Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

Pathaan Movie Twitter Review: ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ್ದಾರೆ. ಅವರು ಮಾಸ್ ಅವತಾರದಲ್ಲಿ ಮರಳಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯಸಿಕ್ಕಿತ್ತು. ಸಿನಿಮಾ ಕೂಡ ಅದೇ ರೀತಿ ಇದೆ.

Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Jan 25, 2023 | 11:47 AM

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ಇಂದು (ಜನವರಿ 25) ರಿಲೀಸ್ ಆಗಿದೆ. ಈ ಚಿತ್ರವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮುಂಜಾನೆಯಿಂದಲೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ‘ಪಠಾಣ್​’ ಚಿತ್ರವನ್ನು (Pathan Twitter Review) ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಶಾರುಖ್ ಖಾನ್ ಹಾಗೂ ಜಾನ್ ಅಬ್ರಾಹಂ ಅವರ ಮುಖಾಮುಖಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.

ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ್ದಾರೆ. ಅವರು ಮಾಸ್ ಅವತಾರದಲ್ಲಿ ಮರಳಿದ್ದಾರೆ ಎಂಬುದಕ್ಕೆ ಟ್ರೇಲರ್ ಸಾಕ್ಷ್ಯಸಿಕ್ಕಿತ್ತು. ಸಿನಿಮಾ ಕೂಡ ಅದೇ ರೀತಿ ಇದೆ. ಚಿತ್ರ ನೋಡಿದ ನೆಟ್ಟಿಗರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ
Image
Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ
Image
Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​
Image
Pooja Bhatt: ‘ಪ್ರತಿಭಟನೆಗೂ ಗಲಭೆಗೂ ವ್ಯತ್ಯಾಸವಿದೆ’: ‘ಪಠಾಣ್​’ ವಿರುದ್ಧ ಭಜರಂಗ ದಳದ ವರ್ತನೆಗೆ ಪೂಜಾ ಭಟ್​ ಖಂಡನೆ
Image
Shah Rukh Khan: ‘ಪಠಾಣ್​’ ಚಿತ್ರದಲ್ಲಿ ‘ಪ್ರಧಾನ ಮಂತ್ರಿ’ ಪದಕ್ಕೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; 13 ಕಡೆಗಳಲ್ಲಿ ಬದಲಾವಣೆ

‘ಪಠಾಣ್​ ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ. ಸಿದ್ದಾರ್ಥ್​ ಆನಂದ್ ಅವರ ನಿರೂಪಣೆ ಉತ್ತಮವಾಗಿದೆ. ಶಾರುಖ್ ಖಾನ್ ಅವರ ಪರ್ಫಾರ್ಮೆನ್ಸ್ ಅದ್ಭುತವಾಗಿದೆ. ಜಾನ್ ಅಬ್ರಾಹಂ ಹಾಗೂ ದೀಪಿಕಾ ಪಡುಕೋಣೆ ಅವರು ಉತ್ತಮ ನಟನೆ ತೋರಿದ್ದಾರೆ. ಹಲವು ಟ್ವಿಸ್ಟ್​​ಗಳಿವೆ. ಪಠಾಣ್​ ಎಂಟರ್​​ಟೇನಿಂಗ್ ಆಗಿದೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.

ಇದನ್ನೂ ಓದಿ: Pathaan: ‘ಪಠಾಣ್’ ಚಿತ್ರದಲ್ಲಿ ಡಿಲೀಟ್ ಆಗಿಲ್ಲ ಕೇಸರಿ ಬಿಕಿನಿ ದೃಶ್ಯ: ಶಾರುಖ್ ಚಿತ್ರದ ಮೊದಲಾರ್ಧ ಹೇಗಿದೆ?

‘ಒಂದೊಳ್ಳೆಯ ಸಿನಿಮಾ. ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಖಾನ್ ಅವರ ಬೆಸ್ಟ್​ ಸಿನಿಮಾ. ಜಾನ್ ಅಬ್ರಾಹಂ-ದೀಪಿಕಾ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದಾರೆ. ಕೆಲವು ಅತಿಥಿ ಪಾತ್ರಗಳು ಸರ್​​ಪ್ರೈಸಿಂಗ್ ಆಗಿವೆ. ನಂಬಲಾರದ ಕ್ಲೈಮ್ಯಾಕ್ಸ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರಿಗೆ ಸಿನಿಮಾ ಇಷ್ಟವಾಗಿಲ್ಲ. ಅದೇ ಹಳೆಯ ಕಥೆ, ಹಳೆಯ ಟೆಕ್ನಿಕ್ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:56 am, Wed, 25 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ