AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಲುವಿಗಾಗಿ ಪಾಕಿಸ್ತಾನಕ್ಕೆ ಕಾಲಿಡಲಿದ್ದಾರೆ ಬಾಲಿವುಡ್ ನಟ ಸಲ್ಮಾನ್ ಖಾನ್

‘ಟೈಗರ್​’ ಸರಣಿಯಲ್ಲಿ ‘ಏಕ್​ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳು ರಿಲೀಸ್ ಆಗಿವೆ. ಇದಾದ ಬಳಿಕ ರಿಲೀಸ್ ಆಗುತ್ತಿರುವುದು ‘ಟೈಗರ್ 3’ ಸಿನಿಮಾ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರ ದೀಪಾವಳಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಗೆಲುವಿಗಾಗಿ ಪಾಕಿಸ್ತಾನಕ್ಕೆ ಕಾಲಿಡಲಿದ್ದಾರೆ ಬಾಲಿವುಡ್ ನಟ ಸಲ್ಮಾನ್ ಖಾನ್
ಕತ್ರಿನಾ-ಸಲ್ಮಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 15, 2023 | 11:49 AM

Share

ನಟ ಸಲ್ಮಾನ್ ಖಾನ್ (Salman Khan) ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿವೆ. ಅವರ ನಟನೆಯ ಚಿತ್ರಗಳು ಈ ಮೊದಲು 200+ ಕೋಟಿ ರೂಪಾಯಿ ಗಳಿಕೆ ಮಾಡುತ್ತಿತ್ತು. ಈಗ ಅವರ ಸಿನಿಮಾಗಳು 100 ಕೋಟಿ ರೂಪಾಯಿ ಗಳಿಕೆ ಮಾಡೋಕೂ ಕಷ್ಟಪಡುತ್ತಿವೆ. ಇದರಿಂದ ನಿರ್ಮಾಪಕರು ಚಿಂತೆಗೆ ಒಳಗಾಗಿದ್ದಾರೆ. ಹೀಗೆ ಮುಂದುವರಿದರೆ ಸಲ್ಲುಗೆ ಬೇಡಿಕೆ ಕಡಿಮೆ ಆಗಬಹುದು. ಈ ಕಾರಣಕ್ಕೆ ಸಲ್ಮಾನ್ ಖಾನ್​ಗೆ ಒಂದು ಡೊಡ್ಡ ಗೆಲುವಿನ ಅವಶ್ಯಕತೆ ಇದೆ. ಗೆಲುವಿನ ಹುಡುಕಾಟದಲ್ಲಿ ಇರುವ ಅವರು ಪಾಕಿಸ್ತಾನಕ್ಕೆ ಕಾಲಿಡಲಿದ್ದಾರೆ. ಹೀಗೊಂದು ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಅಷ್ಟಕ್ಕೂ ಏನಿದು ವಿಚಾರ? ಇಲ್ಲಿದೆ ಅದಕ್ಕೆ ಉತ್ತರ.

ಪಾಕಿಸ್ತಾನ ಹಾಗೂ ಭಾರತದ ಮಧ್ಯೆ ಸಾಕಷ್ಟು ದ್ವೇಷ ಇದೆ. ಗಡಿಯಲ್ಲಿ ಪಾಕ್ ಆಗಾಗ ತಕರಾರು ತೆಗೆಯುತ್ತದೆ. ಈ ವಿಚಾರದ ಮೇಲೆ ಸಾಕಷ್ಟು ಸಿನಿಮಾ ಮೂಡಿಬಂದಿದೆ. ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ‘ಗದರ್ 2’ ಸಿನಿಮಾದ ಕಥೆಯೂ ಇದೇ ರೀತಿ ಇದೆ. ಕಥಾ ನಾಯಕ (ಸನ್ನಿ ಡಿಯೋಲ್) ಮಗನ ರಕ್ಷಣೆಗಾಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಭರ್ಜರಿ ಫೈಟ್ ಮಾಡುತ್ತಾನೆ. ಪಾಕಿಸ್ತಾನದವರ ವಿರುದ್ಧ ತನ್ನ ಶಕ್ತಿಯನ್ನು ತೋರಿಸುವ ಭಾರತೀಯನಾಗಿ ಕಥಾ ನಾಯಕ ಕಾಣಿಸಿಕೊಂಡಿದ್ದಾನೆ. ‘ಟೈಗರ್ 3’ ಸಿನಿಮಾದ ಕಥೆ ಕೂಡ ಇದೇ ರೀತಿ ಇರಲಿದೆಯಂತೆ.

‘ಟೈಗರ್​’ ಸರಣಿಯಲ್ಲಿ ‘ಏಕ್​ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳು ರಿಲೀಸ್ ಆಗಿವೆ. ಇದಾದ ಬಳಿಕ ರಿಲೀಸ್ ಆಗುತ್ತಿರುವುದು ‘ಟೈಗರ್ 3’ ಸಿನಿಮಾ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರ ದೀಪಾವಳಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾದ ಕಥೆಯೂ ಪಾಕಿಸ್ತಾನದಲ್ಲಿ ಸಾಗಲಿದೆಯಂತೆ. ‘ಭಾರತ-ಪಾಕ್ ನಡುವಿನ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಈ ಚಿತ್ರದಲ್ಲಿ ಸಲ್ಲು ಟೈಗರ್ ಪಾತ್ರ ಮಾಡುತ್ತಿದ್ದಾರೆ. ಇಮ್ರಾನ್ ಹಷ್ಮಿ ಐಎಸ್​​ಐ ಏಜೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಭರ್ಜರಿ ಆ್ಯಕ್ಷನ್ ಇರಲಿದೆ. ಪಾಕಿಸ್ತಾನದಲ್ಲೂ ಕಥೆ ಸಾಗುತ್ತದೆ’ ಎಂದು ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್ ಹಂಗಾಮ’ ವರದಿ ಮಾಡಿದೆ.

‘ಟೈಗರ್ 3’ ಸಿನಿಮಾದ ಟೀಸರ್ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈ ಸಿನಿಮಾದ ಟೀಸರ್ ‘ಜವಾನ್’ ಚಿತ್ರದ ಆರಂಭದಲ್ಲಿ ಬಿತ್ತರ ಆಗುವ ಸಾಧ್ಯತೆ ಇದೆಯಂತೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಶಾರುಖ್ ಖಾನ್ ಕೂಡ ಅತಿಥಿ ಪಾತ್ರ ಮಾಡಿದ್ದಾರೆ. ಈ ಮೊದಲು ‘ಪಠಾಣ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದರು.

ಇದನ್ನೂ ಓದಿ: ಕುಗ್ಗಿತು ಸಲ್ಮಾನ್ ಖಾನ್ ಚಾರ್ಮ್​; ಕಳಪೆ ಕಲೆಕ್ಷನ್ ಮಾಡಿದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ

ಮನೀಶ್ ಶರ್ಮಾ ಅವರು ‘ಟೈಗರ್ 3’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರ್ಷ ದೀಪಾವಳಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಇಮ್ರಾನ್ ಹಷ್ಮಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ