AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತದಲ್ಲಿ ಮೊಳಗೋದು ಜೈ ಶ್ರೀರಾಮ್ ಮಾತ್ರ’; ಶಾರುಖ್ ನಟನೆಯ ಪಠಾಣ್​ ಚಿತ್ರಕ್ಕೆ ಕಂಗನಾ ತಿರುಗೇಟು

Kangana Ranaut: ‘ಬಾಕ್ಸ್ ಆಫೀಸ್​ ಗಳಿಕೆ ಮೇಲೆ ಒಂದು ಚಿತ್ರವನ್ನು ಅಳೆಯಬಾರದು’ ಎಂಬರ್ಥದಲ್ಲಿ ಕಂಗನಾ ಇತ್ತೀಚೆಗೆ ಮಾತನಾಡಿದ್ದರು. ಈಗ ಅವರು ನೇರವಾಗಿ ‘ಪಠಾಣ್​’ ಚಿತ್ರದ ಬಗ್ಗೆ ಕೊಂಕು ನುಡಿದಿದ್ದಾರೆ.

‘ಭಾರತದಲ್ಲಿ ಮೊಳಗೋದು ಜೈ ಶ್ರೀರಾಮ್ ಮಾತ್ರ’; ಶಾರುಖ್ ನಟನೆಯ ಪಠಾಣ್​ ಚಿತ್ರಕ್ಕೆ ಕಂಗನಾ ತಿರುಗೇಟು
ಶಾರುಖ್ ಖಾನ್ ಸಿನಿಮಾ ಬಗ್ಗೆ ಕೊಂಕು ತೆಗೆದ ಕಂಗನಾ
ರಾಜೇಶ್ ದುಗ್ಗುಮನೆ
|

Updated on:Jan 27, 2023 | 11:19 AM

Share

ಟ್ವಿಟರ್ ಖಾತೆ ರದ್ದಾದ ನಂತರದಲ್ಲಿ ಕಂಗನಾ ರಣಾವತ್​ಗೆ (Kangana Ranaut) ಕೈಕಟ್ಟಿ ಹಾಕಿದಂತಾಗಿತ್ತು. ಹೀಗಾಗಿ, ಅವರು ಇನ್​ಸ್ಟಾಗ್ರಾಮ್ ಬಳಕೆ ಮಾಡುತ್ತಿದ್ದರು. ತಮ್ಮ ಹತಾಶೆಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹೊರಹಾಕುತ್ತಿದ್ದರು. ಈಗ ಅವರಿಗೆ ಮರಳಿ ತಮ್ಮ ಟ್ವಿಟರ್ ಖಾತೆ ಸಿಕ್ಕಿದೆ. ಟ್ವಿಟರ್​ಗೆ ಮರಳಿದ ಬಳಿಕ ಅವರು ಹಾವಳಿ ಶುರುಹಚ್ಚಿಕೊಂಡಿದ್ದಾರೆ. ಈಗ ‘ಪಠಾಣ್​’ ಸಿನಿಮಾ (Pathan Movie) ಬಗ್ಗೆ ಅವರು ಕಿಡಿಕಾರಿದ್ದಾರೆ.

ಶಾರುಖ್ ಖಾನ್ ನಟನೆಯ ‘ಪಠಾಣ್​’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ ಬಂಗಾರದ ಬೆಳೆ ತೆಗೆಯುತ್ತಿದೆ. ಈ ಸಿನಿಮಾ ನೂರಾರು ಕೋಟಿ ಗಳಿಕೆ ಮಾಡಿ ಬೀಗುತ್ತಿದೆ. ‘ಬಾಕ್ಸ್ ಆಫೀಸ್​ ಗಳಿಕೆ ಮೇಲೆ ಒಂದು ಚಿತ್ರವನ್ನು ಅಳೆಯಬಾರದು’ ಎಂಬರ್ಥದಲ್ಲಿ ಕಂಗನಾ ಇತ್ತೀಚೆಗೆ ಮಾತನಾಡಿದ್ದರು. ಈಗ ಅವರು ನೇರವಾಗಿ ‘ಪಠಾಣ್​’ ಚಿತ್ರದ ಬಗ್ಗೆ ಕೊಂಕು ನುಡಿದಿದ್ದಾರೆ.

ಇದನ್ನೂ ಓದಿ
Image
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Image
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Image
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ಸರಣಿ ಟ್ವೀಟ್ ಮಾಡಿರುವ ಕಂಗನಾ, ‘ಪಠಾಣ್ ಸಿನಿಮಾ ದ್ವೇಷದ ಮೇಲೆ ಪ್ರೀತಿ ಸಾಧಿಸಿರುವ ಗೆಲುವು ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಆದರೆ ಯಾರ ದ್ವೇಷದ ಮೇಲೆ ಯಾರ ಪ್ರೀತಿ? ಯಾರು ಟಿಕೆಟ್‌ಗಳನ್ನು ಖರೀದಿಸಿ ಚಿತ್ರವನ್ನು ಯಶಸ್ವಿ ಮಾಡಿದ್ದು? ಭಾರತದ ಪ್ರೀತಿ ಚಿತ್ರವನ್ನು ಗೆಲ್ಲಿಸಿದೆ. ಅದರಲ್ಲಿ ಶೇ. 80ರಷ್ಟು ಹಿಂದುಗಳೇ ಇದ್ದಾರೆ’ ಎಂದು ಕಂಗನಾ ಹೇಳಿದ್ದಾರೆ.

‘ಶತ್ರುರಾಷ್ಟ್ರ ಪಾಕಿಸ್ತಾನ ಹಾಗೂ ಐಎಸ್​ಐ​ನ ಒಳ್ಳೆಯವರು ಎಂದು ತೋರಿಸಿದ ಸಿನಿಮಾ ಯಶಸ್ಸು ಕಾಣುತ್ತಿದೆ. ದ್ವೇಷವನ್ನು ಮೀರಿ ಭಾರತದ ಈ ಮನೋಭಾವವೇ ಅದನ್ನು ಮಹಾನ್ ಆಗಿ ಮಾಡಿದೆ. ದ್ವೇಷ ಮತ್ತು ಶತ್ರುಗಳ ಕ್ಷುಲ್ಲಕ ರಾಜಕೀಯವನ್ನು ಜಯಿಸಿದ್ದು ಭಾರತದ ಪ್ರೀತಿ. ಯಾರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೀರೋ ದಯವಿಟ್ಟು ಗಮನಿಸಿ ಪಠಾಣ್ ಒಂದು ಸಿನಿಮಾ ಆಗಲು ಮಾತ್ರ ಸಾಧ್ಯ. ಭಾರತದಲ್ಲಿ ಯಾವಾಗಲೂ ಮೊಳಗೋದು ಜೈ ಶ್ರೀರಾಂ ಮಾತ್ರ’ ಎಂದಿದ್ದಾರೆ ಅವರು.

ಇದನ್ನೂ ಓದಿ: Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ

‘ಭಾರತೀಯ ಮುಸ್ಲಿಮರು ದೇಶಭಕ್ತರು ಮತ್ತು ಅಫ್ಘಾನಿಸ್ತಾನದ ಪಠಾಣರಿಗಿಂತ ತುಂಬಾ ಭಿನ್ನರು ಎಂದು ನಾನು ನಂಬುತ್ತೇನೆ. ಮುಖ್ಯ ವಿಷಯವೆಂದರೆ ಭಾರತ ಎಂದಿಗೂ ಅಫ್ಘಾನಿಸ್ತಾನವಾಗುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಲ್ಲಿನ ಪರಿಸ್ಥಿತಿ ನರಕವನ್ನು ಮೀರಿದೆ. ಹೀಗಾಗಿ ಕಥೆಯ ಮೂಲಕ ಹೇಳೋದಾದರೆ ಇದು ಭಾರತದ ಪಠಾಣ್​’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:19 am, Fri, 27 January 23

ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ
ದಂಪತಿ ರೈಲಿನಿಂದ ಹಾರುವ ಮುನ್ನ ಇಬ್ಬರ ನಡುವೆ ರೈಲಿನಲ್ಲಿ ಏನಾಗಿತ್ತು ನೋಡಿ