AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ

Pathaan Movie | Shah Rukh Khan: ಇದು ವಿಕಲಚೇತನರ ಹಕ್ಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ. ಈ ಸಂಬಂಧ ‘ಪಠಾಣ್​’ ಚಿತ್ರತಂಡಕ್ಕೆ ದೆಹಲಿ ಹೈಕೋರ್ಟ್​ ಒಂದಷ್ಟು ಸೂಚನೆಗಳನ್ನು ನೀಡಿದೆ.

Pathaan: ವಿಕಲಚೇತನ ಪ್ರೇಕ್ಷಕರಿಗಾಗಿ ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ, ಸಬ್​ಟೈಟಲ್​ ಅಳವಡಿಸಲು ಕೋರ್ಟ್​ ಸೂಚನೆ
‘ಪಠಾಣ್’ ಸಿನಿಮಾ ಪೋಸ್ಟರ್​
TV9 Web
| Edited By: |

Updated on:Jan 16, 2023 | 7:38 PM

Share

ನಟ ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಸಿನಿಮಾದ (Pathaan Movie) ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಜನವರಿ 25ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಸಿನಿಮಾಗೆ ಸೆನ್ಸಾರ್​ ಪ್ರಮಾಣಪತ್ರ ಕೂಡ ಸಿಕ್ಕಿದ್ದು, ಇನ್ನು ಯಾವುದೇ ಕೆಲಸಗಳು ಬಾಕಿ ಉಳಿದುಕೊಂಡಿಲ್ಲ. ಆದರೆ ಈ ಅಂತಿಮ ಹಂತದಲ್ಲಿ ದೆಹಲಿ ಹೈಕೋರ್ಟ್​ನಿಂದ (Delhi High Court) ಹೊಸ ಆದೇಶ ಬಂದಿದೆ. ‘ಪಠಾಣ್​’ ಚಿತ್ರಕ್ಕೆ ಆಡಿಯೋ ವಿವರಣೆ ಮತ್ತು ಹಿಂದಿ ಭಾಷೆಯ ಸಬ್​ಟೈಟಲ್​ ಅಳವಡಿಸುವಂತೆ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚನೆ ನೀಡಲಾಗಿದೆ. ವಿಕಲಚೇತನ (Persons with Disabilities) ಪ್ರೇಕ್ಷಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.

ಕಿವಿ ಕೇಳಿಸದ ಪ್ರೇಕ್ಷಕರು ಸಿನಿಮಾ ನೋಡುವಾಗ ಇಂಗ್ಲಿಷ್​ ಸಬ್​ಟೈಟಲ್​ ಬದಲು ಮೂಲ ಭಾಷೆಯಲ್ಲಿ ಸಬ್​ಟೈಟಲ್​ ಇದ್ದರೆ ಹೆಚ್ಚು ಅನುಕೂಲ ಆಗುತ್ತದೆ. ಅದೇ ರೀತಿ, ಕಣ್ಣು ಕಾಣಿಸದ ಪ್ರೇಕ್ಷಕರಿಗೆ ಆಡಿಯೋ ಡಿಸ್ಕ್ರಿಪ್ಷನ್​ ಇದ್ದರೆ ಸಿನಿಮಾವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ವಿಕಲಚೇತನರ ಹಕ್ಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿಲಾಗಿದೆ. ಈ ಸಂಬಂಧ ನಿರ್ಮಾಣ ಸಂಸ್ಥೆಯಾದ ‘ಯಶ್​ ರಾಜ್​ ಫಿಲ್ಮ್ಸ್​’ಗೆ ದೆಹಲಿ ಹೈಕೋರ್ಟ್​ ಈ ರೀತಿ ಆದೇಶ ನೀಡಿದೆ.

ಇದನ್ನೂ ಓದಿ: Shah Rukh Khan: ಭಾರತದಲ್ಲಿ ‘ಪಠಾಣ್​’ ಚಿತ್ರಕ್ಕೆ ವಿರೋಧ; ದುಬೈಗೆ ಹೋಗಿ ಸಿನಿಮಾ ಪ್ರಚಾರ ಮಾಡಿದ ಶಾರುಖ್​ ಖಾನ್​

ಇದನ್ನೂ ಓದಿ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Image
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Image
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಎಲ್ಲ ಸಿನಿಮಾಗಳಿಗೂ ಈ ರೀತಿ ಸಬ್​ಟೈಟಲ್​ ಮತ್ತು ಆಡಿಯೋ ಡಿಸ್ಕ್ರಿಪ್ಷನ್​ ಅಳವಡಿಸಬೇಕು ಎಂಬ ಆದೇಶವಿದೆ. ಆದರೆ ಅದನ್ನು ಯಾರೂ ಕೂಡ ಸರಿಯಾಗಿ ಪಾಲಿಸುತ್ತಿಲ್ಲ. ‘ಪಠಾಣ್​’ ಸಿನಿಮಾದ ಬಿಡುಗಡೆಯ ಹಿನ್ನೆಲೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಆದರೆ ಈ ಸಿನಿಮಾದ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಇರುವುದರಿಂದ ಚಿತ್ರಮಂದಿರದಲ್ಲಿ ಇಷ್ಟೆಲ್ಲ ಅಳವಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಬದಲು ಒಟಿಟಿ ವರ್ಷನ್​ನಲ್ಲಿ ಈ ಎಲ್ಲ ಸೂಚನೆಗಳನ್ನು ಪಾಲಿಸುವಂತೆ ಕೋರ್ಟ್​ ಸೂಚಿಸಿದೆ.

ಇದನ್ನೂ ಓದಿ: Shah Rukh Khan: ಎಷ್ಟೇ ವಿರೋಧ ಬಂದ್ರೂ ಜಗ್ಗದ ಶಾರುಖ್​ ಖಾನ್​; ‘ಪಠಾಣ್​’ ಟೈಟಲ್​ ಬದಲಾಗಬೇಕು ಎಂದವರಿಗೆ ಇಲ್ಲಿದೆ ಉತ್ತರ

ಏಪ್ರಿಲ್​ ತಿಂಗಳ ವೇಳೆಗೆ ‘ಪಠಾಣ್​’ ಸಿನಿಮಾ ಅಮೇಜಾನ್​ ಪ್ರೈಂ​ ವಿಡಿಯೋ ಮೂಲಕ ಒಟಿಟಿಗೆ ಬರುವ ಸಾಧ್ಯತೆ ಇದೆ. ಚಿತ್ರತಂಡದವರು ಇನ್ನೆರಡು ವಾರದಲ್ಲಿ ಆಡಿಯೋ ಡಿಸ್ಕ್ರಿಪ್ಷನ್​ ಮತ್ತು ಸಬ್​ಟೈಟಲ್​ ಸಿದ್ಧಪಡಿಸಿ ಫೆಬ್ರವರಿ 20ರೊಳಗೆ ಸೆನ್ಸಾರ್​ ಮಂಡಳಿಗೆ ಸಲ್ಲಿಸಬೇಕು ಎಂದು ಕೋರ್ಟ್​ ಆದೇಶಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:38 pm, Mon, 16 January 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ