Jawan: ‘ತಾಕತ್ತಿದ್ದರೆ ಜವಾನ್ ಎದುರು ನಿಮ್ಮ ಸಿನಿಮಾ ರಿಲೀಸ್ ಮಾಡಿ’: ವಿವೇಕ್ ಅಗ್ನಿಹೋತ್ರಿಗೆ ನೇರ ಸವಾಲು
Vivek Agnihotri: ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರು ನೇರವಾಗಿ ಚಾಲೆಂಜ್ ಮಾಡಿದ್ದಾರೆ.
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಸಖತ್ ಜನಪ್ರಿಯತೆ ಸಿಕ್ಕಿತು. ಈಗ ಅವರು ‘ದಿ ವ್ಯಾಕ್ಸಿನ್ ವಾರ್’ (Vivek Agnihotri) ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ ಸಿನಿಮಾ ಬಿಡುಗಡೆ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ನೆಟ್ಟಿಗರೊಬ್ಬರು ನೇರ ಸವಾಲು ಎಸೆದಿದ್ದಾರೆ. ‘ತಾಕತ್ತಿದ್ದರೆ ನಿಮ್ಮ ಸಿನಿಮಾವನ್ನು ಜವಾನ್ (Jawan Movie) ಚಿತ್ರದ ಎದುರು ರಿಲೀಸ್ ಮಾಡಿ’ ಎಂದು ಚಾಲೆಂಜ್ ಮಾಡಲಾಗಿದೆ. ಅದಕ್ಕೆ ವಿವೇಕ್ ಅಗ್ನಿಹೋತ್ರಿ ಕೊಟ್ಟ ಉತ್ತರ ಏನು? ಈ ಸ್ಟೋರಿಯಲ್ಲಿದೆ ವಿವರ..
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಮೇಲೆ ಭರ್ಜರಿ ಹೈಪ್ ಕ್ರಿಯೇಟ್ ಆಗಿದೆ. ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿರುವ ಪ್ರಿವ್ಯೂ ನೋಡಿ ಜನರು ವಾವ್ ಎನ್ನುತ್ತಿದ್ದಾರೆ. ಸೆಪ್ಟೆಂಬರ್ 7ರಂದು ‘ಜವಾನ್’ ರಿಲೀಸ್ ಆಗಲಿದೆ. ಆ ಸಿನಿಮಾ ಖಂಡಿತವಾಗಿಯೂ ಬ್ಲಾಕ್ಬಸ್ಟರ್ ಆಗಲಿದೆ ಎಂದು ಅನೇಕರು ಭವಿಷ್ಯ ನುಡಿಯುತ್ತಿದ್ದಾರೆ. ಅಂಥ ಸಿನಿಮಾದ ಎದುರು ತಮ್ಮ ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ರಿಲೀಸ್ ಮಾಡಲು ವಿವೇಕ್ ಅಗ್ನಿಹೋತ್ರಿ ಕೂಡ ಸಿದ್ಧರಿಲ್ಲ.
We aren’t in Bollywood game and terms like ‘clash’ etc. are for stars and media. I can guarantee S RK’s Jawan will be an all-time blockbuster. But after seeing it please also see our small film about India’s greatest victory in a war you know nothing about. #TheVaccineWar https://t.co/gYE2iUdIos
— Vivek Ranjan Agnihotri (@vivekagnihotri) July 12, 2023
ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರು ನೇರವಾಗಿ ಚಾಲೆಂಜ್ ಮಾಡಿದ್ದಾರೆ. ‘ತಾಕತ್ತಿದ್ದರೆ ಶಾರುಖ್ ಖಾನ್ ಎದುರು ಕ್ಲ್ಯಾಶ್ ಮಾಡಿಕೊಳ್ಳಿ’ ಎಂದು ಸವಾಲು ಎಸೆದಿದ್ದಾರೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ಕೂಲ್ ಆಗಿ ಉತ್ತರ ನೀಡಿದ್ದಾರೆ. ‘ಬಾಲಿವುಡ್ನ ಆಟದಲ್ಲಿ ನಾವು ಭಾಗಿಯಾಗಲ್ಲ. ಕ್ಲ್ಯಾಶ್ ಎಂಬ ಪದ ಇರುವುದು ಸ್ಟಾರ್ಗಳಿಗೆ ಮತ್ತು ಮಾಧ್ಯಮದವರಿಗೆ ಮಾತ್ರ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
‘ನಾನು ಭರವಸೆ ಕೊಡುತ್ತೇನೆ. ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಆಗಲಿದೆ. ಅದನ್ನು ನೋಡಿದ ಬಳಿಕ ದಯವಿಟ್ಟು ನಮ್ಮ ಚಿಕ್ಕ ಸಿನಿಮಾವನ್ನೂ ನೋಡಿ. ಭಾರತದ ದೊಡ್ಡ ಯುದ್ಧದ ಬಗ್ಗೆ ನಿಮಗೆ ತಿಳಿದಿರದ ವಿಷಯಗಳು ಕುರಿತು ಮಾಡಿರುವ ಸಿನಿಮಾ ನಮ್ಮದು’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.