Pathaan Beats KGF 2: ಮೊದಲ ದಿನ ‘ಕೆಜಿಎಫ್ 2’ ದಾಖಲೆ ಮುರಿದ ‘ಪಠಾಣ್’; ಶಾರುಖ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ
Pathaan First Day Box Office Collection: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ದೇಶಾದ್ಯಂತ ಈ ಚಿತ್ರದ ಸದ್ದು ಜೋರಾಗಿದೆ.
ಹಲವು ವರ್ಷಗಳಿಂದ ಸತತ ಸೋಲು ಕಂಡಿದ್ದ ಶಾರುಖ್ ಖಾನ್ (Shah Rukh Khan) ಅವರು ಈಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. ತಾವು ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ (Pathaan Movie) ಸಿನಿಮಾಗೆ ಮೊದಲ ದಿನ ನಿರೀಕ್ಷೆಗೂ ಮೀರಿ ಕಲೆಕ್ಷನ್ ಆಗಿದೆ. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಹೊಸ ಬಿರುಗಾಳಿ ಎದ್ದಿದೆ. ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ (KGF 2) ಚಿತ್ರದ ಹಿಂದಿ ವರ್ಷನ್ ಮೊದಲ ದಿನ ಮಾಡಿದ್ದ ದಾಖಲೆಯನ್ನು ಈಗ ‘ಪಠಾಣ್’ ಸಿನಿಮಾ ಮುರಿದಿದೆ. ‘ಪಠಾಣ್’ ಚಿತ್ರದ ಫಸ್ಟ್ ಡೇ ಬಾಕ್ಸ್ ಆಫೀಸ್ ಕಲೆಕ್ಷನ್ ಹೊರಬಿದ್ದಿದೆ. ಈ ಸಿನಿಮಾ ಬರೋಬ್ಬರಿ 55 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಧೂಳೆಬ್ಬಿಸಿದೆ.
ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದ ‘ಕೆಜಿಎಫ್ 2’ ಸಿನಿಮಾದ ಹಿಂದಿ ವರ್ಷನ್ಗೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿ ಬೀಗಿತ್ತು. ಈಗ ‘ಪಠಾಣ್’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ದೇಶಾದ್ಯಂತ ಈ ಚಿತ್ರದ ಸದ್ದು ಜೋರಾಗಿದೆ. ಶಾರುಖ್ ಖಾನ್ ಅವರು ಬಹುವರ್ಷಗಳ ಬಳಿಕ ಇಷ್ಟು ದೊಡ್ಡ ಗೆಲುವು ಪಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: Siddharth Anand: ಬಾಲಿವುಡ್ಗೆ 2023ರ ಮೊದಲ ಬ್ಲಾಕ್ ಬಸ್ಟರ್ ನೀಡಿದ ‘ಪಠಾಣ್’ ನಿರ್ದೇಶಕ ಸಿದ್ದಾರ್ಥ್ ಆನಂದ್
‘ಪಠಾಣ್’ ಸಿನಿಮಾದಿಂದ ಶಾರುಖ್ ಖಾನ್ ಅವರ ಹೊಸ ಇನ್ನಿಂಗ್ಸ್ ಶುರು ಆಗಿದೆ. ಅವರ ವೃತ್ತಿಜೀವನದ ಮೆರುಗು ಹೆಚ್ಚಿದೆ. ಇಂಥದ್ದೊಂದು ಮೆಗಾ ಹಿಟ್ ಪಡೆಯಲು ಅವರು ಕಾದಿದ್ದರು. ಅದು ‘ಪಠಾಣ್’ ಮೂಲಕ ಸಿಕ್ಕಿದೆ. ಶಾರುಖ್ ಖಾನ್ಗೆ ಜೋಡಿಯಾಗಿ ನಟಿಸಿದ ದೀಪಿಕಾ ಪಡುಕೋಣೆ ಅವರಿಗೂ ಈ ಚಿತ್ರದಿಂದ ಖ್ಯಾತಿ ಹೆಚ್ಚಾಗಿದೆ.
2023 STARTS WITH A BANG… ⭐️ Non-holiday ⭐️ Midweek release [Wed] Yet, #Pathaan embarks on a HISTORIC START… BIGGEST *DAY 1* EVER… East. West. North. South. #PathaanMania grips the nation… Wed ₹ 55 cr. #India biz. #Hindi version. #Tamil + #Telugu: ₹ 2 cr pic.twitter.com/hRoDS42wC4
— taran adarsh (@taran_adarsh) January 26, 2023
ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಹಿಂದಿ ಅವತರಣಿಕೆಯಿಂದ 55 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ತಮಿಳು ಮತ್ತು ತೆಲುಗು ವರ್ಷಗಳಿಂದ 2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬುಧವಾರ (ಜ.25) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕೇವಲ ಮಲ್ಟಿಪ್ಲೆಕ್ಸ್ಗಳಿಂದ ಈ ಸಿನಿಮಾ 20 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಒಟ್ಟು 55 ಕೋಟಿ ರೂಪಾಯಿ ಗಳಿಸುವ ಮೂಲಕ ಮೊದಲ ದಿನದ ಬಿಸ್ನೆಸ್ ಪೂರ್ಣಗೊಳಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:19 pm, Thu, 26 January 23