AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಸಿನಿಮಾಗೆ ರೆಡಿ ಆದ ಸನ್ನಿ ಡಿಯೋಲ್; 90ರ ದಶಕದ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್

‘ಗದರ್ 2’ ಹಿಟ್ ಆಗಿರುವುದರಿಂದ ‘ಬಾರ್ಡರ್ 2’ ಸಿನಿಮಾ ಮಾಡಲು ತಂಡ ಉತ್ಸುಕತೆ ತೋರಿಸುತ್ತಿಲ್ಲ. ಕಳೆದ 2-3 ವರ್ಷಗಳಿಂದ ಜೆಪಿ ದತ್ತಾ ಈ ಕಥೆಯ ಕೆಲಸದಲ್ಲಿ ಬ್ಯುಸಿ ಆಗಿದ್ದರು. 1971ರ ಭಾರತ-ಪಾಕಿಸ್ತಾನದ ಯುದ್ಧದ ಘಟನೆ ಆಧರಿಸಿ ಈ ಸಿನಿಮಾ ಸಿದ್ಧವಾಗಲಿದೆ ಎನ್ನಲಾಗಿದೆ.

ಮತ್ತೊಂದು ಸಿನಿಮಾಗೆ ರೆಡಿ ಆದ ಸನ್ನಿ ಡಿಯೋಲ್; 90ರ ದಶಕದ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್
‘ಬಾರ್ಡರ್’​ ಸಿನಿಮಾ ಪೋಸ್ಟರ್​
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​|

Updated on: Aug 20, 2023 | 11:27 AM

Share

ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ಅವರು ದೊಡ್ಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಗದರ್ 2’ ಸಿನಿಮಾ (Gadar 2 Movie) ಅವರ ವೃತ್ತಿ ಜೀವನದ ಬಹುದೊಡ್ಡ ಹಿಟ್ ಎನಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಸಿನಿಮಾ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಲವು ದಾಖಲೆಗಳನ್ನು ಸಿನಿಮಾ ಉಡೀಸ್ ಮಾಡಿದೆ. 65ರ ವಯಸ್ಸಲ್ಲೂ ಸನ್ನಿ ಅವರು ಮಾಡಿರೋ ಆ್ಯಕ್ಷನ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಿನಿಮಾ ಬಳಿಕ ಅವರಿಗೆ ಬೇಡಿಕೆ ಹೆಚ್ಚಿದೆ. ಹಲವು ನಿರ್ಮಾಪಕರು ಅವರ ಕಾಲ್​ಶೀಟ್ ಕೇಳಿದ್ದಾರೆ. ಅವರು ಈಗ ತರಾತುರಿ ಮಾಡುತ್ತಿಲ್ಲ. ಈಗ ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತಿರುವ ಹೊಸ ಸುದ್ದಿ ಏನೆಂದರೆ ಸನ್ನಿ ಡಿಯೋಲ್ ‘ಬಾರ್ಡರ್ 2’ (Border 2) ಮಾಡೋಕೆ ರೆಡಿ ಆಗಿದ್ದಾರಂತೆ. ಈ ದೊಡ್ಡ ಸುದ್ದಿ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

‘ಬಾರ್ಡರ್’ ಸಿನಿಮಾ 1997ರಲ್ಲಿ ರಿಲೀಸ್ ಆಯಿತು. ಜಪಿ ದತ್ತಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಿರ್ಮಾಣ ಕೂಡ ಅವರದ್ದೇ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಜಾಕಿ ಶ್ರಾಫ್, ಅಕ್ಷಯ್ ಖನ್ನಾ, ಪೂಜಾ ಭಟ್, ಟಬು ಮೊದಲಾದ ಕಲಾವಿದರು ನಟಿಸಿದ್ದರು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಪ್ಲ್ಯಾನ್ ನಡೆದಿದೆ. ಕೆಲವು ಮಾಧ್ಯಮಗಳ ಪ್ರಕಾರ, ‘ಬಾರ್ಡರ್ 2’ ಚಿತ್ರಕ್ಕಾಗಿ ಸನ್ನಿ ಡಿಯೋಲ್, ಜೆಪಿ ದತ್ತಾ ಮತ್ತು ನಿಧಿ ದತ್ತಾ ಒಂದಾಗಿದ್ದಾರೆ. ಯುದ್ಧದ ವಿಚಾರವನ್ನು ಇಟ್ಟುಕೊಂಡು ‘ಬಾರ್ಡರ್ 2’ ಚಿತ್ರವನ್ನು ತರಲು ಸಿದ್ಧತೆ ನಡೆಸಲಾಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ‘ಗದರ್​ 2’; ನಿಲ್ಲುತ್ತಲೇ ಇಲ್ಲ ಸನ್ನಿ ಡಿಯೋಲ್​ ಅಬ್ಬರ

ಹಾಗಂತ ‘ಗದರ್ 2’ ಹಿಟ್ ಆಗಿರುವುದರಿಂದ ಈ ಸಿನಿಮಾ ಮಾಡಲು ತಂಡ ಉತ್ಸುಕತೆ ತೋರಿಸುತ್ತಿಲ್ಲ. ಕಳೆದ 2-3 ವರ್ಷಗಳಿಂದ ಜೆಪಿ ದತ್ತಾ ಈ ಕಥೆಯ ಕೆಲಸದಲ್ಲಿ ಬ್ಯುಸಿ ಆಗಿದ್ದರು. 1971ರ ಭಾರತ-ಪಾಕಿಸ್ತಾನದ ಯುದ್ಧದ ಘಟನೆ ಆಧರಿಸಿ ಈ ಸಿನಿಮಾ ಸಿದ್ಧವಾಗಲಿದೆ ಎನ್ನಲಾಗಿದೆ. ವಿಶೇಷ ಎಂದರೆ ‘ಬಾರ್ಡರ್’ ಸಿನಿಮಾ ಕೂಡ ಇದೇ ಯುದ್ಧದ ವಿಚಾರ ಇಟ್ಟುಕೊಂಡು ಮಾಡಲಾಗಿತ್ತು. ಇಲ್ಲಿ ಇಡೀ ಯುದ್ಧದ ಕಥೆ ಹೇಳಲಾಗುತ್ತದೆಯೋ ಅಥವಾ ಯುದ್ಧದಲ್ಲಿ ಭಾಗಿ ಆದ ಯಾವುದಾದರೂ ಒಬ್ಬ ವ್ಯಕ್ತಿ ಅಥವಾ ಘಟನೆ ಆಧರಿಸಿ ಸಿನಿಮಾ ಮಾಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್​ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ

‘ಬಾರ್ಡರ್ 2’ ಚಿತ್ರವನ್ನು ಜೆಪಿ ದತ್ತಾ ಮತ್ತು ನಿಧಿ ದತ್ತಾ ಜಂಟಿಯಾಗಿ ನಿರ್ಮಿಸಲಿದ್ದಾರೆ. ಸದ್ಯದಲ್ಲೇ ಚಿತ್ರದ ಸ್ಕ್ರಿಪ್ಟ್ ಕೆಲಸ ಶುರುವಾಗಲಿದೆ. ಈ ಚಿತ್ರಕ್ಕಾಗಿ ಸನ್ನಿ ಡಿಯೋಲ್ ಅವರು ಭರ್ಜರಿ ಸಂಭಾವನೆ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

‘ಗದರ್ 2’ ಸಿನಿಮಾ ಎಂಟು ದಿನಕ್ಕೆ 300 ಕೋಟಿ ರೂಪಾಯಿ ಮಾಡಿದೆ. ಭಾರತದ ವ್ಯಕ್ತಿ ಮಗನಿಗಾಗಿ ಪಾಕಿಸ್ತಾನಕ್ಕೆ ಎಂಟ್ರಿ ಕೊಡುತ್ತಾನೆ. ಅಲ್ಲಿಯವರನ್ನು ಸದೆ ಬಡಿದು ಮಗನ ಕರೆದು ತರುತ್ತಾನೆ. ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇದೆ. ಹೀಗಾಗಿ ಜನರಿಗೆ ಸಿನಿಮಾ ಇಷ್ಟವಾಗಿದೆ. ‘ಗದರ್ 2’ ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿಯ ಪ್ರೀತಿ ತೋರಿಸಿದರೋ ಅದೇ ಪ್ರೀತಿ ‘ಬಾರ್ಡರ್ 2’ ಮೇಲೂ ತೋರಿಸಬಹುದು ಎನ್ನುವ ನಂಬಿಕೆ ಸನ್ನಿ ಡಿಯೋಲ್ ಅವರದ್ದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.