Pathaan Box Office Collection: ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಮೋಡಿ; ಬಂಗಾರದ ಬೆಳೆ ತೆಗೆದ ಶಾರುಖ್ ಖಾನ್ ಸಿನಿಮಾ
Pathaan First Day Box Office Collection: ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಇಷ್ಟು ದಿನ ಸೊರಗಿದ್ದ ಬಾಲಿವುಡ್ಗೆ ಈಗ ಹೊಸ ಕಳೆ ಬಂದಿದೆ.
ನಿರೀಕ್ಷೆಗೂ ಮೀರಿ ‘ಪಠಾಣ್’ ಸಿನಿಮಾ (Pathaan Movie) ಅಬ್ಬರಿಸಿದೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಜನವರಿ 25ರಂದು ತೆರೆಕಂಡ ಈ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ ‘ಪಠಾಣ್’ ಚಿತ್ರ ಧೂಳೆಬ್ಬಿಸಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ (Pathaan Box Office Collection) ದೃಷ್ಟಿಯಿಂದ ಈ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಒಂದು ಮೂಲದ ಪ್ರಕಾರ ಈ ಸಿನಿಮಾ ಮೊದಲ ದಿನ 50ರಿಂದ 51.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶಾರುಖ್ ಖಾನ್ (Shah Rukh Khan) ವೃತ್ತಿಜೀವನಕ್ಕೆ ‘ಪಠಾಣ್’ ಸಿನಿಮಾದ ಗೆಲುವಿನಿಂದಾಗಿ ದೊಡ್ಡ ಬೂಸ್ಟ್ ಸಿಕ್ಕಂತೆ ಆಗಿದೆ. ಎರಡನೇ ದಿನವಾದ ಇಂದು (ಜ.26) ಕೂಡ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
2018ರಲ್ಲಿ ತೆರೆಗೆ ಬಂದ ‘ಜೀರೋ’ ಸಿನಿಮಾದಿಂದ ಶಾರುಖ್ ಖಾನ್ ಅವರು ಹೀನಾಯವಾಗಿ ಸೋತಿದ್ದರು. ಆ ಬಳಿಕ ಅವರು ನಾಲ್ಕು ವರ್ಷ ಬ್ರೇಕ್ ತೆಗೆದುಕೊಂಡರು. ಅವರ ಕಮ್ಬ್ಯಾಕ್ ಸಿನಿಮಾವಾಗಿ ಮೂಡಿಬಂದ ‘ಪಠಾಣ್’ ಮೂಲಕ ಗೆಲುವು ಕಾಣುವುದು ತುಂಬ ಅನಿವಾರ್ಯವಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೈ ಹಿಡಿದಿದ್ದಾರೆ. ಫ್ಯಾನ್ಸ್ ವಲಯದಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಯಿ ಮಾತಿನ ಪ್ರಚಾರದಿಂದಾಗಿ ‘ಪಠಾಣ್’ ಚಿತ್ರಕ್ಕೆ ಜನಬೆಂಬಲ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Siddharth Anand: ಬಾಲಿವುಡ್ಗೆ 2023ರ ಮೊದಲ ಬ್ಲಾಕ್ ಬಸ್ಟರ್ ನೀಡಿದ ‘ಪಠಾಣ್’ ನಿರ್ದೇಶಕ ಸಿದ್ದಾರ್ಥ್ ಆನಂದ್
‘ಪಠಾಣ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಜೋಡಿಯಾಗಿ ನಟಿಸಿದ್ದಾರೆ. ಇದು ಅವರಿಬ್ಬರು ಒಟ್ಟಿಗೆ ಅಭಿನಯಿಸಿದ ನಾಲ್ಕನೇ ಸಿನಿಮಾ. ಈ ಹಿಂದೆ ಅವರು ತೆರೆ ಹಂಚಿಕೊಂಡಿದ್ದ ‘ಓಂ ಶಾಂತಿ ಓಂ’, ‘ಹ್ಯಾಪಿ ನ್ಯೂ ಇಯರ್’, ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಆ ಚಿತ್ರಗಳನ್ನು ಮೀರಿಸುವ ರೀತಿಯಲ್ಲಿ ‘ಪಠಾಣ್’ ಕಲೆಕ್ಷನ್ ಮಾಡುತ್ತಿದೆ.
ಇದನ್ನೂ ಓದಿ: Pathan Collection: ಮಧ್ಯಾಹ್ನ 3 ಗಂಟೆ ಒಳಗೆ ಅಚ್ಚರಿ ರೀತಿಯಲ್ಲಿ ಕಲೆಕ್ಷನ್ ಮಾಡಿದ ‘ಪಠಾಣ್’; ಇಲ್ಲಿದೆ ಪಕ್ಕಾ ಲೆಕ್ಕ
ಇಂದು (ಜನವರಿ 26) ಗಣರಾಜ್ಯೋತ್ಸವ ಆಗಿರುವುದರಿಂದ ರಜೆ ಇದೆ. ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಂದು ಕೂಡ ಭರ್ಜರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಕ್ಲಬ್ಗೆ ಈ ಸಿನಿಮಾ ಸೇರಲಿದೆ. ಇನ್ನು, ವೀಕೆಂಡ್ ದಿನಗಳಲ್ಲಿ ಕೂಡ ಸಿಕ್ಕಾಪಟ್ಟೆ ಕಮಾಯಿ ಆಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: Kangana Ranaut: ‘ಪಠಾಣ್’ ಸೂಪರ್ ಹಿಟ್; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ‘ವಾರ್’ ಚಿತ್ರ ಮಾಡಿ ಗೆದ್ದಿದ್ದ ಅವರು ಈಗ ‘ಪಠಾಣ್’ ಮೂಲಕ ಮತ್ತೊಂದು ಗೆಲುವು ಪಡೆದಿದ್ದಾರೆ. ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಇಷ್ಟು ದಿನ ಸೊರಗಿದ್ದ ಬಾಲಿವುಡ್ ಬಾಕ್ಸ್ ಆಫೀಸ್ಗೆ ಈಗ ಹೊಸ ಕಳೆ ಬಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:55 am, Thu, 26 January 23