ರಣ್​ಬೀರ್ ಕಪೂರ್​ನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಬಾಲಿವುಡ್ ಬೆಡಗಿ ಆಲಿಯಾ ಭಟ್

Alia Bhatt Instagram Post: ರಣ್​ಬೀರ್ ಕಪೂರ್​ನ್ನು ಆಲಿಯಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಬಾಲಿವುಡ್​ನ ಚೆಲುವ ರಣ್​​ಬೀರ್​ಗೆ ಕೆಲವು ದಿನಗಳ ಹಿಂದೆಯಷ್ಟೇ ಕೊವಿಡ್ ದೃಢಪಟ್ಟಿತ್ತು

ರಣ್​ಬೀರ್ ಕಪೂರ್​ನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಬಾಲಿವುಡ್ ಬೆಡಗಿ ಆಲಿಯಾ ಭಟ್
ಆಲಿಯಾ ಭಟ್ - ರಣ್​​ಬೀರ್ ಕಪೂರ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 12, 2021 | 6:31 PM

ನವದೆಹಲಿ: ಬಾಲಿವುಡ್​ನ ಕ್ಯೂಟ್ ಬ್ಯೂಟಿ ಆಲಿಯಾ ಭಟ್ ಶುಕ್ರವಾರ ಬೆಳಗ್ಗೆ ಇನ್​​ಸ್ಟಾಗ್ರಾಮ್ ನಲ್ಲಿ Major Missing ಎಂಬ ಶೀರ್ಷಿಕೆಯಲ್ಲಿ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ತನ್ನ ಕೈಯೊಂದಿಗೆ ಇನ್ನೊಂದು ಕೈ ಬೆಸೆದಿರುವ ಚಿತ್ರ ಅದಾಗಿದ್ದು, ಅದು ಪ್ರಿಯಕರ ರಣ್​ಬೀರ್​​ನ ಕೈ ಎಂಬುದು ಸ್ಪಷ್ಟ. ರಣ್​ಬೀರ್ ಕಪೂರ್​ನ್ನು ಆಲಿಯಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಬಾಲಿವುಡ್​ನ ಚೆಲುವ ರಣ್​​ಬೀರ್​ಗೆ ಕೆಲವು ದಿನಗಳ ಹಿಂದೆಯಷ್ಟೇ ಕೊವಿಡ್ ದೃಢಪಟ್ಟಿತ್ತು. ಸದ್ಯ ಅವರು ಕ್ವಾರಂಟೈನ್​ನಲ್ಲಿದ್ದಾರೆ. ಹೀಗಿರುವಾಗ ರಣ್​​ಬೀರ್ ಕಪೂರ್​ನ್ನು ಆಲಿಯಾ ಮಿಸ್ ಮಾಡಿಕೊಳ್ಳದೇ ಇರ್ತಾರಾ ?

ಆಲಿಯಾ ಭಟ್ ಕೊವಿಡ್ ಪರೀಕ್ಷೆಗೊಳಪಟ್ಟಿದ್ದು ನೆಗೆಟಿವ್ ವರದಿ ಬಂದಿದೆ. ಬಾಲಿವುಡ್​ನ​ ಸೂಪರ್ ಕ್ಯೂಟ್ ಜೋಡಿ ಆಲಿಯಾ- ರಣ್​ಬೀರ್ ಅವರ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆಲಿಯಾ -ರಣ್​ಬೀರ್ ಕಪೂರ್​ನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿರುವ ಇನ್ನ್​ಸ್ಟಾಗ್ರಾಮ್ ಪೋಸ್ಟಿಗೆ ಅವರ ಅಭಿಮಾನಿಗಳು ಹಾರ್ಟ್ ಇಮೋಜಿಗಳನ್ನು ಹಾಕಿ ಸೋ ಕ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.

ತಾನು ವೈದ್ಯರನ್ನು ಸಂಪರ್ಕಿಸಿದ ನಂತರ ಕೆಲಸಕ್ಕೆ ಮರಳಿದ್ದೇನೆ ಎಂದು ಆಲಿಯಾ ಗುರುವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಅಪ್​ಡೇಟ್ ಮಾಡಿದ್ದರು. ನಾನು ನಿಮ್ಮ ಎಲ್ಲ ಸಂದೇಶಗಳನ್ನು ಓದುತ್ತಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ನನಗೆ ಕೊವಿಡ್ ನೆಗೆಟಿವ್ ವರದಿ ಬಂದಿದೆ. ಐಸೋಲೇಟ್ ಆಗಿ ಆಮೇಲೆ ವೈದ್ಯರ ಜತೆ ಮಾತನಾಡಿದ ಕೆಲಸಕ್ಕೆ ವಾಪಸ್ ಆಗಿದ್ದೇನೆ. ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು. ನಾನು ಆರಾಮವಾಗಿ, ಸುರಕ್ಷಿತವಾಗಿದ್ದೇನೆ. ನೀವು ಆರಾಮವಾಗಿರಿ ಎಂದು ಆಲಿಯಾ ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

 Alia Bhatt Instagram

ಆಲಿಯಾ ಭಟ್ಇನ್​ಸ್ಟಾಗ್ರಾಮ್ ಸ್ಟೋರಿ

ಕಳೆದ ವರ್ಷ ಸಂದರ್ಶನವೊಂದರಲ್ಲಿ ರಣ್​ಬೀರ್ ಕಪೂರ್ ಆಲಿಯಾ ಜತೆಗಿನ ಪ್ರೇಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ಆಕೆ ನನ್ನ ಗರ್ಲ್ ಫ್ರೆಂಡ್, ಕೊವಿಡ್ ಸಾಂಕ್ರಾಮಿಕ ಇಲ್ಲದಿದ್ದರೆ ನಾವೀಗ ಮದುವೆ ಆಗುತ್ತಿದ್ದೆವು ಎಂದಿದ್ದರು ರಣ್​ಬೀರ್. ಆಲಿಯಾ ಮತ್ತು ರಣ್​ಬೀರ್ ಜತೆಯಾಗಿ ನಟಿಸುವ ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಶೀಘ್ರದಲ್ಲೇ ತೆರೆ ಕಾಣಲಿದೆ.

ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥಿಯಾವಾಡಿ ಮತ್ತು ಎಸ್.ಎಸ್. ರಾಜಮೌಳಿ ಅವರ ಆರ್​ಆರ್​ಆರ್ ಚಿತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ರಣ್​ಬೀರ್ ಕಪೂರ್ ಮುಂದಿನ ಚಿತ್ರ ಶಂಶೇರಾದಲ್ಲಿ ವಾಣಿ ಕಪೂರ್ ಮತ್ತು ಸಂಜಯ್ ದತ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಶ್ರದ್ದಾ ಕಪೂರ್ ಜತೆ ನಟಿಸುತ್ತಿರುವ ಚಿತ್ರವೊಂದರ ಹೆಸರು ಇನ್ನೂ ಅಂತಿಮವಾಗಿಲ್ಲ. ಸಂದೀಪ್ ರೆಡ್ಡಿ ವಂಗಾ ಅವರ ಆ್ಯನಿಮಲ್ ಚಿತ್ರದಲ್ಲಿ ರಣ್​ಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಜತೆ ನಟಿಸುತ್ತಿದ್ದಾರೆ.

ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರ ಚಿತ್ರೀಕರಣ ಪೂರ್ಣ; ಆಲಿಯಾ ಮತ್ತು ರಣ್​ಬೀರ್ ಜತೆ ಫೋಟೊ ಹಂಚಿಕೊಂಡ ನಾಗಾರ್ಜುನ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ