AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​

Rakhi Sawant | Adil Khan: ನಟಿ ರಾಖಿ ಸಾವಂತ್​ ಜೊತೆಗಿನ ಮದುವೆ ವಿಷಯವನ್ನು ಆದಿಲ್​ ಖಾನ್​ ಇಷ್ಟು ದಿನಗಳ ಕಾಲ ಮುಚ್ಚಿಟ್ಟಿದ್ದರು. ಆದರೆ ಈಗ ಅವರು ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ.

Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
ರಾಖಿ ಸಾವಂತ್, ಆದಿಲ್ ಖಾನ್
TV9 Web
| Edited By: |

Updated on: Jan 16, 2023 | 4:24 PM

Share

ನಟಿ ರಾಖಿ ಸಾವಂತ್​ (Rakhi Sawant) ಅವರು ವೈಯಕ್ತಿಕ ಜೀವನದಲ್ಲಿ ಮಾಡಿಕೊಂಡ ಎಡವಟ್ಟುಗಳು ಒಂದೆರಡಲ್ಲ. ಈ ಹಿಂದೆ ಅವರು ರಿತೇಶ್​ ಎಂಬುವವರ ಜೊತೆ ಮದುವೆ ಆಗಿದ್ದರು. ಆದರೆ ಮೊದಲನೇ ಪತ್ನಿಗೆ ರಿತೇಶ್​ ವಿಚ್ಛೇದನ ನೀಡಿಲ್ಲದ ಕಾರಣ ರಾಖಿ ಜೊತೆಗಿನ ಅವರ ವಿವಾಹ (Rakhi Sawant Wedding) ಮಾನ್ಯವಾಗಲಿಲ್ಲ. ಕಳೆದ ವರ್ಷ ಆದಿಲ್​ ಖಾನ್​ ಜೊತೆ ರಾಖಿ ಸಾವಂತ್​ ಅವರು ಸೀಕ್ರೆಟ್​ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ವಿಚಾರ ಇತ್ತೀಚೆಗೆ ಬಯಲಾಗಿತ್ತು. ಆದರೆ ಮದುವೆ ಆಗಿದ್ದನ್ನು ಒಪ್ಪಿಕೊಳ್ಳಲು ಆದಿಲ್​ ಖಾನ್​ (Adil Khan) ಹಿಂದೇಟು ಹಾಕಿದ್ದರು. ಅದು ರಾಖಿಗೆ ಸಾಕಷ್ಟು ನೋವುಂಟು ಮಾಡಿತ್ತು. ಲೇಟಸ್ಟ್​ ನ್ಯೂಸ್​ ಏನೆಂದರೆ ಆದಿಲ್​ ಖಾನ್​ ಅವರು ರಾಖಿ ಜೊತೆಗೆ ಮದುವೆ ಆಗಿರುವುದಾಗಿ ಈಗ ಒಪ್ಪಿಕೊಂಡಿದ್ದಾರೆ. ಆ ಕುರಿತು ಅವರು ಮಾಡಿರುವ ಸೋಶಿಯಲ್​ ಮೀಡಿಯಾ ಪೋಸ್ಟ್​ ವೈರಲ್​ ಆಗಿದೆ.

ಎಲ್ಲವನ್ನೂ ಒಪ್ಪಿಕೊಂಡ ಆದಿಲ್​ ಖಾನ್​:

‘ಕೊನೆಗೂ ಇಲ್ಲೊಂದು ಅನೌನ್ಸ್​ಮೆಂಟ್​ ಇದೆ. ರಾಖಿಯನ್ನು ಮದುವೆ ಆಗಿಲ್ಲ ಅಂತ ನಾನು ಎಂದಿಗೂ ಹೇಳಿಲ್ಲ. ಕೆಲವು ವಿಷಯಗಳನ್ನು ನಿಭಾಯಿಸಬೇಕಿತ್ತು. ಹಾಗಾಗಿ ಮೌನವಾಗಿದ್ದೆ. ಮದುವೆಯ ಶುಭಾಶಯಗಳು ರಾಖಿ’ ಎಂದು ಆದಿಲ್​ ಖಾನ್​ ಪೋಸ್ಟ್​ ಮಾಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ರಾಖಿ ಸಾವಂತ್​ ಅವರು, ‘ಧನ್ಯವಾದಗಳು ಜಾನ್​.. ಲಾಟ್ಸ್​ ಆಫ್​ ಲವ್​’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್​

ಇದನ್ನೂ ಓದಿ
Image
ಖ್ಯಾತ ನಿರ್ಮಾಪಕನ ಜತೆ ಮದುವೆ ಆದ ಕಿರುತೆರೆ ನಟಿ ಮಹಾಲಕ್ಷ್ಮೀ; ‘ನಿಜವಾದ ವಿವಾಹವೇ?’ ಎಂದ ಫ್ಯಾನ್ಸ್
Image
ಯಾಕೆ ನೀನಿನ್ನೂ ಮದುವೆ ಆಗಿಲ್ಲ…ವಿಡಿಯೋ ಮೂಲಕ ಉತ್ತರ ಕೊಟ್ಟ ನಟಿ ರಮ್ಯಾ
Image
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Image
Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

ಕಣ್ಣೀರು ಹಾಕಿದ್ದ ರಾಖಿ ಸಾವಂತ್​:

ರಾಖಿ ಸಾವಂತ್​ ಅವರ ಮದುವೆಯ ಫೋಟೋಗಳು ವೈರಲ್​ ಆಗಿದ್ದರೂ ಕೂಡ ಆದಿಲ್​ ಮೌನವಾಗಿದ್ದರು. ಇದು ರಾಖಿಯ ಆತಂಕಕ್ಕೆ ಕಾರಣ ಆಗಿತ್ತು. ಈ ಮದುವೆಯೂ ದಾರಿ ತಪ್ಪಿ ಹೋಗುತ್ತದೆ ಎಂಬ ಭಯದಲ್ಲಿ ಅವರು ಕಣ್ಣೀರು ಹಾಕಿದ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಆದರೆ ಈಗ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: Rakhi Sawant: ರಾಖಿ ಸಾವಂತ್​ ಜೀವನ ಹಾಳು ಮಾಡಲು ಮಾಜಿ ಗಂಡನ ಪ್ಲ್ಯಾನ್​; ಪೊಲೀಸ್​ ಠಾಣೆ ಎದುರು ಬಿಕ್ಕಿ ಬಿಕ್ಕಿ ಅತ್ತ ನಟಿ

ಇಸ್ಲಾಂ ಧರ್ಮಕ್ಕೆ ಮತಾಂತರ ಆದ್ರಾ ರಾಕಿ ಸಾವಂತ್​?

ಪ್ರಿಯಕರ ಆದಿಲ್​ ಖಾನ್​ ಅವರ ಜೊತೆ 2022ರಲ್ಲಿ ತಮ್ಮ ಮದುವೆ ನೆರವೇರಿತ್ತು ಎಂಬ ವಿಷಯವನ್ನು ರಾಖಿ ಸಾವಂತ್​ ಇತ್ತೀಚೆಗೆ ಬಾಯಿಬಿಟ್ಟರು. ಅದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡರು. ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಅವರ ಮದುವೆ ನೋಂದಣಿ ಪತ್ರ ವೈರಲ್​ ಆಗಿದೆ. ಅದರಲ್ಲಿ ‘ರಾಖಿ ಸಾವಂತ್​ ಫಾತಿಮಾ’ ಎಂದು ರಾಖಿ ಸಹಿ ಮಾಡಿರುವುದು ಎಲ್ಲರ ಕಣ್ಣು ಕುಕ್ಕುತ್ತಿದೆ. ಮದುವೆ ನೋಂದಣಿ ಪತ್ರದಲ್ಲಿ ಹೆಸರು ಬದಲಾಗಿರುವುದರಿಂದ ರಾಖಿ ಸಾವಂತ್​ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್