AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಕಾರು ಖರೀದಿಸಿದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್: ಬೆಲೆ ಎಷ್ಟು?

Ranbir Kapoor: ಬಾಲಿವುಡ್ ಸ್ಟಾರ್ ನಟ ರಣ್​ಬೀರ್ ಕಪೂರ್ ಹೊಸ ಐಶಾರಾಮಿ ಕಾರು ಖರೀದಿಸಿದ್ದಾರೆ. ಕಾರಿನ ಬೆಲೆ ಎಷ್ಟು ಗೊತ್ತೆ?

ಹೊಸ ಕಾರು ಖರೀದಿಸಿದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್: ಬೆಲೆ ಎಷ್ಟು?
ರಣ್​ಬೀರ್ ಕಪೂರ್
ಮಂಜುನಾಥ ಸಿ.
|

Updated on: Aug 16, 2023 | 10:33 PM

Share

ಬಾಲಿವುಡ್ (Bollywood) ನಟ ರಣ್​ಬೀರ್ ಕಪೂರ್ (Ranbir Kapoor) ‘ಬ್ರಹ್ಮಾಸ್ತ್ರ’ ಸಿನಿಮಾದ ಮೂಲಕ ಸೋಲಿನ ಸುಳಿಯಿಂದ ಹೊರ ಬಂದಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದಿಂದ ರಣ್​ಬೀರ್​ಗೆ ಅದೃಷ್ಟವೇ ಬದಲಾದಂತಿದ್ದು, ಅದರ ಬಳಿಕ ಬಿಡುಗಡೆ ಆದ ‘ತು ಜೂಟಿ ಮೇ ಮಕ್ಕಾರ್’ ಸಿನಿಮಾ ಸಾಧಾರಣವಾಗಿದ್ದರೂ ಉತ್ತಮ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಿದೆ. ಸತತ ಎರಡು ಹಿಟ್ ಸಿನಿಮಾ ನೀಡಿರುವ ರಣ್​ಬೀರ್ ಕಪೂರ್ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.

ಹೊಸ ರೇಂಜ್ ರೋವರ್ ಕಾರನ್ನು ರಣ್​ಬೀರ್ ಕಪೂರ್ ಖರೀದಿಸಿದ್ದು, ಇಂದು ತಮ್ಮ ಹೊಸ ಕಾರಿನಲ್ಲಿ ಮುಂಬೈ ಸುತ್ತು ಹೊಡೆದಿದ್ದಾರೆ. ಸಿಲ್ವರ್ ಬಣ್ಣದ ರಣ್​ಬೀರ್ ಕಪೂರ್​ರ ಹೊಸ ಕಾರಿನ ಬೆಲೆ ಬರೋಬ್ಬರಿ ನಾಲ್ಕು ಕೋಟಿ. ಹೊಸ ಕಾರಿಗೆ ಪೂಜೆ ಮಾಡಿಸಿ ಮುಂಬೈನಲ್ಲಿ ಸುತ್ತು ಹಾಕಿದ್ದಾರೆ ರಣ್​ಬೀರ್ ಕಪೂರ್.

ರಣ್​ಬೀರ್ ಕಪೂರ್​ಗೆ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಸಾಮಾನ್ಯವಾಗಿ ತಮ್ಮ ಕಾರುಗಳನ್ನು ಬದಲಾಯಿಸುತ್ತಾ ಇರುತ್ತಾರೆ ರಣ್​ಬೀರ್. ಈಗ ಖರೀದಿಸಿರುವ ಹೊಸ ಮಾದರಿ ರೇಂಜ್ ರೋವರ್ ಹೊರತಾಗಿ ಹಲವು ಐಶಾರಾಮಿ ಕಾರುಗಳು ರಣ್​ಬೀರ್ ಕಪೂರ್ ಗರಾಜಿನಲ್ಲಿದೆ. ಅದರಲ್ಲಿಯೂ ಲ್ಯಾಂಡ್ ರೋವರ್​ನ ರೇಂಜ್ ರೋವರ್ ಕಾರುಗಳ ಬಗ್ಗೆ ರಣ್​ಬೀರ್​ಗೆ ವಿಶೇಷ ಪ್ರೀತಿ, ಈಗಾಗಲೇ ಅವರ ಬಳಿ ಎರಡು ರೇಂಜ್ ರೋವರ್ ಕಾರುಗಳಿವೆ. ಇದೀಗ ಹೊಸ ರೇಂಜ್ ರೋವರ್ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ರಾಕ್​ಸ್ಟಾರ್ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಜಾನ್ ಅಬ್ರಹಾಂ, ರಣ್​ಬೀರ್​ಗೆ ಪಾತ್ರ ಸಿಕ್ಕಿದ್ದು ಹೇಗೆ?

ರೇಂಜ್ ರೋವರ್ ಸ್ಪೋರ್ಟ್ಸ್, ರೇಂಜ್ ರೋವರ್ ವೋಗ್ ಕಾರುಗಳು ರಣ್​ಬೀರ್ ಕಪೂರ್ ಬಳಿ ಇವೆ. ಅದರ ಹೊರತಾಗಿ ಆಡಿ ಎ8ಎಲ್, ಮರ್ಸಿಡಿಸ್ ಬೆಂಜ್ ಎಎಂಜಿ ಜಿ-63, ಆಡಿ ಆರ್​8, ಇನ್ನೋವಾ ಸೇರಿದಂತೆ ಇನ್ನೂ ಕೆಲವು ಕಾರುಗಳು ರಣ್​ಬೀರ್ ಕಪೂರ್ ಬಳಿ ಇವೆ. ಜೊತೆಗೆ ಕೆಲವು ದುಬಾರಿ ಬೈಕ್​ಗಳು ಸಹ ರಣ್​ಬೀರ್ ಕಪೂರ್ ಬಳಿ ಇವೆ. ಆಲಿಯಾ ಭಟ್ ಅನ್ನು ವಿವಾದ ಬಳಿಕ ಹೊಸದೊಂದು ಬಂಗಲೆಯನ್ನು ಸಹ ಮುಂಬೈನಲ್ಲಿ ರಣ್​ಬೀರ್ ಕಪೂರ್ ಕಟ್ಟಿಸುತ್ತಿದ್ದು, ಇದಕ್ಕಾಗಿ ಸುಮಾರು 50 ಕೋಟಿ ಹಣವನ್ನು ರಣ್​ಬೀರ್ ಕಪೂರ್ ಖರ್ಚು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

‘ಬ್ರಹ್ಮಾಸ್ತ್ರ’ ಸಿನಿಮಾದ ಬಳಿಕ ರಣ್​ಬೀರ್ ಕಪೂರ್ ಅದೃಷ್ಟ ಖುಲಾಯಿಸಿದ್ದು ಹಲವು ಉತ್ತಮ ವಿಷಯಗಳು ರಣ್​ಬೀರ್ ಜೀವನದಲ್ಲಿ ನಡೆಯುತ್ತಿವೆ. ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ ರಣ್​ಬೀರ್ ಕಪೂರ್. ಪ್ರಸ್ತುತ ‘ಅನಿಮಲ್’ ಹೆಸರಿನ ಸಿನಿಮಾದಲ್ಲಿ ರಣ್​ಬೀರ್ ನಟಿಸುತ್ತದ್ದಾರೆ. ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ವಂಗ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಚಾಲ್ತಿಯಲ್ಲಿದೆ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದರ ಬಳಿಕ ‘ಬ್ರಹ್ಮಾಸ್ತ್ರ 2’ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ನಟಿಸಲಿದ್ದಾರೆ. ಅದಾದ ಬಳಿಕ ಮತ್ತೆ ದಕ್ಷಿಣದ ನಿರ್ದೇಶಕರೊಬ್ಬರೊಟ್ಟಿಗೆ ರಣ್​ಬೀರ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್