AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗದರ್​ 2’ ಯಶಸ್ಸು ಸಹಿಸದ ಕಿಡಿಗೇಡಿಗಳು; ಚಿತ್ರಮಂದಿರದ ಎದುರು ಬಾಂಬ್​ ಸ್ಫೋಟ

ಅನೇಕ ಕಡೆಗಳಲ್ಲಿ ‘ಗದರ್​ 2’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಕೆಲವರು ಬ್ಲಾಕ್​ ಟಿಕೆಟ್​ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪಾಟ್ನದ ಒಂದು ಥಿಯೇಟರ್​ ಎದುರಿನಲ್ಲೂ ಕೆಲವರು ಬ್ಲಾಕ್​ ಟಿಕೆಟ್​ ಮಾರಲು ಯತ್ನಿಸಿದ್ದಾರೆ. ಅಲ್ಲದೇ, ಚಿತ್ರಮಂದಿರದ ಸಿಬ್ಬಂದಿಗೂ ಬೆದರಿಕೆ ಹಾಕಲಾಗಿದೆ. ಈ ಸಂದರ್ಭದಲ್ಲೇ ಬಾಂಬ್​ ಹಾಕಲಾಗಿದೆ.

‘ಗದರ್​ 2’ ಯಶಸ್ಸು ಸಹಿಸದ ಕಿಡಿಗೇಡಿಗಳು; ಚಿತ್ರಮಂದಿರದ ಎದುರು ಬಾಂಬ್​ ಸ್ಫೋಟ
ಸನ್ನಿ ಡಿಯೋಲ್​
ಮದನ್​ ಕುಮಾರ್​
|

Updated on: Aug 18, 2023 | 10:59 AM

Share

ಅನೇಕ ವರ್ಷಗಳ ಬಳಿಕ ನಟ ಸನ್ನಿ ಡಿಯೋಲ್​ (Sunny Deol) ಅವರು ಬಹುದೊಡ್ಡ ಗೆಲುವು ಪಡೆದಿದ್ದಾರೆ. ಅವರು ಅಭಿನಯಿಸಿರುವ ‘ಗದರ್​ 2’ ಸಿನಿಮಾ (Gadar 2 Movie) ಸೂಪರ್​ ಹಿಟ್​ ಆಗಿದೆ. ಒಂದು ವಾರ ಕಳೆಯುವುದರೊಳಗೆ ಈ ಸಿನಿಮಾ 260 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಗೆಲುವನ್ನು ಸಹಿಸದ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ‘ಗದರ್​ 2’ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರದ ಎದುರಿನಲ್ಲಿ ಬಾಂಬ್​ ಸ್ಫೋಟ ಮಾಡಲಾಗಿದೆ. ಪಾಟ್ನದ ಥಿಯೇಟರ್​ ಮುಂದೆ ಈ ಘಟನೆ ನಡೆದಿದೆ. ಸದ್ಯಕ್ಕೆ ಕಿಡಿಗೇಡಿಗಳನ್ನು ಬಂಧಿಸಲಾಗಿದೆ ಎಂದು ವರದಿ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಂಬ್​ ಸ್ಫೋಟದಿಂದ (Bomb Blast) ಯಾವುದೇ ಪ್ರಾಣಹಾನಿ ಆಗಿಲ್ಲ ಎಂಬುದು ಸಮಾಧಾನಕರ ಸಂಗತಿ.

ಅನೇಕ ಕಡೆಗಳಲ್ಲಿ ‘ಗದರ್​ 2’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಕೆಲವರು ಬ್ಲಾಕ್​ ಟಿಕೆಟ್​ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪಾಟ್ನದ ಥಿಯೇಟರ್​ ಎದುರಿನಲ್ಲೂ ಕೆಲವರು ಬ್ಲಾಕ್​ ಟಿಕೆಟ್​ ಮಾರಲು ಯತ್ನಿಸಿದ್ದಾರೆ. ಅಲ್ಲದೇ, ಚಿತ್ರಮಂದಿರದ ಸಿಬ್ಬಂದಿಗೂ ಬೆದರಿಕೆ ಹಾಕಲಾಗಿದೆ. ಈ ಸಂದರ್ಭದಲ್ಲೇ ಬಾಂಬ್​ ಹಾಕಲಾಗಿದೆ. ಇವು ತೀವ್ರ ಸ್ವರೂಪದ ಬಾಂಬ್​ ಆಗಿರದ ಕಾರಣ ಹೆಚ್ಚಿನ ಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಸಿನಿಮಾ ಹಿಟ್ ಆದ ಬಳಿಕ ಸನ್ನಿ ಡಿಯೋಲ್​ಗೆ ಸೊಕ್ಕು ಬಂತು’; ನಟನ ವರ್ತನೆಗೆ ಆಕ್ರೋಶ

ಈ ಘಟನೆ ಬಗ್ಗೆ ಚಿತ್ರಮಂದಿರದ ಮಾಲೀಕರು ಮಾಹಿತಿ ನೀಡಿದ್ದಾರೆ. ‘ಈ ರೀತಿ ಆಗಿರುವುದು ಇದೇ ಮೊದಲೇನೂ ಅಲ್ಲ. ಕೆಟ್ಟ ಉದ್ದೇಶ ಹೊಂದಿರುವ ವ್ಯಕ್ತಿಗಳು ಬ್ಲಾಕ್​ ಟಿಕೆಟ್​ ಮಾರಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಿಲ್ಲ. ಕಿಡಿಗೇಡಿಗಳು ಗಂಭೀರವಾದ ಕೃತ್ಯ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಥಿಯೇಟರ್​ ಸಿಬ್ಬಂದಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದ ಪಾಕ್ ಯುವಕರು; ಇದು ‘ಗದರ್ 2’ ಎಫೆಕ್ಟ್

‘ಗದರ್​ 2’ ಸಿನಿಮಾಗೆ ಅನಿಲ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಆಗಸ್ಟ್​ 11ರಂದು ಈ ಚಿತ್ರ ಬಿಡುಗಡೆ ಆಯಿತು. ಅಂದಿನಿಂದ ಇಂದಿನ (ಆಗಸ್ಟ್​ 18) ತನಕ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ವೀಕೆಂಡ್​ನಲ್ಲಿ ಈ ಸಿನಿಮಾ ಮತ್ತೆ ಅಬ್ಬರಿಸಲಿದೆ. ಟೋಟಲ್​ ಕಲೆಕ್ಷನ್​ ಎಷ್ಟಾಗಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. 2001ರಲ್ಲಿ ‘ಗದರ್​’ ಸಿನಿಮಾ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಆ ಸಿನಿಮಾದ ಸೀಕ್ವೆಲ್​ ಆಗಿ ‘ಗದರ್​ 2’ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More