AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಿಂತೆ ಯಾಕೆ ಮಾಡಲಿ’ ಅಂತ ನಿರ್ದೇಶಕಿ ಆದ ಹಾಟ್​ ನಟಿ ದಿಶಾ ಪಟಾಣಿ

ಈ ಮೊದಲು ದಿಶಾ ಪಟಾಣಿ ಅವರು ನಟ ಟೈಗರ್​ ಶ್ರಾಫ್​ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಬ್ರೇಕಪ್​ ಮಾಡಿಕೊಂಡಿದ್ದಾರೆ. ಟೈಗರ್​ ಶ್ರಾಫ್​ ಬದಲು ಬೇರೆ ಪ್ರಿಯಕರನ ಸಹವಾಸ ಮಾಡಿದ್ದಾರೆ. ಅದರ ಬೆನ್ನಲ್ಲೇ ನಿರ್ದೇಶನದ ಸುದ್ದಿ ಹೊರಬಿದ್ದಿದೆ.

‘ಚಿಂತೆ ಯಾಕೆ ಮಾಡಲಿ’ ಅಂತ ನಿರ್ದೇಶಕಿ ಆದ ಹಾಟ್​ ನಟಿ ದಿಶಾ ಪಟಾಣಿ
ದಿಶಾ ಪಟಾಣಿ
ಮದನ್​ ಕುಮಾರ್​
|

Updated on: Aug 15, 2023 | 10:59 AM

Share

ಪುರುಷರಿಗೆ ಹೋಲಿಸಿದರೆ ಸಿನಿಮಾ ನಿರ್ದೇಶನ ಮಾಡುವ ಮಹಿಳೆಯರ ಸಂಖ್ಯೆ ಕಡಿಮೆ. ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ನಡೆಯುತ್ತವೆಯಾದರೂ ಗಣನೀಯ ಪ್ರಮಾಣದಲ್ಲಿ ನಿರ್ದೇಶಕಿಯರು ಇನ್ನೂ ಬರಬೇಕಿದೆ. ಈ ನಡುವೆ ನಟಿ ದಿಶಾ ಪಟಾಣಿ (Disha Patani) ಅವರು ನಿರ್ದೇಶನದತ್ತ ಆಸಕ್ತಿ ತೋರಿಸಿದ್ದಾರೆ. ಇಷ್ಟು ದಿನ ಹಾಟ್​ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದಿಯುತ್ತಿದ್ದ ಅವರು ಈಗ ನಿರ್ದೇಶಕರ ಚೇರ್​ನಲ್ಲಿ ಕುಳಿತಿದ್ದಾರೆ. ಅಂದಹಾಗೆ, ದಿಶಾ ಪಟಾಣಿ ಅವರು ನಿರ್ದೇಶನ ಮಾಡಿರುವುದು ಸಿನಿಮಾಗೆ ಅಲ್ಲ. ಬದಲಿಗೆ, ಒಂದು ಮ್ಯೂಸಿಕ್​ ವಿಡಿಯೋಗೆ (Music Video) ಅವರು ಡೈರೆಕ್ಷನ್​ ಮಾಡಿದ್ದಾರೆ. ಅದರ ಪೋಸ್ಟರ್​ ಬಿಡುಗಡೆ ಆಗಿದೆ. ‘ಕ್ಯೂ ಕರೂ ಫಿಕರ್​’ (Kyun Karu Fikar) ಎಂಬ ಶೀರ್ಷಿಕೆಯಲ್ಲಿ ಈ ಹಾಡು ಮೂಡಿಬಂದಿದೆ. ‘ಚಿಂತೆ ಯಾಕೆ ಮಾಡಲಿ’ ಎಂಬುದು ಈ ಟೈಟಲ್​ನ ಅರ್ಥ.

‘ಕ್ಯೂ ಕರೂ ಫಿಕರ್​’ ಹಾಡಿಗೆ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲೂ ದಿಶಾ ಪಟಾಣಿ ಅವರೇ ಕಾಣಿಸಿಕೊಂಡಿದ್ದಾರೆ. ಸಮುದ್ರದ ಅಲೆಗಳ ನಡುವೆ ಕುಳಿತು ಖುಷಿ ಖುಷಿಯಾಗಿ ಪೋಸ್​ ನೀಡಿರುವ ಅವರ ಪೋಸ್ಟರ್​ ಗಮನ ಸೆಳೆಯುತ್ತಿದೆ. ಆಗಸ್ಟ್​ 16ರಂದು ಈ ಹಾಡಿನ ಟೀಸರ್​ ಬಿಡುಗಡೆ ಆಗಲಿದೆ. ವೈಭವ್​ ಪಾನಿ ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ವಾಯು ಬರೆದ ಸಾಹಿತ್ಯಕ್ಕೆ ಗಾಯಕಿ ನಿಖಿತಾ ಗಾಂಧಿ ಧ್ವನಿ ನೀಡಿದ್ದಾರೆ. ‘ಕ್ಯೂ ಕರೂ ಫಿಕರ್​’ ಸಾಂಗ್​ ಹೇಗೆ ಮೂಡಿಬಂದಿರಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ದಿಶಾ ಪಟಾಣಿ ಸೋಶಿಯಲ್​ ಮೀಡಿಯಾ ಪೋಸ್ಟ್​:

ಈ ಮೊದಲು ದಿಶಾ ಪಟಾಣಿ ಅವರು ನಟ ಟೈಗರ್​ ಶ್ರಾಫ್​ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಬ್ರೇಕಪ್​ ಮಾಡಿಕೊಂಡಿದ್ದಾರೆ. ಟೈಗರ್​ ಶ್ರಾಫ್​ ಬದಲು ಬೇರೆ ಪ್ರಿಯಕರನ ಸಹವಾಸ ಮಾಡಿದ್ದಾರೆ. ‘ಕ್ಯೂ ಕರೂ ಫಿಕರ್​’ ಹಾಡಿನಲ್ಲಿ ಅವರು ಪ್ರೀತಿ ಮತ್ತು ಬ್ರೇಕಪ್​ ಕುರಿತಾಗಿಯೇ ಹೇಳಲಿದ್ದಾರಾ ಎಂಬ ಅನುಮಾನ ಅನೇಕರಿಗಿದೆ. ಟೀಸರ್​ ಹೊರಬಂದ ಬಳಿಕ ಈ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

ಇದನ್ನೂ ಓದಿ: ‘ನಾನು ಸಿಂಗಲ್’ ಎಂದು ದಿಶಾ ಪಟಾಣಿ ಜೊತೆಗಿನ ಬ್ರೇಕಪ್ ವಿಚಾರ ಒಪ್ಪಿಕೊಂಡ ನಟ ಟೈಗರ್ ಶ್ರಾಫ್

ನಟಿಯಾಗಿ ದಿಶಾ ಪಟಾಣಿ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಅವರು ಖ್ಯಾತಿ ಗಳಿಸಿದ್ದಾರೆ. ಪ್ರಭಾಸ್​ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ದಿಶಾ ಪಟಾಣಿ ಅವರಿಗೆ ಒಂದು ಮುಖ್ಯ ಪಾತ್ರ ಇದೆ. ಸೂರ್ಯ ನಟಿಸುತ್ತಿರುವ ಬಹುನಿರೀಕ್ಷಿತ ‘ಕಂಗುವ’ ಸಿನಿಮಾಗೂ ದಿಶಾ ಪಟಾಣಿ ನಾಯಕಿ. ಹಿಂದಿಯ ‘ಯೋಧ’ ಸಿನಿಮಾದಲ್ಲೂ ಅವರು ನಟಿಸಿದ್ದು, ಡಿಸೆಂಬರ್​ನಲ್ಲಿ ಆ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್