AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್​ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ

ಮಹಿಳೆಯೊಬ್ಬರು ಫೋಟೋ ಕ್ಲಿಕ್ಕಿಸಲು ಸನ್ನಿ ಡಿಯೋಲ್ ಬಳಿ ಬಂದಿದ್ದಾರೆ. ಅವರು ಮಹಿಳೆಯತ್ತ ಕೋಪದಿಂದ ನೋಡಿದ್ದಾರೆ. ಜೊತೆಗೆ ತಮ್ಮನ್ನು ಮುಟ್ಟಬೇಡಿ ಎಂದು ಮಹಿಳೆಗೆ ಸೂಚನೆ ನೀಡಿದ್ದಾರೆ. ಜೊತೆಗೆ ಬಾಯಮೇಲೆ ಕೈಬೆರಳಿಟ್ಟು ಸುಮ್ಮನಿರುವಂತೆ ಸೂಚಿಸಿದ್ದಾರೆ.

‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್​ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ
ಸನ್ನಿ ಡಿಯೋಲ್ (PC: Pinkvilla)Image Credit source: Pinkvilla
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 16, 2023 | 8:38 AM

ಇತ್ತೀಚೆಗೆ ಬಿಡುಗಡೆಯಾದ ‘ಗದರ್ 2’ (Gadar 2 Movie) ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನಟ ಸನ್ನಿ ಡಿಯೋಲ್ ಖ್ಯಾತಿ ಹೆಚ್ಚಿದೆ. ಅವರಿಗೆ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರೋದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಸನ್ನಿ ಡಿಯೋಲ್ ‘ಗದರ್ 2’ ಯಶಸ್ಸನ್ನು ಆನಂದಿಸುತ್ತಿದ್ದಾರೆ. ಮತ್ತೊಂದೆಡೆ, ನಟನ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಸನ್ನಿ ಡಿಯೋಲ್ (Sunny Deol) ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಅವರ ವರ್ತನೆಯನ್ನು ಅನೇಕರು ಟೀಕಿಸುತ್ತಿದ್ದಾರೆ. ಯಶಸ್ಸು ಸಿಕ್ಕ ಬಳಿಕ ಸನ್ನಿಗೆ ಸೊಕ್ಕು ಬಂದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ಗದರ್ 2’ ಸಿನಿಮಾ ಆಗಸ್ಟ್ 11ರಂದು ವಿಶ್ವಾದ್ಯಂತ ರಿಲೀಸ್ ಆಗಿದೆ. ಈ ಚಿತ್ರ ಕೇವಲ ನಾಲ್ಕು ದಿನಕ್ಕೆ 173 ಕೋಟಿ ರೂಪಾಯಿ ಬಾಚಿಕೊಂಡಿದೆ. ನಿನ್ನೆಯ (ಆಗಸ್ಟ್ 15) ಲೆಕ್ಕವೂ ಸೇರಿದರೆ ಸಿನಿಮಾದ ಗಳಿಕೆ 200 ಕೋಟಿ ರೂಪಾಯಿ ಗಡಿ ದಾಟಲಿದೆ. ಈ ಚಿತ್ರ ಶೀಘ್ರವೇ 300 ಕೋಟಿ ರೂಪಾಯಿ ಬಾಚಿಕೊಳ್ಳಲಿದೆ. ಈ ಚಿತ್ರದಿಂದ ಸನ್ನಿ ಡಿಯೋಲ್ ಅವರು ಗೆದ್ದು ಬೀಗಿದ್ದಾರೆ. ಅವರ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಈಗ ಸನ್ನಿ ಡಿಯೋಲ್ ವಿಡಿಯೋ ಒಂದು ವೈರಲ್ ಆಗಿದೆ.

ಮಹಿಳೆಯೊಬ್ಬರು ಫೋಟೋ ಕ್ಲಿಕ್ಕಿಸಲು ಸನ್ನಿ ಡಿಯೋಲ್ ಬಳಿ ಬಂದಿದ್ದಾರೆ. ಅವರು ಮಹಿಳೆಯತ್ತ ಕೋಪದಿಂದ ನೋಡಿದ್ದಾರೆ. ಜೊತೆಗೆ ತಮ್ಮನ್ನು ಮುಟ್ಟಬೇಡಿ ಎಂದು ಮಹಿಳೆಗೆ ಸೂಚನೆ ನೀಡಿದ್ದಾರೆ. ಜೊತೆಗೆ ಬಾಯಮೇಲೆ ಕೈಬೆರಳಿಟ್ಟು ಸುಮ್ಮನಿರುವಂತೆ ಸೂಚಿಸಿದ್ದಾರೆ. ಜನರು ವಿಡಿಯೋಗೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಸನ್ನಿಗೆ ಸೊಕ್ಕು ಹೆಚ್ಚಾಗಿದೆ. ಎಲ್ಲಾ ಯಶಸ್ಸಿನ ಪ್ರಭಾವ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಸನ್ನಿ ಮದ್ಯ ಸೇವನೆ ಮಾಡಿದ್ದರು ಎಂದು ಹೇಳಿದ್ದಾರೆ. ‘ನೀವು ತೆಗೆದುಕೊಂಡ ಔಷಧ ಕೆಲಸ ಮಾಡಲು ಪ್ರಾರಂಭಿಸಿದೆ. ಅವರಿಗೆ ಸರಿ-ತಪ್ಪು ಗೊತ್ತಾಗುತ್ತಿಲ್ಲ’ ಎಂದು ಅನೇಕರು ಹೇಳಿದ್ದಾರೆ.

ಕೆಲವೊಮ್ಮೆ ಸೆಲೆಬ್ರಿಟಿಗಳು ತಮ್ಮದೇ ಚಿಂತೆಯಲ್ಲಿ ಇರುತ್ತಾರೆ. ಅವರು ತಲೆಬಿಸಿಯಲ್ಲಿದ್ದಾಗ ಫ್ಯಾನ್ಸ್ ಬಂದು ಸೆಲ್ಫಿ ಕೇಳಿದರೆ ಅವರು ಇದಕ್ಕೆ ನಿರಾಕರಿಸುತ್ತಾರೆ. ಸನ್ನಿ ಡಿಯೋಲ್ ವಿಚಾರದಲ್ಲೂ ಹಾಗೆಯೇ ಆಗಿರಬಹುದು ಎಂದು ಅನೇಕರು ಸನ್ನಿ ಡಿಯೋಲ್ ಪರ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ: 173 ಕೋಟಿ ರೂ. ದಾಟಿದರೂ ನಿಲ್ಲುತ್ತಲೇ ಇಲ್ಲ ‘ಗದರ್​ 2’ ಅಬ್ಬರ; ದೊಡ್ಡ ಸ್ಟಾರ್​ಗಳ ದಾಖಲೆ ಕೂಡ ಉಡೀಸ್​

‘ಗದರ್ 2’ ಚಿತ್ರವನ್ನು ಅನಿಲ್ ಶರ್ಮಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಮೀಶಾ ಪಟೇಲ್ ಮತ್ತು ಉತ್ಕರ್ಷ್ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಇಷ್ಟು ಪ್ರೀತಿ ತೋರಿಸಿದ ಪ್ರೇಕ್ಷಕರಿಗೆ ಸನ್ನಿ ಡಿಯೋಲ್ ಧನ್ಯವಾದ ಹೇಳುತ್ತಿದ್ದಾರೆ. ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ಮತ್ತು ಅವರ ಸಹೋದರ ಬಾಬಿ ಡಿಯೋಲ್ ಕೂಡ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

ಕಥಾ ನಾಯಕನ ಮಗ ಪಾಕಿಸ್ತಾನದಲ್ಲಿ ಸಿಕ್ಕಿ ಬೀಳುತ್ತಾನೆ. ಆತನ ರಕ್ಷಣೆಗೆ ಕಥಾ ನಾಯಕ ತೆರಳುತ್ತಾನೆ. ಭರ್ಜರಿ ಫೈಟ್ ನಡೆಯುತ್ತದೆ. ಅಲ್ಲಿಂದ ಮಗನ ಕರೆತರಲು ಆತ ಯಶಸ್ವಿ ಆಗುತ್ತಾನೋ ಅಥವಾ ಇಲ್ಲವೋ ಎಂಬುದೇ ಸಿನಿಮಾದ ಕಥೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?