ಒಂದಂಕಿಗೆ ಕುಸಿಯಿತು ‘ಗದರ್​ 2’ ಕಲೆಕ್ಷನ್​; ಹೆಚ್ಚಲಿದೆ ಮುಂದಿನ ದಿನಗಳ ಪೈಪೋಟಿ

ಬಿಡುಗಡೆಯಾಗಿ 15 ದಿನ ಕಳೆಯುವ ತನಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ‘ಗದರ್​ 2’ ಸಿನಿಮಾ ಅಂತಹ ಸಾಧನೆ ಮಾಡಿದೆ. 14ನೇ ದಿನ ಕೂಡ ಈ ಸಿನಿಮಾ 8.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಲ್ಲಿಗೆ, ಈ ಚಿತ್ರದ ಟೋಟಲ್​ ಕಲೆಕ್ಷನ್​ 419 ಕೋಟಿ ರೂಪಾಯಿ ಆಗಿದೆ. ಆದರೆ ಈಗ ಸ್ಪರ್ಧೆ ನೀಡಲು ಹೊಸ ಸಿನಿಮಾಗಳು ಬಿಡುಗಡೆ ಆಗಿವೆ.

ಒಂದಂಕಿಗೆ ಕುಸಿಯಿತು ‘ಗದರ್​ 2’ ಕಲೆಕ್ಷನ್​; ಹೆಚ್ಚಲಿದೆ ಮುಂದಿನ ದಿನಗಳ ಪೈಪೋಟಿ
‘ಗದರ್​ 2’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Aug 25, 2023 | 8:08 PM

ಇಷ್ಟು ದಿನಗಳ ಕಾಲ ‘ಗದರ್​ 2’ ಸಿನಿಮಾ (Gadar 2 Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿತ್ತು. ಬಿಡುಗಡೆ ಆದಾಗಿನಿಂದ 15 ದಿನಗಳ ಕಾಲ ಅತ್ಯುತ್ತಮವಾಗಿ ಈ ಸಿನಿಮಾ ಪ್ರದರ್ಶನ ಕಂಡಿದೆ. ಆದರೆ ಈಗ ಈ ಚಿತ್ರಕ್ಕೆ ಪೈಪೋಟಿ ಹೆಚ್ಚಾಗಿದೆ. ಇಂದು (ಆಗಸ್ಟ್​ 25) ಹೊಸ ಸಿನಿಮಾಗಳು ಬಿಡುಗಡೆ ಆಗಿವೆ. ಆ ಚಿತ್ರಗಳು ಕೂಡ ಪಾಸಿಟಿವ್​ ಪ್ರತಿಕ್ರಿಯೆ ಪಡೆದುಕೊಂಡಿವೆ. 14ನೇ ದಿನಕ್ಕೆ ‘ಗದರ್​ 2’ ಸಿನಿಮಾದ ಕಲೆಕ್ಷನ್​ ಒಂದಂಕಿಗೆ ಕುಸಿದಿದೆ. ಇನ್ಮುಂದೆ ಈ ಚಿತ್ರದ ಕಲೆಕ್ಷನ್​ (Gadar 2 Collection) ಗಣನೀಯವಾಗಿ ಕುಸಿಯಲಿದೆಯಾ ಅಥವಾ ವೀಕೆಂಡ್​ನಲ್ಲಿ ಮತ್ತೆ ಕಮಾಯಿ ಹೆಚ್ಚಾಗಲಿದೆಯಾ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ನಟ ಸನ್ನಿ ಡಿಯೋಲ್​ (Sunny Deol) ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್​ ನಟಿಸಿದ್ದಾರೆ.

ಬಿಡುಗಡೆಯಾಗಿ 15 ದಿನ ಕಳೆಯುವ ತನಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ‘ಗದರ್​ 2’ ಸಿನಿಮಾ ಅಂತಹ ಸಾಧನೆ ಮಾಡಿದೆ. 14ನೇ ದಿನ ಕೂಡ ಈ ಸಿನಿಮಾ 8.40 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಲ್ಲಿಗೆ, ಈ ಚಿತ್ರದ ಟೋಟಲ್​ ಕಲೆಕ್ಷನ್​ 419 ಕೋಟಿ ರೂಪಾಯಿ ಆಗಿದೆ. ಈ ವೀಕೆಂಡ್​ನಲ್ಲಿ ಕಲೆಕ್ಷನ್​ ಹೆಚ್ಚಿದರೆ ಚಿತ್ರದ ಬಿಸ್ನೆಸ್​ಗೆ ಮತ್ತೆ ಚೈತನ್ಯ ಬಂದಂತೆ ಆಗಲಿದೆ. ಇನ್ನೂ ಹಲವು ಮಲ್ಟಿಪ್ಲೆಕ್ಸ್​ ಮತ್ತು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.

‘ಗದರ್​ 2’ ಸಿನಿಮಾದ ಗೆಲುವಿನ ಖುಷಿಯಲ್ಲಿ ನಟಿ ಅಮೀಷಾ ಪಟೇಲ್​

ಈ ಶುಕ್ರವಾರ ಬಾಲಿವುಡ್​ನಲ್ಲಿ ‘ಡ್ರೀಮ್​ ಗರ್ಲ್​ 2’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಆಯುಷ್ಮಾನ್​ ಖುರಾನಾ ಅವರು ನಟಿಸಿದ್ದಾರೆ. ವಿಮರ್ಶಕರು ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನುಸ್ರತ್​ ಬರೂಚಾ ಅಭಿನಯದ ‘ಅಕೇಲಿ’ ಸಿನಿಮಾ ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾಗಳಿಗೆ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕರೆ ‘ಗದರ್​ 2’ ಚಿತ್ರಕ್ಕೆ ಪೈಪೋಟಿ ಹೆಚ್ಚಾಗಲಿದೆ. ಆಗ ಸಹಜವಾಗಿಯೇ ‘ಗದರ್​ 2’ ಕಲೆಕ್ಷನ್​ ಕುಸಿಯಲಿದೆ. ಹಾಗಿದ್ದರೂ ಕೂಡ 500 ಕೋಟಿ ರೂಪಾಯಿ ಗಡಿ ಮುಟ್ಟುವ ಸಾಮರ್ಥ್ಯ ಈ ಸಿನಿಮಾಗೆ ಇದೆ ಎಂದು ಕೆಲವರು ಅಂದಾಜಿಸಿದ್ದಾರೆ.

ತರಣ್ ಆದರ್ಶ್​ ಟ್ವೀಟ್​:

ಹಲವು ವರ್ಷಗಳಿಂದ ಸನ್ನಿ ಡಿಯೋಲ್​ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿರಲಿಲ್ಲ. ಆದರೆ ‘ಗದರ್​ 2’ ಸಿನಿಮಾದಿಂದ ಅವರ ಸೆಕೆಂಡ್​ ಇನ್ನಿಂಗ್ಸ್​ ಆರಂಭ ಆಗಿದೆ ಎಂದೇ ಹೇಳಬಹುದು. ಈ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿರುವುದರಿಂದ ಸನ್ನಿ ಡಿಯೋಲ್​ಗೆ ಇದ್ದ ಬೇಡಿಕೆ ದುಪ್ಪಟ್ಟಾಗಿದೆ. ಅವರು ನಟಿಸಲಿರುವ ಹೊಸ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದಂತಾಗಿದೆ. ‘ಗದರ್​ 3’ ಬರುತ್ತಾ? ‘ಬಾರ್ಡರ್​ 2’ ಸಿನಿಮಾ ಮಾಡ್ತಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಇಟ್ಟುಕೊಂಡು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ