ಚಪ್ಪಲಿ ಧರಿಸಿ ರಾಷ್ಟ್ರ ಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ; ‘ನನಗೂ ರೂಲ್ಸ್ ಗೊತ್ತು’ ಎಂದ ನಟಿ
ಶಿಲ್ಪಾ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಅವರು ಚಪ್ಪಲಿ ಹಾಕಿಕೊಂಡು ತ್ರಿವರ್ಣ ಧ್ವಜ ಹಾರಿಸಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಹಲವರು ಕಮೆಂಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಶಿಲ್ಪಾ ಶೆಟ್ಟಿ ಅವರ ಗಮನಕ್ಕೂ ಬಂದಿದೆ. ತಾವು ಮಾಡಿದ್ದರಲ್ಲಿ ತಪ್ಪು ಇಲ್ಲ ಎಂದು ಶಿಲ್ಪಾ ಶೆಟ್ಟಿ ವಾದ ಮಾಡಿದ್ದಾರೆ.
ದೇಶದೆಲ್ಲೆಡೆ ಮಂಗಳವಾರ (ಆಗಸ್ಟ್ 15) ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ (Independence Day) ಆಚರಿಸಲಾಯಿತು. ಸೆಲೆಬ್ರಿಟಿಗಳು ಕೂಡ ಈ ಸಂಭ್ರಮದಲ್ಲಿ ಭಾಗಿ ಆದರು. ಮನೆ, ಕಚೇರಿ ಮುಂತಾದ ಕಡೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ನಟಿ ಶಿಲ್ಪಾ ಶೆಟ್ಟಿ (Shilpa Shetty) ಕೂಡ ಇದಕ್ಕೆ ಹೊರತಾಗಿಲ್ಲ. ಕುಟುಂಬ ಸಮೇತರಾಗಿ ಅವರು ಧ್ವಜಾರೋಹಣ (Flag hoisting) ಮಾಡಿದ್ದಾರೆ. ಅವರ ಜೊತೆ ಮಕ್ಕಳಾದ ವಿಯಾನ್, ಸಮೀಶಾ, ಗಂಡ ರಾಜ್ ಕುಂದ್ರಾ ಹಾಗೂ ತಾಯಿ ಸುನಂದಾ ಶೆಟ್ಟಿ ಕೂಡ ಭಾಗಿಯಾಗಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಅವರು ಸೋಶಿಯಲ್ ವೀಡಿಯಾದಲ್ಲಿ ಹಂಚಿಕೊಂಡರು. ಅದನ್ನು ನೋಡಿದ್ದೇ ತಡ, ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದರು. ಶಿಲ್ಪಾ ಶೆಟ್ಟಿ ಮತ್ತು ಅವರ ಕುಟುಂಬದವರು ಚಪ್ಪಲಿ ಧರಿಸಿ ಧ್ವಜ ಹಾರಿಸಿದ್ದೇ ಇದಕ್ಕೆ ಕಾರಣ! ತಮ್ಮ ವಿರುದ್ಧ ಮಾಡಲಾಗಿರುವ ಟ್ರೋಲ್ಗೆ ಶಿಲ್ಪಾ ಶೆಟ್ಟಿ ಅವರು ಈಗ ಉತ್ತರ ನೀಡಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ. ಅವರು ಚಪ್ಪಲಿ ಹಾಕಿಕೊಂಡು ತ್ರಿವರ್ಣ ಧ್ವಜ ಹಾರಿಸಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಈ ವಿಚಾರವಾಗಿ ಹಲವರು ಕಮೆಂಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಶಿಲ್ಪಾ ಶೆಟ್ಟಿ ಅವರ ಗಮನಕ್ಕೂ ಬಂದಿದೆ. ತಾವು ಮಾಡಿದ್ದರಲ್ಲಿ ತಪ್ಪು ಇಲ್ಲ ಎಂದು ಶಿಲ್ಪಾ ಶೆಟ್ಟಿ ವಾದ ಮಾಡಿದ್ದಾರೆ. ತಮಗೂ ರೂಲ್ಸ್ ಗೊತ್ತು ಎಂದು ಅವರು ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಅವರ ಇನ್ಸ್ಟಾಗ್ರಾಮ್ ಪೋಸ್ಟ್:
View this post on Instagram
‘ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮ ಏನು ಎಂಬುದು ನನಗೂ ಗೊತ್ತು. ದೇಶದ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ನನಗೆ ಗೌರವ ಇದೆ. ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ. ಹೆಮ್ಮೆಯ ಭಾರತೀಯಳಾದ ನಾನು ಆ ಭಾವನೆಯನ್ನು ಹರಡುವ ಸಲುವಾಗಿ ವಿಡಿಯೋ ಹಂಚಿಕೊಂಡಿದ್ದೇನೆ. ಸಾಮಾನ್ಯವಾಗಿ ನಾನು ಟ್ರೋಲ್ಗಳಿಗೆ ಉತ್ತರ ನೀಡುವುದಿಲ್ಲ. ನಿಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಕ್ಕೆ ಮತ್ತು ನೆಗೆಟಿವಿಟಿ ಹರಡಿದ್ದಕ್ಕೆ ನಾನು ಮೆಚ್ಚುಗೆ ಸೂಚಿಸುವುದಿಲ್ಲ. ಸರಿಯಾಗಿ ಮಾಹಿತಿ ತಿಳಿದುಕೊಂಡು ನಿಮ್ಮ ಮಾತನ್ನು ವಾಪಸ್ ಪಡೆದುಕೊಳ್ಳಿ’ ಎಂದು ಶಿಲ್ಪಾ ಶೆಟ್ಟಿ ಅವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಶುಭ ಕೋರಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು; ಇಲ್ಲಿದೆ ಫೋಟೋ ಗ್ಯಾಲರಿ
ಧ್ವಜಾರೋಹಣದ ಸಮಯದಲ್ಲಿ ಚಪ್ಪಲಿ ಅಥವಾ ಶೂ ಬಿಚ್ಚಬೇಕು ಎಂಬ ನಿಯಯ ಇಲ್ಲ. ಶೂ ಧರಿಸಿ ಧ್ವಜ ಹಾರಿಸಿದರೆ ಅದು ಅಪರಾಧ ಕೂಡ ಅಲ್ಲ. ಆದರೆ ಭಾರತೀಯ ಸಂಪ್ರದಾಯದಲ್ಲಿ ಈ ರೀತಿಯ ವಿಶೇಷ ಸಂದರ್ಭದ ವೇಳೆ ಗೌರವಾರ್ಥವಾಗಿ ಚಪ್ಪಲಿ ಬಿಚ್ಚಲಾಗುತ್ತದೆ ಅಷ್ಟೇ. ಹಾಗಾಗಿ ಅನೇಕರು ಧ್ವಜಾರೋಹಣ ಮಾಡುವಾಗ ಶೂ ಅಥವಾ ಚಪ್ಪಲಿ ಧರಿಸುವುದಿಲ್ಲ. ಒಟ್ಟಿನಲ್ಲಿ ಕೆಲವರು ಶಿಲ್ಪಾ ಶೆಟ್ಟಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನುಳಿದವರು ವಿರೋಧಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಕುಟುಂಬಕ್ಕೆ ಟ್ರೋಲ್ ಎಂಬುದು ಹೊಸದೇನೂ ಅಲ್ಲ. ಈ ಮೊದಲು ರಾಜ್ ಕುಂದ್ರಾ ಅರೆಸ್ಟ್ ಆದಾಗ ಅವರು ಸಾಕಷ್ಟು ಟೀಕೆ ಎದುರಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.