ವೇಳೆ ಟಾಲಿವುಡ್ ಹೀರೋಗಳ ಬಗ್ಗೆ ಮಾತನಾಡಿದ್ದಾರೆ.

‘ನನ್ನ ಅಭಿಮಾನಿಗಳು ಮತ್ತು ಜೂ.ಎನ್‌ಟಿಆರ್ ಅಭಿಮಾನಿಗಳು ಯಾವಾಗಲೂ ಜಗಳವಾಡುತ್ತಾರೆ ಎಂದು ಕೆಲವರು ಹೇಳುತ್ತಾರೆ. ಸಿನಿಮಾ ಎಂದರೆ ಮನರಂಜನೆ ಮತ್ತು ಖುಷಿ. ಜೂನಿಯರ್ ಎನ್​​ಟಿಆರ್, ಮಹೇಶ್ ಬಾಬು, ರಾಮ್ ಚರಣ್, ಅಲ್ಲು ಅರ್ಜುನ್, ಚಿರಂಜೀವಿ, ಬಾಲಕೃಷ್ಣ ಹೀಗೆ ಎಲ್ಲ ಹೀರೋಗಳ ಬಗೆಗೂ ನನಗೆ ಗೌರವ ಇದೆ. ಅವರ ಎಲ್ಲಾ ಸಿನಿಮಾಗಳನ್ನು ನಾನು ನೋಡುತ್ತೇನೆ. ನಾವು ಮುಖಾಮುಖಿಯಾದಾಗ ಮಾತನಾಡುತ್ತೇವೆ. ರಾಜಕೀಯದಲ್ಲಿ ನಾಯಕರ ಮೇಲೆ ಪ್ರೀತಿ ತೋರಿಸಬೇಡಿ. ಸಿನಿಮಾ ಬೇರೆ, ರಾಜಕೀಯ ಬೇರೆ’ ಎಂದರು ಪವನ್ ಕಲ್ಯಾಣ್.

‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು. ಅವರೆಲ್ಲ ಪ್ಯಾನ್ ಇಂಡಿಯಾ ಹೀರೋಗಳು. ರಾಮ್ ಚರಣ್ ಮತ್ತು ಜೂ.ಎನ್​ಟಿಆರ್ ಜಾಗತಿಕ ಮಟ್ಟಕ್ಕೆ ಏರಿದ್ದಾರೆ. ಅವರು ನನಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅವರು ಪ್ರಪಂಚ ತಿಳಿದಿರುವಷ್ಟು ನನಗೆ ತಿಳಿದಿಲ್ಲ. ಆ ವಿಚಾರ ಹೇಳಲು ನನಗೆ ಯಾವುದೇ ಅಹಂ ಇಲ್ಲ. ಪ್ರತಿ ವ್ಯಕ್ತಿಯೂ ಒಳ್ಳೆಯವನಾಗಿರಬೇಕು ಎಂದು ನಾನು ಬಯಸುತ್ತೇನೆ. ಜಾತಿಯ ಆಧಾರದ ಮೇಲೆ ನಮ್ಮೊಳಗೆ ಜಗಳವಾಡುವುದು ಬೇಡ. ಸಿನಿಮಾ ವಿಚಾರದಲ್ಲಿ ಎಲ್ಲರನ್ನೂ ಬೆಂಬಲಿಸೋಣ. ಆದರೆ ರಾಜಕೀಯದ ವಿಚಾರದಲ್ಲಿ ಒಟ್ಟಾಗಿ ಯೋಚಿಸೋಣ. ಹೋರಾಟ ಮಾಡುವವರು ಈ ಸಮಾಜಕ್ಕೆ ಬೇಕು. ನಾನು ಮಾ ತ್ರ ಸಾಕಾಗುವುದಿಲ್ಲ. ಅನ್ಯಾಯವನ್ನು ಪ್ರಶ್ನಿಸುವ ನಾಯಕರು ಬೇಕು’ ಎಂದರು ಪವನ್ ಕಲ್ಯಾಣ್.

ಇದನ್ನೂ ಓದಿ: ”ಪವನ್ ಕಲ್ಯಾಣ್ ಡ್ರಗ್ಸ್ ತೆಗೆದುಕೊಳ್ಳುತ್ತಾನೆ, ಆತನೊಬ್ಬ ರಾಜಕೀಯ ವ್ಯಭಿಚಾರಿ”

ಪವನ್ ಕಲ್ಯಾಣ್ ಅವರ ಈ ಹೇಳಿಕೆ ವೈರಲ್ ಆಗುತ್ತಿದೆ. ವಿವಿಧ ರೀತಿಯಲ್ಲಿ ಇದನ್ನು ಚರ್ಚಿಸಲಾಗುತ್ತಿದೆ. ರಾಜಕೀಯ ಲಾಭ ಪಡೆಯಲು ಪವನ್ ಹೀಗೆ ಹೇಳಿದ್ದಾರೆ ಎಂದು ಕೂಡ ಕೆಲವರು ಬಣ್ಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Thu, 22 June 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ