ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ‘ಗದರ್​ 2’; ಎರಡೇ ದಿನಕ್ಕೆ 83 ಕೋಟಿ ರೂಪಾಯಿ ಗಳಿಸಿದ ಸನ್ನಿ ಡಿಯೋಲ್​ ಸಿನಿಮಾ

Gadar 2 Movie Collection: ‘ಗದರ್​ 2’ ಹವಾ ಇಷ್ಟಕ್ಕೇ ನಿಲ್ಲುವುದಿಲ್ಲ. 3ನೇ ದಿನ ಕೂಡ ನಿರೀಕ್ಷೆಗೂ ಮೀರಿ ಕಲೆಕ್ಷನ್​ ಆಗುವ ಸಾಧ್ಯತೆ ದಟ್ಟವಾಗಿದೆ. ಸೋಮವಾರದ ಬಳಿಕವೂ ಇದರ ನಾಗಾಲೋಟ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾ 300 ಕೋಟಿ ರೂಪಾಯಿ ಗಡಿ ಮುಟ್ಟಲಿದೆ ಎಂದು ಬಾಕ್ಸ್​ ಆಫೀಸ್​ ಪಂಡಿತರು ಊಹಿಸುತ್ತಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ‘ಗದರ್​ 2’; ಎರಡೇ ದಿನಕ್ಕೆ 83 ಕೋಟಿ ರೂಪಾಯಿ ಗಳಿಸಿದ ಸನ್ನಿ ಡಿಯೋಲ್​ ಸಿನಿಮಾ
ಸನ್ನಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Aug 13, 2023 | 9:45 AM

ನಟ ಸನ್ನಿ ಡಿಯೋಲ್​ (Sunny Deol) ಅವರು ಬಹು ವರ್ಷಗಳ ಬಳಿಕ ದೊಡ್ಡ ಸಕ್ಸಸ್​ ಕಂಡಿದ್ದಾರೆ. ಅವರು ನಟಿಸಿರುವ ‘ಗದರ್​ 2’ ಸಿನಿಮಾಗೆ ಉತ್ತಮವಾದ ರೆಸ್ಪಾನ್ಸ್​ ಸಿಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಅಬ್ಬರಿಸುತ್ತಿರುವ ರೀತಿ ಕಂಡು ಅನೇಕರು ಹುಬ್ಬೇರಿಸುತ್ತಿದ್ದಾರೆ. ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ‘ಗದರ್​ 2’ ಸಿನಿಮಾ (Gadar 2 Movie) ಅಬ್ಬರಿಸುತ್ತಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್​, ಅಮೀಶಾ ಪಟೇಲ್​, ಉತ್ಕರ್ಷ್​ ಶರ್ಮಾ ಮುಂತಾದವರು ನಟಿಸಿದ್ದಾರೆ. ಅನಿಲ್​ ಶರ್ಮಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಎರಡೇ ದಿನಕ್ಕೆ ಈ ಸಿನಿಮಾದ ಒಟ್ಟು ಕಲೆಕ್ಷನ್​ (Gadar 2 Box Office Collection) 83 ಕೋಟಿ ರೂಪಾಯಿ ಆಗಿದೆ. ಇದು ಸಣ್ಣ ವಿಚಾರ ಅಲ್ಲವೇ ಅಲ್ಲ. ಚಾಲ್ತಿಯಲ್ಲಿ ಇರುವ ದೊಡ್ಡ ದೊಡ್ಡ ಸ್ಟಾರ್​ ನಟರ ಸಿನಿಮಾಗಳು ಕೂಡ ಮಾಡಲಾಗದ ಸಾಧನೆಯನ್ನು ‘ಗದರ್​ 2’ ಚಿತ್ರ ಮಾಡಿದೆ. ಈ ಗೆಲುವಿಗಾಗಿ ಸನ್ನಿ ಡಿಯೋಲ್​ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

2001ರಲ್ಲಿ ‘ಗದರ್​’ ಸಿನಿಮಾ ಮೂಡಿಬಂದಿತ್ತು. ಅದರ ಸೀಕ್ವೆಲ್​ ಆಗಿ ‘ಗದರ್​ 2’ ಈಗ ಬಿಡುಗಡೆ ಆಗಿದೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್​ 11ರಂದು ಸಿನಿಮಾ ಬಿಡುಗಡೆ ಆಯಿತು. ಶುಕ್ರವಾರ ಈ ಸಿನಿಮಾ ಭರ್ಜರಿ ಓಪನಿಂಗ್​ ಪಡೆದುಕೊಂಡಿತು. ಮೊದಲ ದಿನ ‘ಗದರ್​ 2’ ಬರೋಬ್ಬರಿ 40.10 ಕೋಟಿ ರೂಪಾಯಿ ಗಳಿಕೆ ಮಾಡಿತು. ಇದರಿಂದ ಚಿತ್ರತಂಡಕ್ಕೆ ಸಖತ್​ ಖುಷಿ ಆಯಿತು. ಎರಡನೇ ದಿನ ಕೂಡ ಈ ಸಿನಿಮಾದ ಅಬ್ಬರ ಮುಂದುವರಿದೆ.

ಗುರುದ್ವಾರದಲ್ಲಿ ಸನ್ನಿ ಡಿಯೋಲ್​, ಅಮೀಷಾ ಪಟೇಲ್​ ರೊಮ್ಯಾನ್ಸ್​; ಸಿಖ್​ ಸಮುದಾಯದವರಿಂದ ವಿರೋಧ

ಎರಡನೇ ದಿನವಾದ ಆಗಸ್ಟ್​ 12ರಂದು ‘ಗದರ್​ 2’ ಸಿನಿಮಾ 43 ಕೋಟಿ ರೂಪಾಯಿ ಬಾಚಿಕೊಂಡು ಬೀಗುತ್ತಿದೆ. ಭಾನುವಾರ (ಆಗಸ್ಟ್​ 13) ಕೂಡ ಎಲ್ಲ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ 3ನೇ ದಿನವೂ ನಿರೀಕ್ಷೆಗೂ ಮೀರಿ ಕಲೆಕ್ಷನ್​ ಆಗುವ ಸಾಧ್ಯತೆ ದಟ್ಟವಾಗಿದೆ. ‘ಗದರ್​ 2’ ಹವಾ ಇಷ್ಟಕ್ಕೇ ನಿಲ್ಲುವುದಿಲ್ಲ. ಸೋಮವಾರದ ಬಳಿಕವೂ ಇದರ ನಾಗಾಲೋಟ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾ 300 ಕೋಟಿ ರೂಪಾಯಿ ಗಡಿ ಮುಟ್ಟಲಿದೆ ಎಂದು ಬಾಕ್ಸ್​ ಆಫೀಸ್​ ಪಂಡಿತರು ಊಹಿಸುತ್ತಿದ್ದಾರೆ.

‘ಗದರ್​ 2’ ತಂಡಕ್ಕೆ ಶುಭ ಕೋರಿ ಸಲ್ಮಾನ್​ ಖಾನ್​ ಟ್ವೀಟ್​:

ಅಕ್ಷಯ್​ ಕುಮಾರ್​ ನಟನೆಯ ‘ಒಎಂಜಿ 2’ ಸಿನಿಮಾ ಕೂಡ ಆಗಸ್ಟ್​ 11ರಂದು ಬಿಡುಗಡೆ ಆಯಿತು. ಆ ಚಿತ್ರಕ್ಕೆ ಕಠಿಣ ಸ್ಪರ್ಧೆ ನೀಡುವ ಮೂಲಕ ‘ಗದರ್​ 2’ ಸಿನಿಮಾ ಅಬ್ಬರಿಸುತ್ತಿದೆ. ದಕ್ಷಿಣ ಭಾರತದಲ್ಲಿ ರಜನಿಕಾಂತ್​, ಶಿವರಾಜ್​ಕುಮಾರ್​, ಮೋಹನ್​ಲಾಲ್​ ನಟನೆಯ ‘ಜೈಲರ್​’ ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. ಅದರ ನಡುವೆಯೂ ‘ಗದರ್​ 2’ ಸಿನಿಮಾಗೆ ಉತ್ತಮವಾಗಿ ಕಲೆಕ್ಷನ್​ ಆಗುತ್ತಿದೆ. ಇದು ನಟ ಸನ್ನಿ ಡಿಯೋಲ್​ ಅವರ ವೃತ್ತಿ ಜೀವನದ ಬಹುದೊಡ್ಡ ಸಕ್ಸಸ್​. 2023ರಲ್ಲಿ ‘ಪಠಾಣ್​’ ಬಳಿಕ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೂ ‘ಗದರ್​ 2’ ಪಾತ್ರವಾಗಿದೆ. ಈ ಸಿನಿಮಾದ ಟೋಟಲ್​ ಕಲೆಕ್ಷನ್​ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ