AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗದರ್ 2’ಗೆ ವಾರದ ದಿನವೂ 35 ಕೋಟಿ ರೂ. ಕಲೆಕ್ಷನ್; ‘ಕೆಜಿಎಫ್ 2’ ದಾಖಲೆ ಮೇಲೆ ಕಣ್ಣಿಟ್ಟ ಸನ್ನಿ ಡಿಯೋಲ್ ಸಿನಿಮಾ

ಆ್ಯಕ್ಷನ್ ಸಿನಿಮಾ ಇಷ್ಟು ಪಡುವವರ ಸಂಖ್ಯೆ ದೊಡ್ಡದಿದೆ. ‘ಗದರ್ 2’ ಚಿತ್ರದಲ್ಲೂ ಭರ್ಜರಿ ಆ್ಯಕ್ಷನ್ ಇದೆ. ಪ್ರೀತಿ-ಪ್ರೇಮದ ಕಥೆ ಇದೆ. ಈ ಕಾರಣದಿಂದ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಭರ್ಜರಿಯಾಗಿ ಬಾಯಿಮಾತಿನ ಪ್ರಚಾರ ಸಿಗುತ್ತಿದೆ. ಈ ಸಿನಿಮಾ ಬುಧವಾರ (ಆಗಸ್ಟ್ 16) 34.5 ಕೋಟಿ ರೂಪಾಯಿ ಬಾಚಿಕೊಂಡಿದೆ.

‘ಗದರ್ 2’ಗೆ ವಾರದ ದಿನವೂ 35 ಕೋಟಿ ರೂ. ಕಲೆಕ್ಷನ್; ‘ಕೆಜಿಎಫ್ 2’ ದಾಖಲೆ ಮೇಲೆ ಕಣ್ಣಿಟ್ಟ ಸನ್ನಿ ಡಿಯೋಲ್ ಸಿನಿಮಾ
ಗದರ್-ಕೆಜಿಎಫ್ 2
ರಾಜೇಶ್ ದುಗ್ಗುಮನೆ
|

Updated on: Aug 17, 2023 | 11:46 AM

Share

‘ಗದರ್ 2’ ಸಿನಿಮಾದ (Gadar 2 Movie) ಅಬ್ಬರ ಸದ್ಯಕ್ಕಂತೂ ನಿಲ್ಲುವ ಸೂಚನೆ ಸಿಗುತ್ತಿಲ್ಲ. ಈ ಚಿತ್ರ ಆಗಸ್ಟ್ 11ರಿಂದ ಆಗಸ್ಟ್​ 16ರವರೆಗೆ ಒಂದೇ ರೀತಿಯ ಗಳಿಕೆ ಮಾಡುತ್ತಿದೆ. ವಾರದ ದಿನವೂ ಸಿನಿಮಾದ ಗಳಿಕೆ 35 ಕೋಟಿ ರೂಪಾಯಿಗೂ ಕೆಳಗೆ ಇಳಿದಿಲ್ಲ. ಸದ್ಯ ಸನ್ನಿ ಡಿಯೋಲ್ ಸಿನಿಮಾ ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದ (KGF Chapter 2) ದಾಖಲೆ ಮೇಲೆ ಕಣ್ಣಿಟ್ಟಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಚಿತ್ರದ ಅಬ್ಬರ ಹೀಗೇ ಮುಂದುವರಿದರೆ ಮತ್ತಷ್ಟು ದಾಖಲೆಗಳು ಸೃಷ್ಟಿ ಆಗಲಿದೆ.

ಆ್ಯಕ್ಷನ್ ಸಿನಿಮಾ ಇಷ್ಟು ಪಡುವವರ ಸಂಖ್ಯೆ ದೊಡ್ಡದಿದೆ. ‘ಗದರ್ 2’ ಚಿತ್ರದಲ್ಲೂ ಭರ್ಜರಿ ಆ್ಯಕ್ಷನ್ ಇದೆ. ಪ್ರೀತಿ-ಪ್ರೇಮದ ಕಥೆ ಇದೆ. ಈ ಕಾರಣದಿಂದ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಜೊತೆಗೆ ಚಿತ್ರಕ್ಕೆ ಭರ್ಜರಿಯಾಗಿ ಬಾಯಿಮಾತಿನ ಪ್ರಚಾರ ಸಿಗುತ್ತಿದೆ. ಈ ಸಿನಿಮಾ ಬುಧವಾರ (ಆಗಸ್ಟ್ 16) 34.5 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ದಿನ ಇಷ್ಟು ದೊಡ್ಡಮಟ್ಟದಲ್ಲಿ ಗಳಿಕೆ ಮಾಡೋದು ಅದು ಸಣ್ಣ ಸಾಧನೆಯೇನೂ ಅಲ್ಲ.

ಶುಕ್ರವಾರ (ಆಗಸ್ಟ್ 11) ಈ ಚಿತ್ರಕ್ಕೆ 40.10 ಕೋಟಿ ರೂಪಾಯಿ ಗಳಿಕೆ ಆಗಿತ್ತು. ಶನಿವಾರ 43.08 ಕೋಟಿ ರೂಪಾಯಿ ಹರಿದು ಬಂದಿದೆ. ಭಾನುವಾರ 51.70 ಕೋಟಿ ರೂ., ಸೋಮವಾರ 38.70 ಕೋಟಿ ರೂ., ಮಂಗಳವಾರ 55.40 ಕೋಟಿ ರೂ., ಹಣವನ್ನು ಸಿನಿಮಾ ಗಳಿಸಿದೆ. ಈಗ ಬುಧವಾರದ ಗಳಿಕೆಯೂ ಸೇರಿ ಚಿತ್ರದ ಒಟ್ಟಾರೆ ಕಲೆಕ್ಷನ್ 263.48 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: 173 ಕೋಟಿ ರೂ. ದಾಟಿದರೂ ನಿಲ್ಲುತ್ತಲೇ ಇಲ್ಲ ‘ಗದರ್​ 2’ ಅಬ್ಬರ; ದೊಡ್ಡ ಸ್ಟಾರ್​ಗಳ ದಾಖಲೆ ಕೂಡ ಉಡೀಸ್​

ಸದ್ಯ ‘ಗದರ್ 2’ ಸಿನಿಮಾ ತಂಡ ಕನ್ನಡದ ‘ಕೆಜಿಎಫ್ 2’ ಕಲೆಕ್ಷನ್ ಮೇಲೆ ಕಣ್ಣಿಟ್ಟಿದೆ. ‘ಕೆಜಿಎಫ್ 2’ ಚಿತ್ರ ಬಾಲಿವುಡ್​ನಲ್ಲಿ 434 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಗಳಿಕೆಯನ್ನು ‘ಗದರ್ 2’ ಮುರಿದು ಹಾಕಲಿದೆ ಎನ್ನಲಾಗುತ್ತಿದೆ. ‘ಜವಾನ್’ ಸಿನಿಮಾದ ಬಾಲಿವುಡ್ ಗಳಿಕೆ 543 ಕೋಟಿ ರೂಪಾಯಿ ಇದೆ. ಇದನ್ನು ಹಿಂದಿಕ್ಕೋದು ‘ಗದರ್ 2’ ಚಿತ್ರದಿಂದ ಸಾಧ್ಯವಾಗೋದು ಅನುಮಾನ ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು