ಯಶ್, ರಿಷಬ್ ಶೆಟ್ಟಿ ಇಬ್ಬರೂ ಒಂದೇ ರೀತಿ: ಹೀಗ್ಯಾಕಂದರು ದುಲ್ಕರ್ ಸಲ್ಮಾನ್

Dulquer Salmaan: ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್, ನಟ ಯಶ್ ಹಾಗೂ ರಿಷಬ್ ಶೆಟ್ಟಿ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದಾರೆ. 'ಕಾಂತಾರ' ಸಿನಿಮಾದ ಬಗ್ಗೆ ಸಣ್ಣ ವಿಮರ್ಶೆಯನ್ನೂ ಮಾಡಿದ್ದಾರೆ.

ಯಶ್, ರಿಷಬ್ ಶೆಟ್ಟಿ ಇಬ್ಬರೂ ಒಂದೇ ರೀತಿ: ಹೀಗ್ಯಾಕಂದರು ದುಲ್ಕರ್ ಸಲ್ಮಾನ್
ಯಶ್-ದುಲ್ಕರ್-ರಿಷಬ್
Follow us
ಮಂಜುನಾಥ ಸಿ.
|

Updated on: Aug 12, 2023 | 10:01 PM

ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ (Dulquer salmaan) ಭಾಷೆಗಳ ಗಡಿಯನ್ನು ದಾಟಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ದುಲ್ಕರ್ ಸಲ್ಮಾನ್ ಬೇಡಿಕೆಯ ನಟರಾಗಿದ್ದಾರೆ. ರೊಮ್ಯಾಂಟಿಕ್ ಹೀರೋ, ಮಾಸ್ ಹೀರೋ, ಸೀರಿಯಲ್ ಕೊಲೆಗಾರ, ಪೋಷಕ ನಟ ಯಾವುದೇ ಪಾತ್ರಕೊಟ್ಟರು ಲೀಲಾಜಾಲವಾಗಿ ಪಾತ್ರವೇ ಅವರಾಗುತ್ತಾ ಎಲ್ಲ ಭಾಷೆಯ ಪ್ರೇಕ್ಷಕರನ್ನು ರಂಜಿಸುತ್ತಲೇ ಸಾಗುತ್ತಿದ್ದಾರೆ. ಹಲವು ಭಾಷೆಗಳಲ್ಲಿ ಅತ್ಯುತ್ತಮ ಗೆಳೆಯರನ್ನು ಹೊಂದಿರುವ ದುಲ್ಕರ್, ಕನ್ನಡದಲ್ಲಿ ತಮಗೆ ಯಶ್ ಉತ್ತಮ ಗೆಳೆಯ ಎಂದಿದ್ದಾರೆ, ರಿಷಬ್ ಶೆಟ್ಟಿ (Rishab Shetty) ಸಹ ತಮಗೆ ಪರಿಚಯ ಎಂದಿರುವ ದುಲ್ಕರ್ ಕೆಲವು ವಿಷಯದಲ್ಲಿ ಯಶ್ (Yash) ಹಾಗೂ ರಿಷಬ್ ಒಂದೇ ರೀತಿ ಎಂದಿದ್ದಾರೆ.

ಅವರ ನಟನೆಯ ಹಿಂದಿ ವೆಬ್ ಸರಣಿ ‘ಗನ್ಸ್ ಆಂಡ್ ಗುಲಾಬ್ಸ್’ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗುತ್ತಿದ್ದು, ವೆಬ್ ಸರಣಿಯ ಪ್ರಚಾರಾರ್ಥ ಟಿವಿ9 ಗೆ ಸಂದರ್ಶನ ನೀಡಿರುವ ದುಲ್ಕರ್ ಸಲ್ಮಾನ್, ಯಶ್ ಹಾಗೂ ರಿಷಬ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ‘ಕುರುಪ್’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುವಾಗ ಯಶ್ ತಮಗೆ ಹಾಗೂ ತಮ್ಮ ತಂಡಕ್ಕೆ ಊಟ ಕಳಿಸಿದ್ದನ್ನು ನೆನಪಿಸಿಕೊಂಡ ದುಲ್ಕರ್, ಯಶ್ ಬಹಳ ಕೂಲ್ ಆದ ವ್ಯಕ್ತಿ ಅಷ್ಟೇ ಹೃದಯವೈಶಾಲ್ಯ ಇರುವ ವ್ಯಕ್ತಿ ಎಂದಿದ್ದಾರೆ.

ಇನ್ನು ರಿಷಬ್ ಬಗ್ಗೆ ಮಾತನಾಡುತ್ತಾ, ”ರಿಷಬ್, ಒಂದು ಸೀಮಿತ ಪ್ರದೇಶದ ಬಗ್ಗೆ, ಅಲ್ಲಿನ ಜನ, ಅವರ ಸಂಸ್ಕೃತಿ, ಆಚರಣೆಗಳ ಬಗ್ಗೆ ಸಿನಿಮಾ ಮಾಡಿ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದರು. ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಎಂದು ಪೂರ್ವಯೋಜನೆ ಹಾಕಿಕೊಂಡು ಅನವಶ್ಯಕ ಬಜೆಟ್ ಹಾಕಿ, ದೊಡ್ಡ ದೊಡ್ಡ ಸ್ಟಾರ್​ಗಳನ್ನು ತೆಗೆದುಕೊಂಡು ಮಾಡದೆ ಆ ಕತೆಗಷ್ಟೆ ಸೀಮಿತವಾಗಿ ಇದ್ದುಕೊಂಡು ಸಿನಿಮಾ ಮಾಡಿದ್ದು ಅದ್ಭುತ. ಒಂದು ಪ್ರದೇಶದ ಜನರ ಆಚರಣೆಯನ್ನು ವಿಶ್ವಕ್ಕೆ ಪರಿಚಯಿಸಿದರು. ಉತ್ತರ ಕೇರಳದವರಿಗೆ ದೈಯ್ಯಂ ಪರಿಚಯ ಇದೆ, ನಮಗೆ ಆ ಸಂಸ್ಕೃತಿ ತುಸು ಹತ್ತಿರ. ಉತ್ತರ ಭಾರತೀಯರಿಗೆ ಆ ಪರಿಚಯ ಇಲ್ಲದೇ ಇರಬಹುದು ಆದರೆ ಅವರಿಗೆ ಅದನ್ನು ತಲುಪಿಸುವ ಅದ್ಭುತ ಕೆಲಸವನ್ನು ಅವರು ಮಾಡಿದ್ದಾರೆ” ಎಂದರು.

ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಮನಸ್ಸಲ್ಲಿ ಹೇಳಿಕೊಳ್ಳಲಾಗದ ಸಂಕಟ; ಕಣ್ಣೀರು ಹಾಕುತ್ತಿರುವ ವಿಡಿಯೋ ಪೋಸ್ಟ್ ಮಾಡಿ, ಡಿಲೀಟ್ ಮಾಡಿದ ನಟ  

”ಅವರು ಬಹಳ ಹೃದಯ ವೈಶಾಲ್ಯತೆ ಇರುವ ವ್ಯಕ್ತಿ. ಅವರು ಎಲ್ಲ ಭಾಷೆಯನ್ನು ಎಷ್ಟು ಸುಲಭವಾಗಿ ಮಾತನಾಡುತ್ತಾರೆ ಎಂಬುದೇ ಆಶ್ಚರ್ಯ. ನಾವು ಒಂದು ರೌಂಡ್ ಟೇಬಲ್​ನಲ್ಲಿ ಕೂತಿದ್ದೆವು, ಅವರ ಹಿಂದಿ, ತಮಿಳು, ತೆಲುಗು ಎಲ್ಲ ಎಷ್ಟು ಚೆನ್ನಾಗಿದೆ. ಒಂದು ಭಾಷೆಯಿಂದ ಒಂದು ಭಾಷೆಗೆ ಟಕ್ಕನೆ ಬದಲಾಯಿಸಿಕೊಳ್ಳುತ್ತಾರೆ. ಮತ್ತು ಬಹಳ ಆತ್ಮೀಯವಾಗಿ ಬೆರೆಯುವ ವ್ಯಕ್ತಿ. ಯಶ್ ಹಾಗೂ ರಿಷಬ್ ಇಬ್ಬರೂ ಸಹ ಆತ್ಮೀಯ ಅನುಭವ ಕೊಡುವ ವ್ಯಕ್ತಿಗಳು ಆ ವಿಷಯದಲ್ಲಿ ಇಬ್ಬರೂ ಒಂದೇ. ಪರಸ್ಪರರ ಕೆಲಸದ ಬಗ್ಗೆ ಗೌರವ ಇರುವುದಕ್ಕೋ ಏನೋ ಅವರನ್ನು ಭೇಟಿಯಾದಗಲೇ ಪರಿಚಯ ಇದ್ದ ಅನುಭವ ಆಗುತ್ತದೆ” ಎಂದಿದ್ದಾರೆ ದುಲ್ಕರ್ ಸಲ್ಮಾನ್.

ದುಲ್ಕರ್ ಸಲ್ಮಾನ್ ನಟನೆಯ ‘ಗನ್ಸ್ ಆಂಡ್ ಗುಲಾಬ್ಸ್’ ವೆಬ್ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಆಗಸ್ಟ್ 18ರಂದು ಬಿಡುಗಡೆ ಆಗಲಿದೆ. 90ರ ದಶಕದ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ವೆಬ್ ಸರಣಿಯಲ್ಲಿ ಬಾಲಿವುಡ್​ನ ಸ್ಟಾರ್​ ನಟ ರಾಜ್​ಕುಮಾರ್ ರಾವ್, ಆದರ್ಶ್ ಗೌರವ್, ಬಾಲಿವುಡ್​ನಲ್ಲಿ ಹೆಸರಾಗಿರುವ ಕನ್ನಡಿಗ, ನಟ ಗುಲ್ಶನ್ ದೇವಯ್ಯ ಇನ್ನೂ ಹಲವರು ನಟಿಸಿದ್ದಾರೆ. ರಾಜ್ ಆಂಡ್ ಡಿಕೆ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ