ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ‘ಗದರ್​ 2’; ನಿಲ್ಲುತ್ತಲೇ ಇಲ್ಲ ಸನ್ನಿ ಡಿಯೋಲ್​ ಅಬ್ಬರ

‘ಗದರ್​ 2’ ಚಿತ್ರದ ಖದರ್​ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. 8ನೇ ದಿನ ಕೂಡ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಶುಕ್ರವಾರ (ಆ.18) ಸಂಜೆಯೊಳಗೆ 300 ಕೋಟಿ ರೂಪಾಯಿ ಗಡಿದಾಟಿದೆ. ಅಕ್ಷಯ್​ ಕುಮಾರ್​ ನಟನೆಯ ‘ಒಎಂಜಿ 2’, ರಜನಿಕಾಂತ್​ ಅಭಿನಯದ ‘ಜೈಲರ್’ ಸಿನಿಮಾಗಳ ಪೈಪೋಟಿಯನ್ನೂ ಎದುರಿಸಿ ‘ಗದರ್​ 2’ ಚಿತ್ರ ಮುನ್ನುಗ್ಗುತ್ತಿದೆ.

ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ‘ಗದರ್​ 2’; ನಿಲ್ಲುತ್ತಲೇ ಇಲ್ಲ ಸನ್ನಿ ಡಿಯೋಲ್​ ಅಬ್ಬರ
ಸನ್ನಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Aug 18, 2023 | 7:34 PM

ಬಾಲಿವುಡ್​ನ ‘ಗದರ್​ 2’ ಸಿನಿಮಾ (Gadar 2 Movie) ಇಷ್ಟರಮಟ್ಟಿಗೆ ಕಲೆಕ್ಷನ್​ ಮಾಡುತ್ತದೆ ಎಂದು ಪ್ರಾಯಶಃ ಯಾರೂ ಊಹಿಸಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಬಹುತೇಕ ಸೈಡ್​ಲೈನ್​ ಆಗಿದ್ದ ಸನ್ನಿ ಡಿಯೋಲ್​ (Sunny Deol) ಅವರು ಈ ಸಿನಿಮಾ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಟಾಪ್​ ನಟರ ಪಟ್ಟಿಯಲ್ಲಿ ಈಗ ಅವರ ಹೆಸರು ಕೂಡ ಸೇರ್ಪಡೆ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ‘ಗದರ್​ 2’ ಅಬ್ಬರ ಜೋರಾಗಿದೆ. ಬಿಡುಗಡೆಯಾಗಿ 8 ದಿನಗಳು ಕಳೆದರೂ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಲೇ ಇದೆ. ಇದರಿಂದ ನಿರ್ಮಾಪಕರಿಗೆ ಸಖತ್​ ಲಾಭ ಆಗಿದೆ. ಎರಡನೇ ವೀಕೆಂಡ್​ನಲ್ಲಿ ಈ ಚಿತ್ರ ಮತ್ತಷ್ಟು ಬಿಸ್ನೆಸ್​ ಮಾಡುವುದು ಖಚಿತವಾಗಿದೆ. ಈಗಾಗಲೇ ‘ಗದರ್​ 2’ ಸಿನಿಮಾದ ಕಲೆಕ್ಷನ್​ (Gadar 2 Collection) 300 ಕೋಟಿ ರೂಪಾಯಿ ದಾಟಿದೆ. ಈ ಚಿತ್ರಕ್ಕೆ ಅನಿಲ್​ ಶರ್ಮಾ ನಿರ್ದೇಶನ ಮಾಡಿದ್ದು, ಅಮೀಷಾ ಪಟೇಲ್​ ಅವರು ನಾಯಕಿಯಾಗಿ ನಟಿಸಿದ್ದಾರೆ.

ಟ್ರೇಡ್​ ವಿಶ್ಲೇಷಕರು ‘ಗದರ್​ 2’ ಸಿನಿಮಾದ ಗೆಲುವುವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ. ಒಂದು ವಾರ ಕಳೆಯುವುದರಲ್ಲಿ 300 ಕೋಟಿ ರೂಪಾಯಿ ಕಮಾಯಿ ಮಾಡುವುದು ಎಂದರೆ ಸುಲಭದ ಮಾತಲ್ಲ. ದಕ್ಷಿಣ ಭಾರತದ ಸಿನಿಮಾಗಳ ಪ್ರಭಾವದ ಎದುರು ಬಾಲಿವುಡ್​ ಚಿತ್ರಗಳ ಮಾರುಕಟ್ಟೆ ಕೊಂಚ ಡಲ್​ ಆಗಿತ್ತು. ಆದರೆ ಈಗ ‘ಗದರ್​ 2’ ಚಿತ್ರದ ಗೆಲುವಿನಿಂದಾಗಿ ಬಿ-ಟೌನ್​ ಅಂಗಳದಲ್ಲಿ ಮತ್ತೆ ಹೊಸ ಚೈತನ್ಯ ಮೂಡಿದಂತಾಗಿದೆ. ನಟ ಸನ್ನಿ ಡಿಯೋಲ್​ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಟ್ವೀಟ್​:

ಆಗಸ್ಟ್​ 11ರಂದು ‘ಗದರ್​ 2’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಈ ಸಿನಿಮಾ ಬರೋಬ್ಬರಿ 40.10 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿತು. ಎರಡನೇ ದಿನ 43.08 ಕೋಟಿ ರೂಪಾಯಿ ಬಾಚಿಕೊಂಡಿತು. ಮೂರನೇ ದಿನ 51.70 ಕೋಟಿ ರೂಪಾಯಿ ಆದಾಯ ಹರಿದುಬಂತು. 4ನೇ ದಿನ ಸಂಗ್ರಹ ಆಗಿದ್ದು 38.70 ಕೋಟಿ ರೂಪಾಯಿ. 5ನೇ ದಿನವಂತೂ ಬಂಪರ್ ಲಾಟರಿ ಎಂಬಂತೆ ಭರ್ಜರಿಯಾಗಿ 55.40 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು. ಆರನೇ ದಿನ 32.37 ಕೋಟಿ ರೂಪಾಯಿ ಗಳಿಕೆ ಆಗಿದೆ. 7ನೇ ದಿನ ಆಗಿದ್ದು 23.28 ಕೋಟಿ ರೂಪಾಯಿ.

ಇದನ್ನೂ ಓದಿ: ‘ಗದರ್​ 2’ ಯಶಸ್ಸು ಸಹಿಸದ ಕಿಡಿಗೇಡಿಗಳು; ಚಿತ್ರಮಂದಿರದ ಎದುರು ಬಾಂಬ್​ ಸ್ಫೋಟ

‘ಗದರ್​ 2’ ಚಿತ್ರದ ಖದರ್​ ಇಷ್ಟಕ್ಕೇ ನಿಲ್ಲುವಂತೆ ಕಾಣುತ್ತಿಲ್ಲ. ಶುಕ್ರವಾರ (ಆಗಸ್ಟ್​ 18) ಕೂಡ ಈ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಶುಕ್ರವಾರ ಸಂಜೆಯೊಳಗೆ 300 ಕೋಟಿ ರೂಪಾಯಿ ಗಡಿದಾಟಿದೆ. ಅಕ್ಷಯ್​ ಕುಮಾರ್​ ನಟನೆಯ ‘ಒಎಂಜಿ 2’, ರಜನಿಕಾಂತ್​ ಅಭಿನಯದ ‘ಜೈಲರ್’ ಸಿನಿಮಾಗಳ ಪೈಪೋಟಿಯನ್ನೂ ಎದುರಿಸಿ ‘ಗದರ್​ 2’ ಚಿತ್ರ ಮುನ್ನುಗ್ಗುತ್ತಿದೆ. ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿದ್ದರಿಂದ ಈ ಸಿನಿಮಾಗೆ ಅನುಕೂಲ ಆಗಿದೆ. ಸಾಲು ಸಾಲು ರಜೆ ಬಂದಿದ್ದರ ಲಾಭವನ್ನೂ ಈ ಸಿನಿಮಾ ಪಡೆದುಕೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್