Mouni Roy: ಪಾಸ್ಪೋರ್ಟ್ ಇಲ್ಲದೇ ವಿಮಾನ ನಿಲ್ದಾಣ ಪ್ರವೇಶಿಸಲು ಯತ್ನಿಸಿದ ಮೌನಿ ರಾಯ್; ವಾಪಸ್ ಮನೆಗೆ ಕಳಿಸಿದ ಅಧಿಕಾರಿ
Mouni Roy Viral Video: ವಿಮಾನ ನಿಲ್ದಾಣದಲ್ಲಿ ಮೌನಿ ರಾಯ್ ಅವರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಅವರು ವಾಪಸ್ ಮನೆ ಕಡೆ ಹೊರಟರು.
ಸೆಲೆಬ್ರಿಟಿಗಳು ಸದಾ ಕಾಲ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಹಲವು ದೇಶಗಳಿಗೆ ಅವರು ಭೇಟಿ ನೀಡುತ್ತಾರೆ. ಈ ವೇಳೆ ಅಗತ್ಯ ದಾಖಲೆ ಪತ್ರಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕಾದ್ದು ಅವರ ಜವಾಬ್ದಾರಿ. ಆದರೆ ಮೌನಿ ರಾಯ್ (Mouni Roy) ಅವರು ಈ ವಿಚಾರದಲ್ಲಿ ಕೊಂಚ ಎಡವಿದ್ದಾರೆ. ಪಾಸ್ಪೋರ್ಟ್ ಇಲ್ಲದೆಯೇ ಅವರು ಮುಂಬೈ ವಿಮಾನ ನಿಲ್ದಾಣವನ್ನು (Mumbai Airport) ಪ್ರವೇಶಿಸಲು ಯತ್ನಿಸಿದ್ದಾರೆ. ಆದರೆ ಅಲ್ಲಿದ್ದ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಿಲ್ಲ. ಮೌನಿ ಬಳಿ ಪಾಸ್ಪೋರ್ಟ್ (Passport) ಇಲ್ಲ ಎಂದು ಗೊತ್ತಾದ ತಕ್ಷಣ ಅವರನ್ನು ವಾಪಸ್ ಕಳಿಸಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮೌನಿ ರಾಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ಮತ್ತು ವಿಡಿಯೋಗಾಗಿ ಪಾಪರಾಜಿಗಳು ಮುತ್ತಿಗೆ ಹಾಕುತ್ತಾರೆ. ಇತ್ತೀಚೆಗೆ ಅದೇ ರೀತಿ ಆಯಿತು. ಪಾಪರಾಜಿಗಳ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದರು. ಆಗ ಅಲ್ಲಿದ್ದ ಅಧಿಕಾರಿಯು ಪಾಸ್ಪೋರ್ಟ್ ತೋರಿಸುವಂತೆ ಸೂಚಿಸಿದ್ದಾರೆ. ಬ್ಯಾಗ್ ಪೂರ್ತಿ ಹುಡುಕಾಡಿದರೂ ಮೌನಿ ರಾಯ್ಗೆ ಪಾಸ್ ಪೋರ್ಟ್ ಸಿಕ್ಕಿಲ್ಲ. ಹಾಗಾಗಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಯಿತು. ಬೇರೆ ಆಯ್ಕೆ ಇಲ್ಲದೇ ಮೌನಿ ರಾಯ್ ವಾಪಸ್ ಮನೆ ಕಡೆ ಹೊರಟರು.
View this post on Instagram
ಈ ವಿಡಿಯೋ ವೈರಲ್ ಆದ ಬಳಿಕ ಮೌನಿ ರಾಯ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ‘ಪ್ರಚಾರ ಪಡೆಯುವ ಸಲುವಾಗಿ ಪಾಪರಾಜಿಗಳಿಗೆ ಫೋನ್ ಮಾಡಿ ಆಹ್ವಾನ ನೀಡುವ ಭರದಲ್ಲಿ ಪಾಸ್ಪೋರ್ಟ್ ಇಟ್ಟುಕೊಳ್ಳುವುದನ್ನೇ ಮೌನಿ ರಾಯ್ ಮರೆತಿದ್ದಾರೆ’ ಎಂದು ಅನೇಕರು ಕಾಲೆಳೆದಿದ್ದಾರೆ. ಇಂಥ ಹಲವಾರು ನೆಗೆಟಿವ್ ಕಮೆಂಟ್ಗಳು ಬಂದಿವೆ. ಆದರೆ ಅದಕ್ಕೆಲ್ಲ ಮೌನಿ ರಾಯ್ ತಲೆ ಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: ಬಿಕಿನಿ ಧರಿಸಿ ಹೊಸ ಫೋಟೋಶೂಟ್ ಮಾಡಿಸಿದ ಮೌನಿ ರಾಯ್
ಚಿತ್ರರಂಗದಲ್ಲಿ ಮೌನಿ ರಾಯ್ ಅವರಿಗೆ ಸಖತ್ ಬೇಡಿಕೆ ಇದೆ. ಕಿರುತೆರೆಯ ಧಾರಾವಾಹಿಗಳಿಂದ ಖ್ಯಾತಿ ಪಡೆದ ಅವರು ನಂತರ ಸಿನಿಮಾಗಳಲ್ಲೂ ದೊಡ್ಡ ದೊಡ್ಡ ಅವಕಾಶಗಳನ್ನು ಪಡೆದರು. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ಅವರಿಗೆ ಸಿಕ್ಕಿತು. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್ ಜೊತೆ ಡ್ಯಾನ್ಸ್ ಮಾಡುವ ಮೂಲಕ ಮೌನಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಈಗ ಅವರ ಕೈಯಲ್ಲಿ ಅನೇಕ ಪ್ರಾಜೆಕ್ಟ್ಗಳಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.