Malaika Arora: ಮಾಜಿ ಗಂಡನನ್ನು ತಬ್ಬಿಕೊಂಡ ಮಲೈಕಾ ಅರೋರಾ; ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ನೆಟ್ಟಿಗರು

Malaika Arora Hugs Arbaaz Khan: ವಿಚ್ಛೇದನದ ಬಳಿಕ ಕೆಲವು ಮಾಜಿ ದಂಪತಿಗಳು ವೈರಿಗಳಂತೆ ವರ್ತಿಸುತ್ತಾರೆ. ಆದರೆ ಅರ್ಬಾಜ್​ ಖಾನ್​ ಮತ್ತು ಮಲೈಕಾ ಅರೋರಾ ಅವರು ಆ ರೀತಿ ಇಲ್ಲ.

Malaika Arora: ಮಾಜಿ ಗಂಡನನ್ನು ತಬ್ಬಿಕೊಂಡ ಮಲೈಕಾ ಅರೋರಾ; ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ನೆಟ್ಟಿಗರು
ಮಲೈಕಾ ಅರೋರಾ, ಅರ್ಬಾಜ್ ಖಾನ್
Follow us
ಮದನ್​ ಕುಮಾರ್​
|

Updated on: Jan 27, 2023 | 4:41 PM

ನಟಿ, ಡ್ಯಾನ್ಸರ್​ ಮಲೈಕಾ ಅರೋರಾ (Malaika Arora) ಅವರು ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಸಿನಿಮಾಗಳಿಗಿಂತಲೂ ಅವರು ಖಾಸಗಿ ಜೀವನದ ಕಾರಣಕ್ಕೆ ಸುದ್ದಿ ಆಗಿದ್ದೇ ಹೆಚ್ಚು. 49ರ ಪ್ರಾಯದ ಮಲೈಕಾ ಅರೋರಾ ಅವರಿಗೆ ಫಿಟ್ನೆಸ್​ ಬಗ್ಗೆ ಎಲ್ಲಿಲ್ಲದ ಕಾಳಜಿ. ಹಲವು ವರ್ಷಗಳ ಹಿಂದೆಯೇ ಅವರು ಪತಿ ಅರ್ಬಾಜ್​ ಖಾನ್​ಗೆ ವಿಚ್ಛೇದನ ನೀಡಿದರು. ಈ ಜೋಡಿಯ ಮಗನ ಹೆಸರು ಅರ್ಹಾನ್​ ಖಾನ್​. 20ರ ಹರೆಯದ ಅರ್ಹಾನ್​ (Arhaan Khan) ಈಗ ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಅಮೆರಿಕಗೆ ಕಳುಹಿಸಿಕೊಡಲು ವಿಮಾನ ನಿಲ್ದಾಣದವರೆಗೆ ಮಲೈಕಾ ಅರೋರಾ ಮತ್ತು ಅರ್ಬಾಜ್​ ಖಾನ್​ (Arbaaz Khan) ಬಂದಿದ್ದರು. ಆಗ ಅವರಿಬ್ಬರು ಪರಸ್ಪರ ತಬ್ಬಿಕೊಂಡಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ವಿಚ್ಛೇದನದ ಬಳಿಕ ಕೆಲವು ಮಾಜಿ ದಂಪತಿಗಳು ವೈರಿಗಳಂತೆ ವರ್ತಿಸುತ್ತಾರೆ. ಆದರೆ ಅರ್ಬಾಜ್​ ಖಾನ್​ ಮತ್ತು ಮಲೈಕಾ ಅರೋರಾ ಅವರು ಆ ರೀತಿ ಇಲ್ಲ. ಪುತ್ರನ ಸಲುವಾಗಿ ಅವರು ತಮ್ಮ ನಡುವಿನ ಆಪ್ತತೆಯನ್ನು ಉಳಿಸಿಕೊಂಡಿದ್ದಾರೆ. ಮಗನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ಬಳಿಕ ಮಲೈಕಾ ಅರೋರಾ ಮತ್ತು ಅರ್ಬಾಜ್​ ಖಾನ್​ ಅವರು ತಬ್ಬಿಕೊಂಡಿದ್ದಾರೆ. ಅವರಿಬ್ಬರ ನಡುವೆ ಉತ್ತಮ ಮನೋಭಾವ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಇದನ್ನೂ ಓದಿ
Image
ಮಲೈಕಾ ಅರೋರಾ ಪ್ರೆಗ್ನೆಂಟ್ ಎಂದು ಸುದ್ದಿ ಹಬ್ಬಿಸಿದವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಅರ್ಜುನ್ ಕಪೂರ್
Image
Malaika Arora: ನವ ದಂಪತಿ ನಯನತಾರಾ-ವಿಘ್ನೇಶ್​ ಶಿವನ್​ ನಡುವೆ ಮಲೈಕಾ ಅರೋರಾಗೆ ಏನು ಕೆಲಸ? ಫೋಟೋ ವೈರಲ್​
Image
ಅರ್ಜುನ್ ಕಪೂರ್​ಗಿಂತ 12 ವರ್ಷ ದೊಡ್ಡವರು ಮಲೈಕಾ; ನಟಿಯ ವಿಚ್ಛೇದನಕ್ಕೆ ಕಾರಣವಾಗಿದ್ದು ಅಫೇರ್?
Image
ಮಲೈಕಾ- ಅರ್ಜುನ್ ಮದುವೆಯ ಬಗ್ಗೆ ಜೋರಾಯ್ತು ಗಾಸಿಪ್; ರೂಮರ್​ಗಳಿಗೆ ನಟ ನೀಡಿದ ಉತ್ತರವೇನು?

‘ಇದಕ್ಕೆ ಪ್ರಭುದ್ಧತೆ ಎನ್ನುವುದು’ ಅಂತ ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಅವರಿಗೆ ವಿಚ್ಛೇದನ ಆಗಿದೆ. ಇಬ್ಬರೂ ತಮ್ಮ ತಮ್ಮ ಬದುಕಿನ ದಾರಿಯಲ್ಲಿ ಮುಂದೆ ಸಾಗಿದ್ದಾರೆ. ಆದರೂ ಕೂಡ ಮಗನ ಸಲುವಾಗಿ ಅವರು ಒಂದಾಗುತ್ತಾರೆ. ಅಗತ್ಯ ಇದ್ದಾಗಲೆಲ್ಲ ಮಗನಿಗಾಗಿ ಜೊತೆಯಾಗುತ್ತಾರೆ. ದ್ವೇಷಿಸುವವರು ಏನೇ ಹೇಳಬಹುದು. ಆದರೆ ಇವರಿಬ್ಬರು ಉತ್ತಮ ಪೋಷಕರು’ ಎಂಬ ಕಮೆಂಟ್​ ಸಹ ಬಂದಿದೆ.

ಮಲೈಕಾ ಅರೋರಾ ಹಾಗೂ ಅರ್ಬಾಜ್​ ಖಾನ್​ ಅವರು ಕಿತ್ತಾಡಿಕೊಂಡಿಲ್ಲ. ಒಬ್ಬರಿಗೊಬ್ಬರು ಗೌರವ ನೀಡುತ್ತಾರೆ. ಈ ಗುಣವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಗೌರವಯುತವಾಗಿ ನಡೆದುಕೊಳ್ಳುವುದನ್ನು ಇವರನ್ನು ನೋಡಿ ಕಲಿಯಬೇಕು ಎಂದು ಹಲವು ಅಭಿಮಾನಿಗಳು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅರ್ಬಾಜ್​ ಖಾನ್​ ಅವರಿಂದ ದೂರಾದ ಬಳಿಕ ಮಲೈಕಾ ಅರೋರಾ ಅವರು ಅರ್ಜುನ್​ ಕಪೂರ್ ಜೊತೆ ಡೇಟಿಂಗ್​ ಶುರು ಮಾಡಿಕೊಂಡರು.

ಅನೇಕ ಸಂದರ್ಭದಲ್ಲಿ ಅರ್ಜುನ್​ ಕಪೂರ್​ ಮತ್ತು ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರದಲ್ಲಿ ಈ ಜೋಡಿ ಯಾವುದೇ ನಿರ್ಧಾರ ತೆಗೆದುಕೊಂಡಂತಿಲ್ಲ. ಇಬ್ಬರು ನಡುವೆ ವಯಸ್ಸಿನ ಅಂತರ ಇದೆ. ಮಲೈಕಾಗಿಂತ ಅರ್ಜುನ್​ ಕಪೂರ್​ ಅವರು 12 ವರ್ಷ ಚಿಕ್ಕವರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್