ಎಂಟು ಎಕರೆಯಲ್ಲಿ ಸಿದ್ಧವಾಗುತ್ತಿದೆ ಫಾರ್ಮ್​ಹೌಸ್​; ಅನುಷ್ಕಾ-ವಿರಾಟ್ ಇದಕ್ಕೆ ಖರ್ಚು ಮಾಡುತ್ತಿರುವುದೆಷ್ಟು?

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸದ್ಯ ಈ ದಂಪತಿ ಮುಂಬೈನಲ್ಲಿ ವಾಸವಾಗಿದ್ದಾರೆ. ಈಗ ಮುಂಬೈ ಹೊರ ಭಾಗದಲ್ಲಿ ಒಂದು ಫಾರ್ಮ್​​ಹೌಸ್ ನಿರ್ಮಾಣ ಮಾಡುವ ನಿರ್ಧಾರಕ್ಕೆ ಇವರು ಬಂದಿದ್ದಾರೆ ಎನ್ನಲಾಗಿದೆ.

ಎಂಟು ಎಕರೆಯಲ್ಲಿ ಸಿದ್ಧವಾಗುತ್ತಿದೆ ಫಾರ್ಮ್​ಹೌಸ್​; ಅನುಷ್ಕಾ-ವಿರಾಟ್ ಇದಕ್ಕೆ ಖರ್ಚು ಮಾಡುತ್ತಿರುವುದೆಷ್ಟು?
ವಿರಾಟ್-ಅನುಷ್ಕಾ
Follow us
ರಾಜೇಶ್ ದುಗ್ಗುಮನೆ
|

Updated on:Aug 16, 2023 | 7:13 AM

ನಟಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಮಗಳು ವಮಿಕಾ ಜನಿಸಿದ ಬಳಿಕ ಈ ದಂಪತಿ ಬಾಳಲ್ಲಿ ಸಂತಸ ಹೆಚ್ಚಿದೆ. ಈ ದಂಪತಿ ಅನೇಕ ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಇವುಗಳ ಬೆಲೆ ನೂರಾರು ಕೋಟಿ ರೂಪಾಯಿಗೂ ಅಧಿಕವಾಗಿದೆ. ಕಳೆದ ವರ್ಷ ಅನುಷ್ಕಾ-ವಿರಾಟ್ (Virat Kohli) ಮುಂಬೈನ ಹೊರ ಭಾಗ ಅಲೀಬಾಗ್​ನಲ್ಲಿ ಎಂಟು ಎಕರೆ ಜಾಗ ಖರೀದಿ ಮಾಡಿದ್ದರು. ಈಗ ಇಲ್ಲಿ ಫಾರ್ಮ್​ಹೌಸ್ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸದ್ಯ ಈ ದಂಪತಿ ಮುಂಬೈನಲ್ಲಿ ವಾಸವಾಗಿದ್ದಾರೆ. ಆಗಾಗ ಒಟ್ಟಾಗಿ ಸಮಯ ಕಳೆಯಲು ವಿದೇಶಕ್ಕೆ ತೆರಳುತ್ತಾರೆ. ಈಗ ಮುಂಬೈ ಹೊರ ಭಾಗದಲ್ಲಿ ಒಂದು ಫಾರ್ಮ್​​ಹೌಸ್ ನಿರ್ಮಾಣ ಮಾಡುವ ನಿರ್ಧಾರಕ್ಕೆ ಇವರು ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಳೆದ ವರ್ಷ ಅಲೀಬಾಗ್​ನಲ್ಲಿ 8 ಎಕರೆ ಜಾಗವನ್ನು ಇವರು ಖರೀದಿ ಮಾಡಿದ್ದರು. ಈಗ ಇಲ್ಲಿ ಫಾರ್ಮ್​ಹೌಸ್ ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ.

ಮಂಜುದರ್ ಬ್ರಾವೋ ಅವರು ಈ ಫಾರ್ಮ್​ಹೌಸ್​ನ ಡಿಸೈನ್ ಮಾಡಿದ್ದಾರೆ. ಮೂಲಗಳ ಪ್ರಕಾರ ಇಲ್ಲಿ ವಾಸಕ್ಕೆ ದೊಡ್ಡದಾದ ಮನೆ, ಸ್ವಿಮ್ಮಿಂಗ್ ಪೂಲ್, ಕ್ರಿಕೆಟ್ ತರಬೇತಿಗೆ ವಿಶೇಷ ವ್ಯವಸ್ಥೆ, ತೋಟ ಸೇರಿ ಅನೇಕ ಅಂಶಗಳು ಇರಲಿವೆ. ಈ ಜಾಗವನ್ನು ವಿರಾಟ್-ಅನುಷ್ಕಾ 19 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಈ ಫಾರ್ಮ್​ಹೌಸ್ ನಿರ್ಮಾಣಕ್ಕೆ ನೂರು ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ತಿರಸ್ಕರಿಸಿದ ಪಾತ್ರ ಮಾಡಲು ಅನುಷ್ಕಾ ಶರ್ಮಾ ನಕಾರ; ಫರ್ಹಾನ್​ ಅಖ್ತರ್​ಗೆ ಹೆಚ್ಚಿತು ಚಿಂತೆ

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ತಮ್ಮದೇ ಫಾರ್ಮ್​ಹೌಸ್ ಹೊಂದಿದ್ದಾರೆ. ಇದು ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇನ್ನು, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಶಾರುಖ್ ಖಾನ್-ಗೌರಿ ಖಾನ್, ಶಾರುಖ್ ಮಗಳು ಸುಹಾನಾ ಖಾನ್ ಸೇರಿ ಅನೇಕರು ಅಲೀಬಾಗ್​ನಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.

ಅಲೀಬಾಗ್​ನಲ್ಲಿರುವ ಪ್ರಾಪರ್ಟಿಯಲ್ಲಿ ವಿರಾಟ್ ಕ್ರಿಕೆಟ್ ಮೈದಾನ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ವಿರಾಟ್ ಕೊಹ್ಲಿ ಅಲ್ಲ ಗಳೆದಿದ್ದರು. ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಪೋಸ್ಟ್ ಮಾಡಿ ಇದು ಸುಳ್ಳು ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Wed, 16 August 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ