ಬ್ರೇಕಪ್​ನಲ್ಲಿ ಕೊನೆ ಆಯ್ತು ಅರ್ಜುನ್ ಕಪೂರ್-ಮಲೈಕಾ ಅರೋರಾ ಸಂಬಂಧ? ಸಾಕ್ಷಿ ತಂದ ಅಭಿಮಾನಿಗಳು

Arjun-Malaika: ವಯಸ್ಸಿನ ಅಂತರದ ನಡುವೆಯೂ ಪರಸ್ಪರ ಒಟ್ಟಿಗೆ ಬಾಳುತ್ತಿದ್ದ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಬ್ರೇಕ್ ಅಪ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನೆಟ್ಟಿಗರು ಸಾಕ್ಷ್ಯವನ್ನೂ ನೀಡಿದ್ದಾರೆ.

ಬ್ರೇಕಪ್​ನಲ್ಲಿ ಕೊನೆ ಆಯ್ತು ಅರ್ಜುನ್ ಕಪೂರ್-ಮಲೈಕಾ ಅರೋರಾ ಸಂಬಂಧ? ಸಾಕ್ಷಿ ತಂದ ಅಭಿಮಾನಿಗಳು
ಅರ್ಜುನ್-ಮಲೈಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Aug 19, 2023 | 5:43 PM

ನಟ ಅರ್ಜುನ್ ಕಪೂರ್ (Arjun Kapoor) ಹಾಗೂ ನಟಿ ಮಲೈಕಾ ಅರೋರಾ (Malaika Arora) ಅವರು ಹಲವು ವರ್ಷಗಳಿಂದ ಪ್ರಿತಿಸುತ್ತಿದ್ದಾರೆ. ಇವರ ಜೋಡಿಯನ್ನು ನೋಡಿ ಅನೇಕರು ನಕ್ಕಿದ್ದಾರೆ. ಇದಕ್ಕೆ ಕಾರಣ ವಯಸ್ಸಿನ ಅಂತರ. ಅರ್ಜುನ್ ಕಪೂರ್​ಗಿಂತ ಮಲೈಕಾ 11 ವರ್ಷ ದೊಡ್ಡವರು. ಈ ವಯಸ್ಸಿನ ಅಂತರ ಇವರ ಪ್ರೀತಿಗೆ ಅಡ್ಡಿ ಉಂಟು ಮಾಡಿಲ್ಲ. ಇಷ್ಟು ದಿನ ಹಾಯಾಗಿ ಸುತ್ತಾಡಿಕೊಂಡಿದ್ದ ಈ ಜೋಡಿ ಈಗ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಸದ್ಯ ಈ ವಿಚಾರ ಕೇಳಿ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಅರ್ಜುನ್ ಕಪೂರ್ ವಯಸ್ಸು 38. ಮಲೈಕಾಗೆ 49 ವರ್ಷ. ಅರ್ಜುನ್ ಹಾಗೂ ಮಲೈಕಾ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಇವರು ಮದುವೆ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಈ ಜೋಡಿ ಅನೇಕರು ಟೀಕೆ ಮಾಡಿದ್ದರು. ಆದರೆ, ಈ ಟ್ರೋಲ್​ಗಳಿಗೆ ಇವರು ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಈಗ ಇಬ್ಬರೂ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಅಷ್ಟಕ್ಕೂ ಬ್ರೇಕಪ್ ಸುದ್ದಿ ಹುಟ್ಟಿಕೊಳ್ಳಲು ಕಾರಣವೇನು? ಅದಕ್ಕೂ ಉತ್ತರ ಇದೆ. ಅರ್ಜುನ್ ಕಪೂರ್ ಹಾಗೂ ಮಲೈಕಾ ಎಲ್ಲಿಗೇ ತೆರಳಿದರೂ ಒಟ್ಟಾಗಿ ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಅರ್ಜುನ್ ಕಪೂರ್ ಅವರು ಸೋಲೋ ಟ್ರಿಪ್​ನ ಫೋಟೋ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಅನುಮಾನ ಮೂಡಿಸಿದೆ. ಇವರದ್ದು ಬ್ರೇಕಪ್ ಆಗಿದೆ ಎಂದೆಲ್ಲ ಮಾತನಾಡಿಕೊಳ್ಳಲಾಗುತ್ತಿದೆ. ಇನ್ನು, ಎಪಿ ದಿಲ್ಲೋನ್ ಇತ್ತೀಚೆಗೆ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಮಲೈಕಾ ಹಾಜರಿ ಹಾಕಿದ್ದರು. ಆದರೆ, ಅರ್ಜುನ್ ಕಪೂರ್ ಕಂಡಿಲ್ಲ. ಇದು ಇವರ ಬ್ರೇಕಪ್ ವಿಚಾರ ಹುಟ್ಟಿಕೊಳ್ಳಲು ಪ್ರಮುಖ ಕಾರಣ.

ಇದನ್ನೂ ಓದಿ:Arjun Kapoor: ಮಲೈಕಾ ಅರೋರಾ ಪ್ರೆಗ್ನೆಂಟ್​ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ಅರ್ಜುನ್​ ಕಪೂರ್

ಈ ರೀತಿಯ ವದಂತಿಗಳು ಈ ಮೊದಲು ಕೂಡ ಹುಟ್ಟಿಕೊಂಡಿತ್ತು. ಆದರೆ, ಈ ಜೋಡಿ ನಕ್ಕು ಸುಮ್ಮನಾಗಿತ್ತು. ಈಗಲೂ ಅವರು ಹಾಗೆಯೇ ಮಾಡಿದ್ದಾರೆ ಎನ್ನುವ ಮಾತೂ ಇದೆ. ‘ಇಬ್ಬರೂ ಚೆನ್ನಾಗಿದ್ದಾರೆ. ಸೋಲೋ ಟ್ರಿಪ್ ತೆರಳಬೇಕು ಎಂಬುದು ಅರ್ಜುನ್ ಕಪೂರ್ ಆಸೆ ಆಗಿತ್ತು. ಅದನ್ನು ಅವರು ಪೂರೈಸಿಕೊಂಡಿದ್ದಾರೆ ಅಷ್ಟೇ. ಇವರ ಸಂಬಂಧ ಹಾಳಾಗಿಲ್ಲ’ ಎಂದು ಅರ್ಜುನ್ ಆಪ್ತರು ಹೇಳಿರುವುದಾಗಿಯೂ ವರದಿ ಆಗಿದೆ.

ಸದ್ಯ ಈ ವದಂತಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಅರ್ಜುನ್ ಕಪೂರ್ ಹಾಗೂ ಮಲೈಕಾ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡರೆ ಈ ಸುದ್ದಿಗೆ ಬ್ರೇಕ್ ಬೀಳಲಿದೆ. ಅರ್ಜುನ್ ಕಪೂರ್ ಅವರು ಸಾಲು ಸಾಲು ಫ್ಲಾಪ್ ಸಿನಿಮಾ ಕೊಟ್ಟಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
‘ಮ್ಯಾಕ್ಸ್’ ಸಿನಿಮಾದ ಆಡಿಯೋ ರಿಲೀಸ್​ ಕಾರ್ಯಕ್ರಮ; ಲೈವ್​ ವಿಡಿಯೋ ನೋಡಿ..
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು