ನಿಜವಾಯ್ತು ಬ್ರೇಕಪ್ ವಿಚಾರ? ಕಪೂರ್ ಕುಟುಂಬದವರನ್ನು ಅನ್ಫಾಲೋ ಮಾಡಿದ ಮಲೈಕಾ ಅರೋರಾ
ಅರ್ಜುನ್ ಕಪೂರ್ ಹಾಗೂ ಮಲೈಕಾ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ. ಅರ್ಜುನ್ ಕಪೂರ್ಗೆ ಈಗ 38 ವರ್ಷ ವಯಸ್ಸು. ಮಲೈಕಾಗೆ 49 ವರ್ಷ. ಆದರೂ ಇವರ ಮಧ್ಯೆ ಪ್ರೀತಿ ಮೂಡಿತು. ಹಲವು ವರ್ಷಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಒಬ್ಬರ ಪರವಾಗಿ ಮತ್ತೊಬ್ಬರು ನಿಂತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಯಾವುದಾದರೂ ಒಂದು ವಿಚಾರ ಮುನ್ನೆಲೆಗೆ ಬಂತು ಎಂದರೆ ಕೆಲ ದಿನಗಳ ಕಾಲ ಆ ಬಗ್ಗೆ ಚರ್ಚೆ ಇರುತ್ತದೆ. ಈ ರೀತಿ ಹರಿದಾಡುವ ಸುದ್ದಿಗಳಲ್ಲಿ ಕೆಲವು ನಿಜವಾಗಿದೆ, ಇನ್ನೂ ಕೆಲವು ಸುಳ್ಳು ಅನ್ನೋದು ಗೊತ್ತಾಗಿದೆ. ಇತ್ತೀಚೆಗೆ ನಟಿ ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ ಬ್ರೇಕಪ್ ವಿಚಾರ ಹರಿದಾಡಿತ್ತು. ಇದು ನಿಜವಾಗುವ ಸೂಚನೆ ಸಿಕ್ಕಿದೆ. ಇದಕ್ಕೆ ಮಲೈಕಾ ಅರೋರಾ ಅವರ ನಡೆಯೇ ಕಾರಣ. ಈ ವಿಚಾರ ಸುಳ್ಳಾಗಲಿ ಎಂದು ಮಲೈಕಾ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.
ಅರ್ಜುನ್ ಕಪೂರ್ ಹಾಗೂ ಮಲೈಕಾ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ. ಅರ್ಜುನ್ ಕಪೂರ್ಗೆ ಈಗ 38 ವರ್ಷ ವಯಸ್ಸು. ಮಲೈಕಾಗೆ 49 ವರ್ಷ. ಆದರೂ ಇವರ ಮಧ್ಯೆ ಪ್ರೀತಿ ಮೂಡಿತು. ಹಲವು ವರ್ಷಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ದೇಶ-ವಿದೇಶ ಸುತ್ತಾಡುತ್ತಿದ್ದಾರೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಒಬ್ಬರ ಪರವಾಗಿ ಮತ್ತೊಬ್ಬರು ನಿಂತಿದ್ದಾರೆ. ಆದರೆ, ಈಗ ಇವರ ಸಂಬಂಧ ಬ್ರೇಕಪ್ನಲ್ಲಿ ಅಂತ್ಯವಾಗಿದೆ ಎನ್ನಲಾಗುತ್ತಿದೆ.
ಈ ಮೊದಲು ಮಲೈಕಾ ಅವರು ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್, ಕುಟುಂಬದ ಇತರ ಸದಸ್ಯರಾದ ಅನಿಲ್ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಇವರುಗಳನ್ನು ಮಲೈಕಾ ಅನ್ಫಾಲೋ ಮಾಡಿದ್ದಾರೆ. ಆದರೆ, ಅರ್ಜುನ್ ಕಪೂರ್ ಅವರನ್ನು ಈಗಲೂ ಅವರು ಫಾಲೋ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬ್ರೇಕಪ್ನಲ್ಲಿ ಕೊನೆ ಆಯ್ತು ಅರ್ಜುನ್ ಕಪೂರ್-ಮಲೈಕಾ ಅರೋರಾ ಸಂಬಂಧ? ಸಾಕ್ಷಿ ತಂದ ಅಭಿಮಾನಿಗಳು
ಅರ್ಜುನ್ ಕಪೂರ್ ಅವರ ನಡೆ ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅವರು ಇತ್ತೀಚೆಗೆ ಸೋಲೋ ಬೈಕ್ ಟ್ರಿಪ್ ತೆರಳಿದ್ದರು. ಇದು ಸಾಕಷ್ಟು ಜನರ ಅಚ್ಚರಿಗೆ ಕಾರಣ ಆಗಿತ್ತು. ಸದಾ ಮಲೈಕಾ ಹಿಂದೆ ಸುತ್ತಾಡುವ ಅರ್ಜುನ್ ಕಪೂರ್ ಒಬ್ಬಂಟಿಯಾಗಿ ಸುತ್ತಾಡಿದ್ದು ಸಹಜವಾಗಿಯೇ ಅನುಮಾನ ಹುಟ್ಟುಹಾಕಿತ್ತು.
ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಮಲೈಕಾ-ಅರ್ಜುನ್ ಕಪೂರ್ ಒಟ್ಟಾಗಿ ಕಾಣಿಸಿಕೊಂಡರೆ ಈ ಸುದ್ದಿಗೆ ಬ್ರೇಕ್ ಬೀಳಲಿದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅನ್ನೋದು ಅನೇಕರ ನಂಬಿಕೆ. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ