173 ಕೋಟಿ ರೂ. ದಾಟಿದರೂ ನಿಲ್ಲುತ್ತಲೇ ಇಲ್ಲ ‘ಗದರ್​ 2’ ಅಬ್ಬರ; ದೊಡ್ಡ ಸ್ಟಾರ್​ಗಳ ದಾಖಲೆ ಕೂಡ ಉಡೀಸ್​

ಮೊದಲ ದಿನ ‘ಗದರ್​ 2’ ಸಿನಿಮಾ 40.10 ಕೋಟಿ ರೂಪಾಯಿ ಗಳಿಸಿತು. ಈ ಪರಿ ಓಪನಿಂಗ್​ ಸಿಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮೊದಲ ದಿನದ ಕಲೆಕ್ಷನ್​ ನೋಡಿ ಎಲ್ಲರಿಗೂ ಅಚ್ಚರಿ ಆಯಿತು. 2ನೇ ದಿನ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 43.08 ಕೋಟಿ ರೂಪಾಯಿ. ಭಾನುವಾರವಂತೂ ಗಲ್ಲಾಪೆಟ್ಟಿಗೆ ಶೇಕ್​ ಆಯಿತು.

173 ಕೋಟಿ ರೂ. ದಾಟಿದರೂ ನಿಲ್ಲುತ್ತಲೇ ಇಲ್ಲ ‘ಗದರ್​ 2’ ಅಬ್ಬರ; ದೊಡ್ಡ ಸ್ಟಾರ್​ಗಳ ದಾಖಲೆ ಕೂಡ ಉಡೀಸ್​
ಅಮೀಶಾ ಪಟೇಲ್​, ಸನ್ನಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Aug 15, 2023 | 7:03 PM

ನಟ ಸನ್ನಿ ಡಿಯೋಲ್​ (Sunny Deol) ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಗದರ್​ 2’ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆ ಆಯಿತು. ಈ ಚಿತ್ರಕ್ಕೆ ಜನರು ಭರ್ಜರಿ ರೆಸ್ಪಾನ್ಸ್​ ನೀಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮಾಡುತ್ತಿರುವ ಕಮಾಲ್​ ನೋಡಿ ಬಾಲಿವುಡ್​ ಮಂದಿ ದಂಗಾಗಿದ್ದಾರೆ. ಹಿಂದಿಯ ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳು ಮಾಡಿರದ ಸಾಧನೆಯನ್ನು ‘ಗದರ್​ 2’ (Gadar 2) ಸಿನಿಮಾ ಮಾಡಿದೆ. ಕೇವಲ ನಾಲ್ಕು ದಿನಕ್ಕೆ ಈ ಸಿನಿಮಾದ ಕಲೆಕ್ಷನ್​ 173 ಕೋಟಿ ರೂಪಾಯಿ ದಾಟಿದೆ. ನಟಿ ಅಮೀಶಾ ಪಟೇಲ್​ ಅವರಿಗೆ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಂತಾಗಿದೆ. ಇನ್ನೂ ಅನೇಕ ದಿನಗಳ ಕಾಲ ‘ಗದರ್​ 2’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲಿದೆ. ಅನಿಲ್​ ಶರ್ಮಾ ನಿರ್ದೇಶನ ಮಾಡಿರುವ ಈ ಚಿತ್ರದ ಟೋಟಲ್​ ಕಲೆಕ್ಷನ್​ (Gadar 2 Box Office Collection) ಎಷ್ಟಾಗಬಹುದು ಎಂಬ ಕೌತುಕ ಮೂಡಿದೆ.

ಮೊದಲ ದಿನ ‘ಗದರ್​ 2’ ಸಿನಿಮಾ 40.10 ಕೋಟಿ ರೂಪಾಯಿ ಗಳಿಸಿತು. ಈ ಪರಿ ಓಪನಿಂಗ್​ ಸಿಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮೊದಲ ದಿನದ ಕಲೆಕ್ಷನ್​ ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ಎರಡನೇ ದಿನದ ಕಮಾಯಿ ಇನ್ನಷ್ಟು ಹೆಚ್ಚಾಯಿತು. 2ನೇ ದಿನ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 43.08 ಕೋಟಿ ರೂಪಾಯಿ. ಇನ್ನು, ಭಾನುವಾರವಂತೂ ‘ಗದರ್​ 2’ ಸಿನಿಮಾದಿಂದ ಗಲ್ಲಾಪೆಟ್ಟಿಗೆ ಶೇಕ್​ ಆಯಿತು. ಅಂದು ಈ ಚಿತ್ರಕ್ಕೆ 51.70 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು.

ಇದನ್ನೂ ಓದಿ: ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದ ಪಾಕ್ ಯುವಕರು; ಇದು ‘ಗದರ್ 2’ ಎಫೆಕ್ಟ್

ಸೋಮವಾರ ‘ಗದರ್​ 2’ ಸಿನಿಮಾದ ಹವಾ ಕಡಿಮೆ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಹಾಗಾಗಿಲ್ಲ. ಸೋಮವಾರ ಕೂಡ ಈ ಸಿನಿಮಾ 38.70 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಬೀಗಿದೆ. ಇನ್ನು, ಮಂಗಳವಾರ (ಆಗಸ್ಟ್​ 15) ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಜೆ ಇದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮಂಗಳವಾರದ ಕಲೆಕ್ಷನ್​ ಮೊತ್ತ ಎಷ್ಟಾಗಿದೆ ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಬ್ಲಾಕ್​ಬಸ್ಟರ್​ ಆಗಿದೆ.

ತರಣ್ ಆದರ್ಶ್​ ಟ್ವೀಟ್​:

‘ಗದರ್​ 2’ ರಿಲೀಸ್​ ಆದ ದಿನವೇ ‘ಒಎಂಜಿ 2’ ಚಿತ್ರ ಕೂಡ ಬಿಡುಗಡೆ ಆಯಿತು. ಅಕ್ಷಯ್​ ಕುಮಾರ್​ ನಟನೆಯ ಆ ಚಿತ್ರಕ್ಕೆ ಜನರು ನಿರೀಕ್ಷಿತ ಮಟ್ಟದಲ್ಲಿ ಮೆಚ್ಚುಗೆ ನೀಡಿಲ್ಲ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ‘ಒಎಂಜಿ 2’ ಚಿತ್ರಕ್ಕೆ ಹಿನ್ನಡೆ ಆಗಿದೆ. ಇನ್ನು, ದಕ್ಷಿಣ ಭಾರತದಲ್ಲಿ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಅಬ್ಬರಿಸುತ್ತಿದೆ. ಈ ಮೊದಲೇ ರಿಲೀಸ್​ ಆಗಿದ್ದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ಎಲ್ಲ ಸಿನಿಮಾಗಳ ನಡುವೆ ‘ಗದರ್​ 2’ ಸಿನಿಮಾದ ನಾಗಾಲೋಟ ಮುಂದುವರಿದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ