AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದ ಪಾಕ್ ಯುವಕರು; ಇದು ‘ಗದರ್ 2’ ಎಫೆಕ್ಟ್

‘ಅವಕಾಶ ಸಿಕ್ಕರೆ ಅರ್ಧ ಪಾಕಿಸ್ತಾನ ಭಾರತಕ್ಕೆ ಬರಲಿದೆ’ ಎಂದು ಪಾಕಿಸ್ತಾನದಲ್ಲಿ ನಿಂತು ತಾರಾ ಸಿಂಗ್ ಹೇಳುವ ಡೈಲಾಗ್ ಟ್ರೇಲರ್​ನಲ್ಲಿ ಹೈಲೈಟ್ ಆಗಿತ್ತು. ಈ ವಿಡಿಯೋ ಪಾಕಿಸ್ತಾನದಲ್ಲೂ ವೈರಲ್ ಆಗಿದೆ. ಈ ಬಗ್ಗೆ ಅಲ್ಲಿನ ಯೂಟ್ಯೂಬರ್ಸ್ ಯುವಕರ ಬಳಿ ಪ್ರಶ್ನೆ ಮಾಡಿದ್ದಾರೆ.

ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದ ಪಾಕ್ ಯುವಕರು; ಇದು ‘ಗದರ್ 2’ ಎಫೆಕ್ಟ್
‘ಗದರ್​ 2’ ಸಿನಿಮಾ ಪೋಸ್ಟರ್​
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Aug 13, 2023 | 3:46 PM

Share

ಭಾರತ ಹಾಗೂ ಪಾಕಿಸ್ತಾನದ (Pakistan) ನಡುವೆ ಇರುವ ವೈರತ್ವಕ್ಕೆ ದೊಡ್ಡ ಇತಿಹಾಸ ಇದೆ. ಈ ವೈರತ್ವ, ದ್ವೇಷ ಕಡಿಮೆ ಆಗುವಂಥದ್ದಲ್ಲ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಲೇ ಬಂದಿದೆ. ಆದರೆ, ಇದನ್ನು ಅವರು ಎಂದಿಗೂ ಒಪ್ಪಿಕೊಂಡಿಲ್ಲ. ದ್ವೇಷ ಬೆಳೆಯಲು ಇದು ಪ್ರಮುಖ ಕಾರಣ. ಭಯೋತ್ಪಾದನೆ, ದ್ವೇಷವನ್ನು ಮಟ್ಟಹಾಕುವ ರೀತಿಯ ಹಲವು ಸಿನಿಮಾಗಳು ರಿಲೀಸ್ ಆಗಿವೆ. ಗದರ್ 2’ ಸಿನಿಮಾ (Gadar 2 Movie) ಕೂಡ ಇದೇ ಮಾದರಿಯಲ್ಲಿ ಮೂಡಿ ಬಂದಿದೆ. ಸನ್ನಿ ಡಿಯೋಲ್ (Sunny Deol) ನಟನೆಯ ಈ ಸಿನಿಮಾದ ಟ್ರೇಲರ್ ನೋಡಿದ ಪಾಕಿಸ್ತಾನಿ ಯುವಕನೊಬ್ಬ ಭಾರತಕ್ಕೆ ಬರೋದಾಗಿ ಹೇಳಿಕೊಂಡಿದ್ದಾನೆ.

ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಚಿತ್ರದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಟ್ರೇಲರ್​ನಲ್ಲಿ ಸಿನಿಮಾದ ಥೀಮ್ ಏನು ಎಂಬುದನ್ನು ತೋರಿಸಲಾಗಿದೆ. ಪಾಕಿಸ್ತಾನದವರ ಬಳಿ ತಾರಾ ಸಿಂಗ್ (ಸನ್ನಿ ಡಿಯೋಲ್) ಮಗ ಸಿಕ್ಕಿ ಬೀಳುತ್ತಾನೆ. ಆತನ ರಕ್ಷಣೆಗೆ ತಾರಾ ಸಿಂಗ್ ಪಾಕಿಸ್ತಾನಕ್ಕೆ ಎಂಟ್ರಿ ಕೊಡುತ್ತಾನೆ. ‘ಅವಕಾಶ ಸಿಕ್ಕರೆ ಅರ್ಧ ಪಾಕಿಸ್ತಾನ ಭಾರತಕ್ಕೆ ಬರಲಿದೆ’ ಎಂದು ಪಾಕಿಸ್ತಾನದಲ್ಲಿ ನಿಂತು ತಾರಾ ಸಿಂಗ್ ಹೇಳುವ ಡೈಲಾಗ್ ಟ್ರೇಲರ್​ನಲ್ಲಿ ಹೈಲೈಟ್ ಆಗಿತ್ತು. ಈ ವಿಡಿಯೋ ಪಾಕಿಸ್ತಾನದಲ್ಲೂ ವೈರಲ್ ಆಗಿದೆ. ಈ ಬಗ್ಗೆ ಅಲ್ಲಿನ ಯೂಟ್ಯೂಬರ್ಸ್ ಯುವಕರ ಬಳಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಜನರು ಹೌದೆಂದು ಸಮ್ಮತಿಸಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ‘ಗದರ್​ 2’; ಎರಡೇ ದಿನಕ್ಕೆ 83 ಕೋಟಿ ರೂಪಾಯಿ ಗಳಿಸಿದ ಸನ್ನಿ ಡಿಯೋಲ್​ ಸಿನಿಮಾ

ಈ ಬಗ್ಗೆ ಮಾತನಾಡಿರುವ ಪಾಕ್ ಯುವಕನೊಬ್ಬ, ‘ಅವಕಾಶ ಸಿಕ್ಕರೆ ನಾವು ಈಗಲೇ ಭಾರತಕ್ಕೆ ಹೋಗುತ್ತೇವೆ ಎನ್ನುವ ಡೈಲಾಗ್​ ಸಿನಿಮಾದಲ್ಲಿ ಬರುತ್ತದೆ. ಅದರಲ್ಲಿ ಸತ್ಯ ಇದೆ. ಪಾಕಿಸ್ತಾನದಲ್ಲಿ ಎಷ್ಟು ಸಿನಿಮಾಗಳು ತಯಾರಾಗುತ್ತವೆ ಮತ್ತು ಬಿಡುಗಡೆಯಾಗುತ್ತವೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಶಾರುಖ್ ಖಾನ್ ಅವರ ಎಷ್ಟು ಸಿನಿಮಾಗಳಿವೆ ಮತ್ತು ಯಾವ ಸಿನಿಮಾ ಯಾವಾಗ ಬಿಡುಗಡೆ ಆಗಿದೆ ಮತ್ತು ಆಗುತ್ತದೆ ಎಂಬುದು ನನಗೆ ತಿಳಿದಿದೆ’ ಎಂದಿದ್ದಾನೆ ಪಾಕ್ ಯುವಕ. ‘ನೀವು ಏಕೆ ಭಾರತಕ್ಕೆ ಹೋಗಲು ಬಯಸುತ್ತೀರಿ’ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ತಂತ್ರಜ್ಞಾನ ಎಂದು ಹೇಳಿದ್ದಾರೆ. ‘ಇಲ್ಲಿ ಇಂಟರ್​ನೆಟ್ ಪ್ಯಾಕ್ ಒಂದು ವಾರಕ್ಕೆ 600 ರೂಪಾಯಿ. ಅಲ್ಲಿ ಜಿಯೋದವರು ಕಡಿಮೆ ದರಕ್ಕೆ ವಾರದ ಪ್ಯಾಕ್ ನೀಡುತ್ತಿದ್ದಾರೆ. ಇಂಟರ್​ನೆಟ್ ವೇಗವೂ ಹೆಚ್ಚಿದೆ. ಎಲೆಕ್ಟ್ರಿಕ್ ಕಾರು ಇದೆ. ಆ್ಯಪಲ್ ಕೂಡ ಬಂದಿದೆ’ ಎಂದು ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಆ ಯುವಕ.

ಪಾಕಿಸ್ತಾನಿ ಯುವಕರ ವೈರಲ್​ ವಿಡಿಯೋ:

ಮತ್ತೋರ್ವ ಪಾಕ್ ಯುವಕ ಮಾತನಾಡಿ, ‘ಪ್ರಪಂಚದಾದ್ಯಂತ ನೀವು ಎಲ್ಲಿಗೆ ಹೋದರೂ ದೊಡ್ಡ ಕಂಪನಿಯ ಸಿಇಒ ಭಾರತೀಯರೇ. ಬೇರೆ ದೇಶಗಳಲ್ಲಿ ಕೆಲಸಕ್ಕೆ ಹೋಗಿರುವ ನನ್ನ ಕೆಲವು ಸ್ನೇಹಿತರಿದ್ದಾರೆ. ನಮ್ಮ ಬಾಸ್ ಭಾರತೀಯ ಎಂದು ಅವರು ಹೇಳುತ್ತಾರೆ. ಹಿಂದೂಗಳು ಏನು ಮಾಡುತ್ತಿದ್ದಾರೆ ಮತ್ತು ಮುಸ್ಲಿಮರು ಏನು ಮಾಡುತ್ತಿದ್ದಾರೆಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ’ ಎಂದಿದ್ದಾರೆ.

ಪಾಕಿಸ್ತಾನಿ ಯುವಕರ ವೈರಲ್​ ವಿಡಿಯೋ:

ಅನಿಲ್ ಶರ್ಮಾ ಅವರು ‘ಗದರ್ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್, ಅಮೀಶಾ ಪಟೇಲ್, ಉತ್ಕರ್ಶ್ ಶರ್ಮಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 40 ಕೋಟಿ ರೂಪಾಯಿ ಮಾಡಿದೆ. ಈ ಚಿತ್ರದ ಎದುರು ರಿಲೀಸ್ ಆದ ಅಕ್ಷಯ್ ಕುಮಾರ್ ನಟನೆಯ ‘ಓಹ್ ಮೈ ಗಾಡ್ 2’ ಚಿತ್ರ ಕೇವಲ 9 ಕೋಟಿ ರೂಪಾಯಿ ಗಳಿಸಿ ತೃಪ್ತಿಪಟ್ಟುಕೊಂಡಿದೆ. ‘ಗದರ್’ ಚಿತ್ರ 2001ರಲ್ಲಿ ರಿಲೀಸ್ ಆಗಿ ಹಿಟ್ ಆಗಿತ್ತು. ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳ ಮೇಲೆ ನಿಷೇಧ ಹೇರಲಾಗಿದೆ. ಈ ಕಾರಣಕ್ಕೆ ‘ಗದರ್ 2’ ಪಾಕ್​ನಲ್ಲಿ ಬಿಡುಗಡೆ ಆಗಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ